ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿಚಾರವಾಗಿ ರಾಜ್ಯದ ಜನರಿಗೆ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹತ್ವದ ಸಂದೇಶ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅವರು ವಿಡಿಯೋ ಹಂಚಿಕೊಂಡಿರುವ ಅವರು, ಎಸ್‌ಐಆರ್‌ನಿಂದ ದೇಶದಲ್ಲಿ ಬಹುದೊಡ್ಡ ಬದಲಾವಣೆ ಆಗುತ್ತಿರುವುದನ್ನು ಎಲ್ಲರೂ ಗಮನಿಸಿದ್ದೀರಿ. ಇಡೀ ದೇಶ ಎಸ್‌ಐಆರ್ ಪದ್ಧತಿ ನೋಡಿ ತಲ್ಲಣಗೊಂಡಿದೆ. ನಾನು ಸಿಎಂ ಆಗಿ, ಪ್ರಜಾಸೇವಕನಾಗಿ ನಿಮ್ಮ ಮತವನ್ನ ಕಾಪಾಡಲು ಪ್ರಯತ್ನ ಮಾಡುತ್ತಿದ್ದೇನೆ. ಆದರೂ ಕೂಡ ಇದರಲ್ಲಿ ವಿಫಲನಾಗಿದ್ದೇನೆ. ಇದನ್ನು ನಾನು ಒಪ್ಪಿಕೊಳ್ಳಲೇಬೇಕು ಎಂದಿದ್ದಾರೆ
1 ಕೋಟಿಗೂ ಹೆಚ್ಚು ಮತ ಕಡಿಮೆ ಆಗಿರುವುದನ್ನು ಗಮನಿಸಿದ್ದೀರಿ. ಅದು ವಿವಿಧ ರೀತಿ ಆಗಿರಬಹುದು. 50 ಲಕ್ಷಕ್ಕೂ ಹೆಚ್ಚು ಜನರಿಗೆ ನೋಟಿಸ್ ಕೊಡುವ ಪದ್ಧತಿ ನಡೆಯುತ್ತಿದೆ. ಇದರ ಬಳಿಕ ಇನ್ನೂ 3 ದಿನದ ಒಳಗೆ ಅರ್ಜಿ ಕೊಡುವಂತಹ ಸಂದರ್ಭದಲ್ಲಿ ಕೆಲ ಬಿಜೆಪಿಯವರು, ಅವರ ನಾಯಕರ ನಿರ್ದೇಶನದ ಮೇರೆಗೆ ಅಲ್ಪಸಂಖ್ಯಾತರು, ದಲಿತರ ಮತವನ್ನ ತಗೆದಾಕಲು ಮುಂದಾಗಿದ್ದರೆ. ಇದಕ್ಕಾಗಿ ಫಾರ್ಮ್ 7ನ್ನು ಕೊಡುತ್ತಿದ್ದಾರೆ. ನಮ್ಮ ನಾಯಕರು ಕೂಡ ಇದರ ಬಗ್ಗೆ ದಾಖಲೆ ಕೊಟ್ಟಿದ್ದಾರೆ. ಈ ವಿಚಾರವಾಗಿ ಕ್ರಿಮಿನಲ್ ತನಿಖೆ ಬಹಳ ಅವಶ್ಯಕತೆ ಇದೆ.
ಇಂತಹ ಕೃತ್ಯವೆಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ರೀತಿ ತಪ್ಪು ಮಾಹಿತಿ ನೀಡಿ ನಾಗರಿಕರನ್ನು ಮತದಾರರ ಪಟ್ಟಿಯಿಂದ ದೂರವಿಡುವವರ ಬಗ್ಗೆ ಬಿಎಲ್ಎಗಳು ನನಗೆ ನಿಖರ ಮಾಹಿತಿ ನೀಡಬೇಕು. ದಯವಿಟ್ಟು ಈ ಮಾಹಿತಿಯನ್ನು dkshivakumarlistens@gmail.com ಗೆ ಕಳುಹಿಸಿ ಎಂದು ಮನವಿ ಮಾಡಿದ್ದಾರೆ.
