ಹಾಸನ : ಜಿಲ್ಲೆಯಲ್ಲಿ ಕಾಡಾನೆ ಮಾನವನ ಸಂಘರ್ಷ ಮುಂದುವರಿದಿದ್ದು, ಕಾಡಾನೆ ದಾಳಿಗೆ ತೋಟಕ್ಕೆ ಕೆಲಸಕ್ಕೆ ತೆರಳುತ್ತಿದ್ದ ಹಫೀಜ್ ಎಂಬುವವರ ಮೇಲೆ ಆನೆ ಏಕಾಏಕಿ ದಾಳಿ ನಡೆಸಿದ್ದು, ದಾಳಿ ತೀವ್ರತೆಗೆ ಹಫೀಜ್ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ ಎನ್ನಲಾಗಿದೆ ಈ ಘಟನೆ ಬೇಲೂರು ತಾಲೂಕಿನ, ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇನ್ನು ಮೃ*ದೇಹವನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬುಲೆನ್ಸ್ ತಡೆದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಪ್ರತಿಭಟನಕಾರರನ್ನ ನಿಯಂತ್ರಿಸಲು ಪೊಲೀಸರು ಸಾಹಸಪಟ್ಟು ಹೈರಾಣಾದ್ರು.
ಕಾಡಾನೆ ದಾಳಿಗೆ ಪದೇಪದೇ ಅಮಾಯಕ ಜೀವಗಳು ಬಲಿಯಾಗುತ್ತಿದ್ರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಅಂತಾ ಧರಣಿ ನಿರತರು ಆಕ್ರೋಶ ಹೊರ ಹಾಕಿದರು.
ನವೆಂಬರ್ 14 ರಂದು ದನ ಮೇಯಿಸಲು ತೆರಳಿದ್ದ ಜಯಮ್ಮ ಅನ್ನೋರನ್ನ ಆನೆ ತುಳಿದು ಉಸಿರು ನಿಲ್ಲಿಸಿತ್ತು. ಜನಪ್ರತಿನಿಧಿಗಳು ಪರಿಹಾರದ ಚೆಕ್ ವಿತರಿಸಿ, ಭರವಸೆ ಕೊಟ್ಟು ಹೋಗುತ್ತಿದ್ದಾರೆ. ಜಯಮ್ಮ ಸಾವಿಗೆ ಹೊಣೆ ಯಾರು, ಈ ಸಾವೇ ಕೊನೆಯಾಗಬೇಕು. ಇನ್ಮುಂದೆ ಕಾಡಾನೆ ದಾಳಿಯಿಂದ ಯಾರು ಸಾವನ್ನಪ್ಪಬಾರದು. ಆದ್ದರಿಂದ ಸ್ಥಳಕ್ಕೆ ಅರಣ್ಯ ಸಚಿವರು ಬರಬೇಕು, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಘೋಷಿಸಿ, ಎಲ್ಲಾ ಕಾಡಾನೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಪಟ್ಟು ಹಿಡಿದಿದ್ದಾರೆ.
