ಚಿಕ್ಕಮಗಳೂರು: ಭಾನುವಾರ ಚಿಕ್ಕಮಗಳೂರು ಪ್ರಾದೇಶಿಕ ವಲಯದ ಅಧಿಕಾರಿಗಳು ಮಾಗಡಿ ಹ್ಯಾಂಡ್ ಪೋಸ್ಟ್ ಸಮೀಪದ ರಾಜು ಅಲಿಯಾಸ್ ದೇವರಾಜು ಎಂಬುವವರ ಮನೆಯಲ್ಲಿ ಜಿಂಕೆ ಮಾಂಸ ಮಾರಾಟ ಮತ್ತು ಹಂಚಿಕೊಳ್ಳುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ದಾಳಿ ನಡೆಸಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.
ಸ್ಥಳದಲ್ಲಿ ಬೇಹಿಸಿದ ಜಿಂಕೆ ಮಾಂಸ ಹಾಗೂ ರಾಜು ಅಲಿಯಾಸ್ ದೇವರಾಜ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದಾಗ ಈ ಕಾಡು ಪ್ರಾಣಿಗಳ ಮಾಂಸವನ್ನು ನನಗೆ ಮಾರಾಟ ಮಾಡಿದ್ದು ಚಿಕ್ಕಮಗಳೂರು ನಗರದ ಟಿಪ್ಪುನಗರದ ವಾಸಿ ಕುಮಾರ್ ಪಿ ಎಂದು ತಿಳಿದುಬಂದಿದ್ದು ಇವರೆಲ್ಲಾ ಸೇರಿ ಜಿಂಕೆ ಮಾಂಸ ಮಾರಾಟ ದಂಧೆಯಲ್ಲಿ ತೊಡಗಿದ್ದರೂ ಎಂದು ತಿಳಿದುಬಂದಿದೆ.
ಕುಮಾರನನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ. ಈ ಜಿಂಕೆ ಮಾಂಸ ಸರಬರಾಜು ಮಾಡುತಿದ್ದ ಬೇಲೂರಿನ ಕಿಂಗ್ ಪಿನ್ ಅಲಿ ತಲೆಮರೆಸಿಕೊಂಡಿದ್ದಾನೆ,ಇನ್ನೋರ್ವ ಪ್ರಮುಖ ಆರೋಪಿ ಯೋಗಿ ಗೌಡ ಕರ್ತಿಕೆರೆ ಕೂಡ ತಲೆಮರೆಸಿಕೊಂಡಿದ್ದಾನೆ.
ಒಂದು ಕೆಜಿ ಬೇಹಿಸಿದ ಜಿಂಕೆ ಮಾಂಸ ವಶಕ್ಕೆ ಪಡೆದು ರಾಜು, ಕುಮಾರ್ ಪಿ ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ .
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಮಾರ್ಗದರ್ಶದಲ್ಲಿ ಕಾರ್ಯಾಚರಣೆ ನಡೆಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚರಣ್,ವಲಯ ಅರಣ್ಯಾಧಿಕಾರಿ ಹರೀಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ್, ದಿನೇಶ್,ನಾರಾಯಣ, ಪ್ರದೇಪ,ಮಂಜುನಾಥ್,ಪ್ರವೀಣ್ ಕಾರ್ಯಚರಣೆಯಲ್ಲಿ ಇದ್ದರು.
