Monday, February 9, 2026
Homeಕ್ರೈಮ್ಮೂಡಿಗೆರೆ: ತೋಟಗಾರಿಕೆ ಮಹಾವಿದ್ಯಾಲಯ ಗ್ರಂಥಾಲಯದಲ್ಲಿ ಪುಸ್ತಕಗಳ ಕೊರತೆ: ವಿದ್ಯಾರ್ಥಿಗಳಿಂದ ಹಣ ವಸೂಲಿ!

ಮೂಡಿಗೆರೆ: ತೋಟಗಾರಿಕೆ ಮಹಾವಿದ್ಯಾಲಯ ಗ್ರಂಥಾಲಯದಲ್ಲಿ ಪುಸ್ತಕಗಳ ಕೊರತೆ: ವಿದ್ಯಾರ್ಥಿಗಳಿಂದ ಹಣ ವಸೂಲಿ!

ಮೂಡಿಗೆರೆ: ನೆಪ ಮಾತ್ರಕ್ಕೆ ಗ್ರಂಥಾಲಯ ಇದೆ ಆದರೇ ದಿನಪತ್ರಿಕೆಗಳು ಇಲ್ಲಾ ಗ್ರಂಥಾಲಯ ಚಾರ್ಜ್ ವಸೂಲಿ ಮಾಡ್ತಾರೆ ಪ್ರಚಲಿತ ಸುದ್ದಿ ಓದುವ ಹಾಗಿಲ್ಲಾ ಇದು ಗ್ರಂಥಾಲಯದ ಪರಿಸ್ಥಿತಿ ಆಗಿದೆ.

ಹೌದು .. ಸರ್ಕಾರಿ ಗ್ರಂಥಾಲಯಗಳಿಗೆ ಸಾರ್ವಜನಿಕರು ಹೋಗುವುದು ಕಡಿಮೆ ಆದರೆ ಅಲ್ಲಿ ಎಲ್ಲಾ ಪತ್ರಿಕೆಗಳು ಮತ್ತು ಪುಸ್ತಕಗಳು ಲಭ್ಯ, ಆದರೆ ದೇಶ ವಿದೇಶದಿಂದ ಬಂದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕಾಲೇಜಿನ ಗ್ರಂಥಾಲಯದಲ್ಲಿ ಪ್ರಚಲಿತ ಸುದ್ದಿ ಮತ್ತು ಸಂಪಾದಕೀಯ ದೇಶದ ಆಗೂ ಹೋಗುಗಳ ಬಗ್ಗೆ ಅರಿವೆ ಇಲ್ಲದಂತಾಗಿದೆ ಮತ್ತು ಕೃಷಿಯ ಬಗ್ಗೆ ಜರ್ನಲ್ಸ್ ಎಂಬ ಪುಸ್ತಕಗಳು ಕಳೆದ ಆರು ತಿಂಗಳುಗಳಿಂದ ಗ್ರಂಥಾಲಯಗಳಿಗೆ ಬಾರದೆ ವಿದ್ಯಾರ್ಥಿಗಳಿಗೆ ಮೊಬೈಲ್ ಮೊರೆ ಹೋಗಬೇಕಾದ ಪರಿಸ್ಥಿತಿ ಒದಗಿ ಬಂದಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಹಾಗೆಂದು ಇದು ಬೇರೆಲ್ಲೂ ಅಲ್ಲಾ ಕೇಂದ್ರೀಯ ವಿದ್ಯಾಲಯಗಳಲ್ಲಿ ಒಂದಾದ ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಮಹಾವಿದ್ಯಾಲಯದಲ್ಲಿರುವ ಗ್ರಂಥಾಲಯದ ಕತೆ. ಈ ಮಹಾವಿದ್ಯಾಲಯದಲ್ಲಿ ಎಂಎಸ್‌ಸಿ ಮತ್ತು ಬಿಎಸ್‌ಸಿ ಓದಲು ದೇಶ ವಿದೇಶಗಳಿಂದ 350 ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲಿ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಮತ್ತು ಲೋಕಜ್ಞಾನ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಂಥಾಲಯವಿದ್ದು ಆದರೆ ಕಳೆದ ಆರು ತಿಂಗಳುಗಳಿಂದ ಈ ಗ್ರಂಥಾಲಯಗಳಿಗೆ ದಿನಪತ್ರಿಕೆಗಳು ಬರುತ್ತಿಲ್ಲಾ. ಪತ್ರಿಕಾ ಮಾರಾಟಗಾರರು ಈ ಗ್ರಂಥಾಲಯವನ್ನು ನಂಬಿ ಪತ್ರಿಕೆ ಮತ್ತು ಪುಸ್ತಗಳನ್ನು ತರಿಸಿ ಕೊಡುತ್ತಿದ್ದರು ಆದರೆ ಬಜೆಟ್ ಇಲ್ಲ ಎಂದು ಪತ್ರಿಕೆ ಮತ್ತು ಪುಸ್ತಕಗಳನ್ನು ತರಿಸುವುದನ್ನು ಬಿಟ್ಟಿದ್ದಾರೆ ಎಂದು ಪತ್ರಿಕಾ ವಿತರಕರು ತಮ್ಮ ಗೋಳನ್ನು ತೋಡಿಕೊಳ್ಳುತ್ತಿದ್ದಾರೆ.

ಕಳೆದ ಹಲವು ವರ್ಷಗಳಿಂದ ಈ ಗ್ರಂಥಾಲಯಕ್ಕೆ ಪತ್ರಿಕೆ ಮತ್ತು ಸಂಬಂಧ ಪಟ್ಟ ಪುಸ್ತಕಗಳನ್ನು ವಿತರಿಸುತ್ತಿದ್ದು ಆದರೆ ಕಳೆದ ಆರು ತಿಂಗಳಿನಿಂದ ಗ್ರಂಥಾಲಯಕ್ಕೆ ಬಜೆಟ್ ಇಲ್ಲಾ ಎಂದು ಹೇಳಿ ನಿಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.ಈ ಬಗ್ಗೆ ಕೆಲವು ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ನಮಗೆ ದೇಶದ, ರಾಜ್ಯದ ಆಗು ಹೋಗುಗಳ ಬಗ್ಗೆ ತಿಳಿಯದಾಗಿದೆ ಮತ್ತು ಸಂಪಾದಕೀಯದಂತ ಉತ್ತಮ ಲೇಖನಗಳಿಂದ ವಂಚಿತರಾಗಿದ್ದು ಮತ್ತು ಕೃಷಿಯ ಬಗ್ಗೆ ಜರ್ನಲ್ಸ್ ಎಂಬ ಪುಸ್ತಕಗಳು ಬಜೆಟ್ ಕೋತಾದಿಂದ ನಿಂತು ವರ್ಷಗಳೇ ಕಳೆಯುತ್ತಾ ಬಂದಿದೆ. ಮೊಬೈಲ್ ನಿಂದ ದೂರವಿರಬೇಕಾದ ನಾವು ಅನಿವಾರ್ಯವಾಗಿ ಮೊಬೈಲ್ ನ ಮೊರೆ ಹೋಗಭೇಕಾಗಿದೆ ಎಂದು ಉತ್ತರಿಸುತ್ತಿದ್ದಾರೆ.

ಗ್ರಂಥಾಲಯಕ್ಕೆ ವಿದ್ಯಾರ್ಥಿಗಳಿಂದ ಇಂತಿಷ್ಟು ಹಣ ಎಂದು ಕಲೆಕ್ಟ್ ಮಾಡುತ್ತಾರೆ ಆದರೆ ವಿದ್ಯಾರ್ಥಿಗಳಿಗೆ ಬೇಕಾದಂತಹ ಪುಸ್ತಕಗಳು ಮತ್ತು ಪತ್ರಿಕೆಗಳು ಇಲ್ಲವೆಂಬುದು ಬೇಸರದ ಸಂಗತಿಯಾಗಿದೆ.

ಯೂನಿವರ್ಸಿಟಿಯಲ್ಲಿ ಬಜೆಟ್ ಕೊಡದೆ ಇರುವ ಕಾರಣ ಕಳೆದ ಆರು ತಿಂಗಳಿನಿಂದ ಪತ್ರಿಕೆಗಳನ್ನು ನಿಲ್ಲಿಸಲಾಗಿದೆ. ಇನ್ನೂ ಬರುವ ಬಜೆಟ್ ಸಭೆಯಲ್ಲಿ ಚರ್ಚಿಸಿ ಪತ್ರಿಕೆ ತರಿಸಿಕೊಳ್ಳಲಾಗುವುದು. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಶ್ರೀನಿವಾಸ್ ಅವರು ಪಬ್ಲಿಕ್ ಇಂಪ್ಯಾಕ್ಟ್ ಗೆ ತಿಳಿಸಿರುತ್ತಾರೆ.

ವರದಿ :ಪುನೀತ್ ಕಡಿದಾಳು 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!