ಮೂಡಿಗೆರೆ : ಕಸಬಾ ಹೋಬಳಿ ದಾರದಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷರ ನಾಮನಿರ್ದೇಶನ ಸರ್ಕಾರಿ ಶಾಲಾ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು.
ರಾಜಕೀಯ ಪ್ರತಿಷ್ಠೆ ಗ್ರಾಮವಾದ ದಾರದಹಳ್ಳಿಯ ಪಂಚಾಯಿತಿ ಕೆಸವಳಲು ಗ್ರಾಮದ ಜನಸಾಮಾನ್ಯರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪರಿಶೀಷ್ಟ ಪಂಗಡ ಸಮುದಾಯಕ್ಕೆ ಸಿದ್ದೇಶ್ ಕೆಸವಳಲು ಯುವ ನಾಯಕ ಅಧ್ಯಕ್ಷರಾಗಿ ಇತಿಹಾಸ ಬರೆದರು.
ಹಾಗೆ ಮಾತನಾಡಿದ ಅವರು, , ಸಂಘದ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರು ಸೇರಿದಂತೆ ಇನ್ನೂ ಕೆಲ ಪ್ರಮುಖ ಪ್ರಭಾವಿಗಳು ಒಟ್ಟುಗೂಡಿ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಲು ಸಂಪೂರ್ಣ ಬೆಂಬಲ ನೀಡಿದ್ದು ಮುಂದಿನ ದಿನಗಳಲ್ಲಿ ಬ್ಯಾಂಕಿನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತೇನೆ ಎಂದರು
ಉಪಾಧ್ಯಕ್ಷೆ ಧಾರ್ಮಿಕ ದಿನೇಶ್ ಮಾತನಾಡಿ ಎಲ್ಲರ ಸಹಕಾರ ಮಾರ್ಗದರ್ಶನ ಪಡೆದು ನಮ್ಮ ಸಂಘದ ಏಳಿಗೆಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ ನೂತನ ಅಧ್ಯಕ್ಷ- ಉಪಾಧ್ಯಕ್ಷರಿಗೆ ಶುಭ ಹಾರೈಸಿ ರೈತರ ಅವಲುಗಳನ್ನು ಸ್ವೀಕರಿಸಿ ಯಾವುದೇ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸಲು ಕಿವಿ ಮಾತು ಹೇಳಿದರು.
ಗಣ್ಯರಾದ ಮಾಜಿ ಸಚಿವ ಬಿ ಬಿ. ನಿಂಗಯ್ಯ. ಡಿ. ಬಿ ಅಶೋಕ್ ಸೇರಿದಂತೆ ಅನೇಕರು ಶುಭ ಹಾರೈಸಿದರು ಅಭಿಮಾನಿಗಳು ಸ್ಥಳೀಯರು ಹೂ ಮಾಲೆ ಹಾಕಿ ಸಂಭ್ರಮಿಸಿ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ರಂಜನ್, ಕೃಷಿ ಪತ್ತಿನ ಮುಖ್ಯಧಿಕಾರಿ ಸಂಪತ್, ನಿರ್ದೇಶಕರಾದ ರಂಜಿತ್ ದಾರದಹಳ್ಳಿ, ವಿಕ್ರಂ, ದೀಪಕ್ ಕಡಿದಾಳ್, ರಂಜಿತ್ ಕೆಸವಳಲು, ಮಾಜಿ ಉಪಾಧ್ಯಕ್ಷೆ ಸುನಿತಾ, ಸೀನಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
