Monday, August 10, 2026
Homeಜಿಲ್ಲಾಸುದ್ದಿಮೂಡಿಗೆರೆ: ಬಿದರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವಿನಯ್ ಹಳೇಕೋಟೆ ಆಯ್ಕೆ

ಮೂಡಿಗೆರೆ: ಬಿದರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವಿನಯ್ ಹಳೇಕೋಟೆ ಆಯ್ಕೆ

Telegram Group
Join Now

ಮೂಡಿಗೆರೆ: ಬಿದರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ವಿನಯ್ ಹಳೇಕೋಟೆ. ಉಪಾಧ್ಯಕ್ಷರಾಗಿ ದಿನೇಶ್ ಬಾಳೆಹಳ್ಳಿ ಅವಿರೋಧವಾಗಿ ನೇಮಕ ಗೊಂಡರು

ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಹಾಗೂ ಮೊದಲ ಬಾರಿ ಅಧ್ಯಕ್ಷರಾದ ವಿನಯ್ ಹಳೇಕೋಟೆ ಮಾತನಾಡಿ, ಅಧಿಕಾರ ಎಂಬುದು ದೇವರ ಪ್ರಸಾದ ಎಲ್ಲರು ಹಂಚಿ ತಿನ್ನಬೇಕು.ಕೃಷಿ ಇಲ್ಲದ ದೇಶ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ ಭಾರತದ ಸ್ವಾತಂತ್ರ್ಯ ನಂತರ ಕೃಷಿಯನ್ನು ಅಭಿವೃದ್ಧಿಪಡಿಸಲು ಅನೇಕ ಸಹಕಾರ ಸಂಘಗಳನ್ನ ಸ್ಥಾಪಿಸಲಾಗಿದ್ದು ನನ್ನನ್ನು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳಿಗೆ ಅನಂತ ಅನಂತ ಧನ್ಯವಾದಗಳು ತಿಳಿಸಿದರು

ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ ಅನುಭವದೊಂದಿಗೆ ಜನಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಯಾಗಿ ಹಿರಿಯರ ಮಾರ್ಗದರ್ಶನ ಪಡೆದು ಸಂಸ್ಥೆಯ ಏಳಿಗೆಗಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ಯಾರ ವಿರೋಧವು ಇಲ್ಲದೇ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ್ದು ಖುಷಿ ತಂದಿದೆಯಾವುದೇ ಕ್ಷೇತ್ರದಲ್ಲಿ ಸಾಧಿಸಲು ಅಸಾಧ್ಯವಾದುದ್ದು ಯಾವುದು ಇಲ್ಲ ಸಾಧಿಸಲು ಕಠಿಣ ಪರಿಶ್ರಮ ಛಲ ಬೇಕು ಎಂದರು

ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅನೇಕ ಗಣ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಸ್ಥಳೀಯರು ಶುಭಹಾರೈಸಿದ್ದಾರೆ.

ಈ ಪದಗ್ರಹಣ ಕಾರ್ಯಕ್ರಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ನಾಗರಾಜ್, ನಿರ್ದೇಶಕರಾದ ಪ್ರಸನ್ನ ಮುಗ್ರಹಳ್ಳಿ. TAPCMS ಮೂಡಿಗೆರೆ ಅಧ್ಯಕ್ಷ ಕಲ್ಲೇಶ್, ನಿರ್ದೇಶಕರಾದ ವಿದ್ಯಾರಾಜು, ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ತರುವೆ, ಜಯಂತ್ ಬಿದರಹಳ್ಳಿ ರಾಘವೇಂದ್ರ ಹಳೇಕೋಟೆ, ಬಿದರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರು ನಿರ್ದೇಶಕರು ಸೇರಿದಂತೆ ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments