Saturday, February 7, 2026
Homebig breakingಮೂಡಿಗೆರೆ: 30 ಕೋಟಿ ವೆಚ್ಚದಲ್ಲಿ ಸ್ಪೈಸ್ ಪಾರ್ಕ್ ಯೋಜನೆ ಸಿದ್ಧತೆ!

ಮೂಡಿಗೆರೆ: 30 ಕೋಟಿ ವೆಚ್ಚದಲ್ಲಿ ಸ್ಪೈಸ್ ಪಾರ್ಕ್ ಯೋಜನೆ ಸಿದ್ಧತೆ!

ಮೂಡಿಗೆರೆ :ಚಿಕ್ಕಮಗಳೂರು, ಹಾಸನ,ಹಾವೇರಿ,ಶಿವಮೊಗ್ಗ, ಕೊಡಗು ಜಿಲ್ಲೆಯ ಸಾಂಬರು ಬೆಳೆಗಾರರ ಹಲವು ದಶಕಗಳ ಬೇಡಿಕೆ ಸ್ಪೈಸ್ ಪಾರ್ಕ್ ಮುಂದಿನ ವರ್ಷದಲ್ಲಿ ಪ್ರಾರಂಭವಾಗುವ ಸಿದ್ದತೆ ನಡೆದಿದೆ. ಅಂದಾಜು 30 ಕೋಟಿದು ವೆಚ್ಚದಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಒಂಬತ್ತು ಎಕರೆ ಪ್ರದೇಶದಲ್ಲಿ ಸ್ಪೈಸ್ ಪಾರ್ಕ್ ತಲೆ ಎತ್ತಲಿದೆ. ಈ ಮಹತ್ವದ ನಿರ್ಧಾರದಿಂದಾಗಿ ರಾಜ್ಯದ ಸಾಂಬಾರ ಬೆಳೆಗಾರರಿಗೆ ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿ ಸಿಗಲಿದೆ ಹೆಚ್ಚಿನ ಲಾಭಗಳಿಸಲು ದಾರಿಯಾಗಲಿದೆ

ಉದ್ದೇಶಿತ  ಸಾವಿರಾರು ಕೋಟಿ ವಹಿವಾಟು ನಡೆಯುವ ಶ್ರೀಮಂತ ಬೆಳೆಗಳಾದ ಏಲಕ್ಕಿ,ಕಾಳು ಮೆಣಸು, ಲವಂಗ, ಅರಿಶಿನ, ಮೆಣಸಿನಕಾಯಿ, ಶುಂಠಿ, ಜಾಯಿಕಾಯಿ ಸೇರಿದಂತೆ ಸಾಂಬಾರು ಮಂಡಳಿ ವ್ಯಾಪ್ತಿಗೆ ಬರುವ 56 ವಾಣಿಜ್ಯ ಬೆಳೆಗಳಲ್ಲಿ ಸುಮಾರು 22 ಬೆಳೆಗಳ ಏಲಂ ಇಲ್ಲಿ ನಡೆಯಲಿದೆ.

ಉದ್ದೇಶಿತ  ಸ್ಪೈಸ್ ಪಾರ್ಕ್ ನಲ್ಲಿ ವಾಣಿಜ್ಯ ಬೆಳೆಗಳ ಸಂಗ್ರಹಣೆ,ಸಂಸ್ಕರಣೆ, ರಫ್ತು ಮತ್ತು ಹರಾಜು ನಡೆಯಲಿದೆ. ಹುಬ್ಬಳ್ಳಿಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ಕರ್ನಾಟಕ ಸ್ಟೇಟ್ ಸ್ಪೈಸಸ್ ಡೆವಲಪ್ಮೆಂಟ್ ಬೋರ್ಡ್ ಒಂದು ಸ್ವಾಯತ್ತತ ಸಂಸ್ಥೆ.

ಮೂಡಿಗೆರೆಯಲ್ಲಿಸ್ಥಾಪಿಸಲಿರುವ ಸ್ಪೈಸಸ್ ಪಾರ್ಕ್ಅಂದಾಜು 30 ಕೋಟಿ ವೆಚ್ಚದಲ್ಲಿ ವಿನ್ಯಾಸ ಮತ್ತು ಮೂಲಸೌಲಭ್ಯಗಳ ಅಭಿವೃದ್ಧಿ ಯೋಜನೆ ರೂಪಿಸಲು ಐಡೆಕ್ ಸಂಸ್ಥೆಗೆ ಜವಾಬ್ದಾರಿ ವಹಿಸಿದೆ.
ವಿನ್ಯಾಸ ಮತ್ತು ಯೋಜನೆ ರೂಪಿಸಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಆರ್ಥಿಕ ನೆರವಿನಲ್ಲಿ ಸ್ಪೈಸಸ್ ಪಾರ್ಕ್ ಸಾರ್ವಜನಿಕ ಮತ್ತು ಖಾಸಗಿ(PPP) ಸಹಭಾಗಿತ್ವದಲ್ಲಿಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.
ಕುಮಾರಿ ಶೋಭ ಕಾರಂದ್ಲಜೆ ಕೇಂದ್ರ ಕೃಷಿ ಮಂತ್ರಿಗಳಾಗಿದ್ದಾಗ ಶ್ರೀಮತಿ ನಿರ್ಮಲ ಸೀತಾರಾಂ ಚಿಕ್ಕಮಗಳೂರಿನಲ್ಲಿ ಸ್ಪೈಸ್ ಪಾರ್ಕ್ ಮಾಡುವ ಬಗ್ಗೆ ಭರವಸೆ ನೀಡಿದ್ದರು.


ಚಿಕ್ಕಮಗಳೂರಿನ ಅಂಬಳೆಯಲ್ಲಿ ಜಾಗ ಗುರುತಿಸಿದ್ದರು. ನಂತರ ಅದು ನೆನೆಗುದಿಗೆ ಬಿದ್ದು. ಜಿಲ್ಲಾಧಿಕಾರಿ ಶ್ರೀಮತಿ ಮೀನಾ ನಾಗರಾಜ್ ಮೂಡಿಗೆರೆಯಲ್ಲಿ ಸೂಕ್ತ ಜಾಗ ಗುರುತಿಸಿ ಮಂಜೂರು ಮಾಡಿದ್ದಾರೆ.


ರಾಜ್ಯ ಸ್ಪೈಸಸ್ ಬೋರ್ಡ್ ಅಧಿಕಾರಿಗಳು ಪಾರ್ಕ್ ರಚಿಸುವ ಬಗ್ಗೆ ಸಿದ್ದತೆ ನಡೆಸಿದ್ದಾರೆ. ಈಗ ರಾಜ್ಯದ ಬೆಳೆಗಾರರು ಹರಾಜು, ಮಾರಾಟ ಮತ್ತು ರಫ್ತಿಗೆ ಕೊಚ್ಚಿ ಸ್ಪೈಸಸ್ ಬೋರ್ಡ್ ಮೇಲೆ ಅವಲಂಬಿತರಾಗಿದ್ದಾರೆ.
ಸ್ಪೈಸಸ್ ಪಾರ್ಕ್ ಪ್ರಾರಂಭವಾದರೆ ಹೊಸ ಉದ್ಯೋಗ ಸೃಷ್ಟಿಯೊಂದಿಗೆ ಜಿಲ್ಲೆಯ ಪ್ರವಾಸೋದ್ಯಮ ಮತ್ತು ವಾಣಿಜ್ಯ ವಹಿವಾಟು ಇನ್ನಷ್ಟು ಚೇತರಿಸಿ ಕೊಳ್ಳಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!