ಮೂಡಿಗೆರೆ: ತಾಲೂಕಿನ ಹಕ್ಕೆರುದ್ದಿ ಗ್ರಾಮದಲ್ಲಿ ಗ್ರಾಮಸ್ಥರ ಸಹಯೋಗದಲ್ಲಿ ಭಾನುವಾರ ಹಳ್ಳಿಕಪ್ ಕ್ರಿಕೆಟ್ ಕ್ರೀಡಾಕೂಟ ಆಯೋಜಿಸಲಾಯಿತು

ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ದಿಲೀಪ್, ಗ್ರಾಮೀಣ ಭಾಗದಲ್ಲಿ ಯುವಕರನ್ನು ಸಂಘಟಿಸಿ ಸೌಹಾರ್ದತೆ ಬೆಳೆಸಲು ಗ್ರಾಮೀಣ ಕ್ರೀಡೆಗಳು ಸಹಕಾರಿಯಾಗಿದ್ದು, ಇಂತಹ ಕ್ರೀಡೆಗಳಿಗೆ ಉತ್ತೇಜನ ನೀಡುವ ಅವಶ್ಯಕತೆಯಿದೆ ಎಂದು ಹೇಳಿದರು.
ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಇನ್ನಷ್ಟು ಸಾಧನೆ ಮಾಡಲು ಸ್ಥಳೀಯ ಕ್ರೀಡಾಕೂಟಗಳಿಂದ ಪ್ರೋತ್ಸಾಹ ಸಿಗುತ್ತದೆ.
ಆಟಗಾರರ ಮನೋಸ್ಥೈರ್ಯ ಹೆಚ್ಚಿಸುವುದರ ಜೊತೆಗೆ ಕ್ರೀಡಾ ಮನೋಭಾವನೆ ವೃದ್ಧಿಸುತ್ತವೆ ಜೊತೆಗೆ ಗ್ರಾಮೀಣ ಯುವಕರ ಒಗ್ಗಟ್ಟು ಹೆಚ್ಚಿಸುತ್ತದೆ ಎಂದರು.
.
ಈ ಕ್ರೀಡಾಕೂಟಕ್ಕೆ ಬಹುಮಾನ ದಾನಿಗಳು ಹಾಗೂ ಯುವಕರನ್ನು ಒಗ್ಗೂಡಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ ಎಲ್ಲಾ ತಂಡದ ಮಾಲೀಕರಾದ ಅಜಿತ್ ಗೌಡ ಕುಂಬರಡಿ, ಕಾರ್ತಿಕ್ ಬಿಳ್ಳೂರ್, ಸುರಕ್ಷಿತ್ ಕುಂಬರಡಿ, ಬ್ರಿಜೆಶ್ ಕೆಸವಳಲು, ರವಿ ಬಾಳೆಗದ್ದೆ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ್ರಿಡಾಕೂಟದಲ್ಲಿ ಒಟ್ಟು 5 ತಂಡಗಳು ಭಾಗವಹಿಸಿ ಪ್ರಥಮ ಸ್ಥಾನ ಫ್ಲೈಯಿಂಗ್ ಬರ್ಡ್ಸ್ ದ್ವಿತೀಯ ಸ್ಥಾನ ಫ್ರೆಂಡ್ಸ್ ಬಿಳ್ಳೂರು ತಂಡಗಳು ಬಹುಮಾನ ಪಡೆದವು. ಫ್ಲೈಯಿಂಗ್ ಬರ್ಡ್ಸ್ ತಂಡದ ಆಟಗಾರರಾದ ತಂಡದ ಮಾಲೀಕ ಸುರಕ್ಷಿತ್ ಕುಂಬರಡಿ, ನಾಯಕ ದಿಲೀಪ್ ದೇವರುಂದ, ಬುಲ್ಲಿ ಮೋಹನ್ ಊರುಬಗೆ, ಪುನೀತ್ ಕಡಿದಾಳು, ದಿಲೀಪ್ ಬೆಂಗಳೂರು, ಸಂತೋಷ್ ಕೆಂಚನ್, ಪುನೀತ್ ಪಟಾಣ್, ರಾಜಕುಮಾರ್, ಆಕಾಶ್ ಹಾಸನ, ಆಕಾಶ್ ಬೈದುವಳ್ಳಿ, ರಘು ಬಾಳೆಗದ್ದೆ, ಚಂದ್ರು ಬಾಳೆಗದ್ದೆ ಇವರಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು
ಕ್ರೀಡಾಕೂಟದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ರಘು ಸರಣಿ ಶ್ರೇಷ್ಠ ಪ್ರಶಸ್ತಿ ಮೋಹನ್ ಬುಲ್ಲಿ ಬೆಸ್ಟ್ ಬ್ಯಾಟ್ಸಮ್ಯಾನ್ ಸದಾ ಕಟ್ಟರ್ ಬೆಸ್ಟ್ ಬೌಲರ್ ಪ್ರಸನ್ನ ಹೊಸಕೆರೆ ಬೆಸ್ಟ್ ಫಿಲ್ಡರ್ ಪವನ್ ಬಿಳ್ಳೂರು ಬೆಸ್ಟ್ ಕೀಪರ್ ದಿಲೀಪ್ ಬೆಂಗಳೂರು ಹೊರಹೊಮ್ಮಿದರು.
ಕ್ರೀಡಾಕೂಟದ ತೀರ್ಪುಗಾರರಾಗಿ ಮದನ್ ಗೌಡ ಗೋಣಿಬೀಡು, ಮಧು ಗೌಡ ಕಣಚೂರು ನಡೆಸಿಕೊಟ್ಟರು
ಪಂದ್ಯಕೂಟದ ಬೆಸ್ಟ್ ಸಿಕ್ಸರ್ ಬಹುಮಾನವನ್ನು ಅಶ್ವಿನ್ ಮಾಕೋನಹಳ್ಳಿ ದಾನಿಗಳಾಗಿ ನೀಡಿದರು.
ಈ ಸಂದರ್ಭದಲ್ಲಿ ಹಳ್ಳಿಕಪ್ ಕ್ರೀಡಾಕೂಟ ಆಯೋಜಕರು ಹಾಗೂ ಗ್ರಾಮಸ್ಥರು
ಸೇರಿದಂತೆ ಕ್ರೀಡಾ ಪಟುಗಳು, ಕ್ರೀಡಾ ಅಭಿಮಾನಿಗಳು, ದೇವರುಂದ ಗ್ರಾಮಸ್ಥರು ಇದ್ದರು
ವರದಿ :ಪುನೀತ್ ಕಡಿದಾಳು
9483811948
