Sunday, July 12, 2026
Homeಆಧ್ಯಾತ್ಮಮೂಡಿಗೆರೆ :ಮಂಗಳವಾರದಿಂದ ಹೊಯ್ಸಳಲು ಶ್ರೀಮಾರಿಯಮ್ಮ ದೇವಿ ಜಾತ್ರಾ ಮಹೋತ್ಸವ

ಮೂಡಿಗೆರೆ :ಮಂಗಳವಾರದಿಂದ ಹೊಯ್ಸಳಲು ಶ್ರೀಮಾರಿಯಮ್ಮ ದೇವಿ ಜಾತ್ರಾ ಮಹೋತ್ಸವ

Telegram Group
Join Now

ಮೂಡಿಗೆರೆ: ತಾಲೂಕಿನ ಪುರಾಣ ಪ್ರಸಿದ್ಧ ಹೊಯ್ಸಳಲು ಮಾರಿಯಮ್ಮ ದೇವಿಯ ಪುಣ್ಯ ಕ್ಷೇತ್ರದಲ್ಲಿ ಫೆಬ್ರುವರಿ 24ರಿಂದ 26ರವರೆಗೆ ಬೃಹತ್ ಜಾತ್ರಾ ಮಹೋತ್ಸವ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ.

ಶ್ರೀಕ್ಷೇತ್ರದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಮಾರಿಯಮ್ಮ ದೇವಸ್ಥಾನದಲ್ಲಿ ಮಂಗಳವಾರ ನಂದಿ ಕಟ್ಟುವುದು, ರಾತ್ರಿ ಸುಗ್ಗಿ, ಕೆಂಡದ ಪೂಜೆ,ನಡೆಯಲಿದ್ದು ದಿನಾಂಕ 25 ಬುಧವಾರ ದಂದು ಕೇಂಡೋತ್ಸವ, ಹಗಲು ಸುಗ್ಗಿ ಮಹಾ ಮಂಗಳಾರತಿ,ಬಲಿ ಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಲಿದ್ದು, ಪ್ರಮುಖವಾಗಿ ಕೊನೆಯ ದಿನವಾದ ಗುರುವಾರದಂದು ಕಾಳೇಶ್ವರ ದೇವಾಲಯದ ಆವರಣದಲ್ಲಿ ಮಧ್ಯಾಹ್ನದ ನಂತರ ಹಗಲು ಸುಗ್ಗಿ ಕಾರ್ಯಕ್ರಮ ಮಹೋತ್ಸವವನ್ನು ಆಯೋಜಿಸಲಾಗಿದೆ.

ಸರ್ವರಿಗೂ ಆದರದ ಸ್ವಾಗತ ಬಯಸುತ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಯಿಯ ಕೃಪೆಗೆ ಪಾತ್ರರಾಗಿ ತಾಯಿ ಆಶೀರ್ವಾದ ಪಡೆಯುವಂತೆ ಶ್ರೀ ಮಾರಿಯಮ್ಮ ದೇವಿ ಜಾತ್ರ ಮಹೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹೊಯ್ಸಳಲು ಗ್ರಾಮದ ಸಕಲ ಗ್ರಾಮಸ್ಥರು ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments