ಮೂಡಿಗೆರೆ:ಜಾತಿ ಸಮೀಕ್ಷೆಯಂತೆ ಬಡತನ ಸಮೀಕ್ಷೆ ನಡೆಸಿ ಬಡವರಿಗೆ ಸರ್ಕಾರ ಆಸರೆಯಾಗಬೇಕು ಎಂದು ಯುವ ಮುಖಂಡ ನೂತನ್ ಬೆಟ್ಟಗೆರೆ ತಿಳಿಸಿದ್ದಾರೆ.

ಹೌದು .. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಭಾಗವಾಗಿ ಸರ್ಕಾರವು ಜಾತಿ ಸಮೀಕ್ಷೆ ನಡೆಸಲು ನಿರ್ಧರಿಸಿದ್ದು, ಮನೆಮನೆಗೆ ತೆರಳಿ ನಾಗರಿಕರ ಜಾತಿಯನ್ನು ದಾಖಲಿಸಿಕೊಳ್ಳುವ ಕೆಲಸ ನಡೆಯುತ್ತಿದೆ, ಜಾತಿ ವ್ಯವಸ್ಥೆಯು ಭಾರತದ ಪ್ರಾಚೀನ ಚತುರ್ವರ್ಣ ವ್ಯವಸ್ಥೆಯನ್ನು ಆಧರಿಸಿದೆ.
ಇದು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಗಗಳನ್ನು ಒಳಗೊಂಡಿದೆ ಹಿಂದೆ ವ್ಯಕ್ತಿಯ ವೃತ್ತಿ ಮತ್ತು ಸ್ಥಾನಮಾನವನ್ನು ಆದರಿಸಿ ಜಾತಿ ವ್ಯವಸ್ಥೆಯನ್ನು ಅಳತೆಗೋಲಾಗಿ ಬಳಸಲು ಪ್ರಾರಂಭಿಸಲಾಯಿತು,
ಒಂದೊಂದು ವೃತ್ತಿಯಲ್ಲಿ ಕೆಲಸ ಮಾಡುವವರನ್ನು ಒಂದೊಂದು ನಿರ್ದಿಷ್ಟ ಜಾತಿಗೆ ಸೀಮಿತಗೊಳಿಸಲಾಯಿತು.ನಂತರ ಅದು ವಂಶಪಾರಂಪರ್ಯವಾಗಿ ಮುಂದುವರೆಯಿತು.

ಇದು ಬ್ರಿಟಿಷರ ಆಡಳಿತದ ಅವಧಿಯಲ್ಲಿ ಇನ್ನಷ್ಟು ಗಟ್ಟಿಯಾಗಿ ನಿಂತಿತು, ಬದಲಾದ ಕಾಲಘಟ್ಟದಲ್ಲಿ ವೃತ್ತಿಯನ್ನಾಧರಿಸಿ ಜಾತಿಯನ್ನು ಸೂಚಿಸುವ ವ್ಯವಸ್ಥೆ ಇಲ್ಲ, ಎಲ್ಲಾ ವೃತ್ತಿಗಳಲ್ಲಿಯೂ ಸಹ ಎಲ್ಲಾ ಜಾತಿಯ ವ್ಯಕ್ತಿಗಳು/ನಾಗರಿಕರು ವೃತ್ತಿಯಲ್ಲಿ ತೊಡಗಿದ್ದಾರೆ. ಅನುವಂಶಿಯವಾಗಿ ಬಂದಿದ್ದಂತಹ ಜಾತಿ ವ್ಯವಸ್ಥೆ ಈಗಲೂ ಸಹ ಮುಂದುವರೆಯುತ್ತಾ ಬಂದಿದೆ.
ಭಾರತದ ರಾಜಕಾರಣದಲ್ಲಿ ಜಾತಿಯು ಪ್ರಮುಖ ಅಂಶವಾಗಿದೆ ಎಲ್ಲಾ ರಾಜಕೀಯ ಪಕ್ಷಗಳು ಸಹ ಜಾತಿ ವ್ಯವಸ್ಥೆಯನ್ನು ದಾಳವಾಗಿ ಬಳಸಿಕೊಂಡು ತಮ್ಮ ಅಸ್ತಿತ್ವಕ್ಕಾಗಿ ಜಾತಿ-ಜಾತಿಗಳ ನಡುವೆ ಕಂದಕ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕಿವೆ
ಈ ಜಾತಿಗಣತಿಯು ಸಹ ಅಂತಹ ಯಾವುದೇ ವ್ಯವಸ್ಥೆಗೆ ದಾಳವಾಗದೆ ನೈಜ ಅಂಕಿ ಅಂಶಗಳನ್ನು ದಾಖಲಿಸಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಹಿಂದುಳಿದವರನ್ನು ಗುರುತಿಸಿ ಅವರನ್ನು ಮೇಲೆತ್ತುವ ಕೆಲಸವನ್ನು ಸರ್ಕಾರಗಳು ಮಾಡಬೇಕಾಗಿದೆ,

ಹಾಗೆಯೇ ಎಲ್ಲಾ ಜಾತಿಗಳ ಬಡತನ ರೇಖೆಗಿಂತ ಕೆಳಗಿರುವವರ ಸಮೀಕ್ಷೆ ನಡೆಸಿ ಅವರಿಗೂ ಸಹ ಆಸರೆಯಾಗಿ ಸರ್ಕಾರಗಳು ಮುತುವರ್ಜಿ ವಹಿಸಬೇಕಾದ ಅಗತ್ಯತೆ ಇದೆ ಎಂದರು
ಈ ಬಾರಿ ಸಮೀಕ್ಷೆ ಯಲ್ಲಿ ಕೆಲವೊಂದು ಅಂಶಗಳಾದ ಮೊಬೈಲ್ ಬಳಸುತ್ತೀರಾ. ವಾಹನ ಇದೆಯೇ ಇಂತಹವುಗಳನ್ನು ಕೈ ಬಿಡಬೇಕು ಎಂದರು
