Tuesday, February 10, 2026
Homeಕ್ರೈಮ್ಮೂಡಿಗೆರೆ: ಹ್ಯಾಂಡ್‌ ಪೋಸ್ಟ್ ಹಾಲಿನ ಡೈರಿಯಲ್ಲಿ ಕಳ್ಳತನ: ಅಸ್ಸಾಂ ಮೂಲದ ವ್ಯಕ್ತಿ ಅರೆಸ್ಟ್!

ಮೂಡಿಗೆರೆ: ಹ್ಯಾಂಡ್‌ ಪೋಸ್ಟ್ ಹಾಲಿನ ಡೈರಿಯಲ್ಲಿ ಕಳ್ಳತನ: ಅಸ್ಸಾಂ ಮೂಲದ ವ್ಯಕ್ತಿ ಅರೆಸ್ಟ್!

ಮೂಡಿಗೆರೆ: ಪಟ್ಟಣದ ಹ್ಯಾಂಡ್ ಪೋಸ್ಟ್ ಬೆಟ್ಟಗೆರೆ ಮಾರ್ಟ್ ಪಕ್ಕದಲ್ಲಿರುವ ಹಾಲಿನ ಡೈರಿಯಲ್ಲಿ ಮುಂಜಾನೆ ಕಳ್ಳನ ಕೈ ಚಳಕ ತೋರಿದ್ದುಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಿಸಿ ಕ್ಯಾಮರಾ ದೃಶ್ಯವನ್ನು ಆಧರಿಸಿ ಬೆನ್ನು ಹತ್ತಿದ ಪೊಲೀಸರು ಅಸ್ಸಾಂ ಮೂಲದ ರೆಹಮಾನ್ (32) ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಡಿಗೆರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಬೈದುವಳ್ಳಿ ಕ್ರಾಸ್ ಬಳಿ ಅಜಿತ್ ಎಂಬುವರಿಗೆ ಸೇರಿದ ಹಾಲಿನ ಡೈರಿಯಲ್ಲಿ ಕಳ್ಳ ಕದ್ದು ಪರಾರಿಯಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿ ಬಂಧಿಸುವಲ್ಲಿ ಯಶಸ್ಸು ಖಂಡಿದ್ದು ಪೋಲೀಸರ ಕರ್ತವ್ಯ ನಿಷ್ಠೆಗೆ ಅಂಗಡಿ ಮಾಲೀಕ ಅಜಿತ್ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ

ನಗರದಲ್ಲಿ ಮುಂಜಾನೆ ಸಮಯದಲ್ಲಿ ಹಾಲಿನ ಡೈರಿಯಲ್ಲಿ ಕಳ್ಳತನ ಮಾಡುವ ಗ್ಯಾಂಗ್‌ವೊಂದು ಸಕ್ರಿಯ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಬಲೆ ಬಿಸಿದ್ದಾರೆ.

ಅಸ್ಸಾಂ ಮೂಲದ ರೆಹಮಾನ್ ಹಾನುಬಾಳು ಕಾಫಿ ಎಸ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 6000 ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂಬುದಾಗಿ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ನಗದು ಕಳ್ಳತನ ಮಾಡಿ ಪರಾರಿ ಆಗಿದ್ದ ಖದೀಮನನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ, ಕ್ರೈಂ ವಿಭಾಗದ ಸಚಿನ್ ಮಹೇಂದ್ರ ಸೇರಿದಂತೆ ಸಿಬ್ಬಂದಿಗಳು ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!