Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ: ದೇವರಮನೆ ರಸ್ತೆಯಲ್ಲಿ ಕಾಣಿಸಿಕೊಂಡ ಎರಡು ದೈತ್ಯ ಕಾಡುಕೋಣಗಳು

ಮೂಡಿಗೆರೆ: ದೇವರಮನೆ ರಸ್ತೆಯಲ್ಲಿ ಕಾಣಿಸಿಕೊಂಡ ಎರಡು ದೈತ್ಯ ಕಾಡುಕೋಣಗಳು

ಮೂಡಿಗೆರೆ: ಕಾಫಿನಾಡು ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳು ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಒಂದೆಡೆ ಕಾಡಾನೆಗಳು ದಾಂಧಲೆ ನಡೆಸಿದರೆ ಮತ್ತೊಂದು ಕಡೆ ಮೂಡಿಗೆರೆ ತಾಲೂಕಿನ ದೇವರಮನೆ ರಸ್ತೆಯಲ್ಲಿ ತೆರಳುತ್ತಿದ್ದವರಿಗೆ ಎರಡು ದೈತ್ಯ ಕಾಡುಕೋಣಗಳು ಕಾಣಿಸಿಕೊಂಡಿವೆ.

ಒಂದು ಕಾಡುಕೋಣ ವಾಹನದ ಎದುರು ಬಂದು ನಿಂತುಕೊಂಡರೆ ಮತ್ತೊಂದು ಕಾಡುಕೋಣ ಕೂಡ ವಾಹನದ ಎದುರೇ ಬಂದು ನಿಂತುಕೊಂಡಿದೆ. ಈ ದೃಶ್ಯವನ್ನು ವಾಹನದಲ್ಲಿರುವ ಪ್ರಯಾಣಿಕರು ಸೆರೆ ಹಿಡಿದಿರುತ್ತಾರೆ.

ಆಹಾರ ಹುಡುಕಿಕೊಂಡು ಕಾಫಿತೋಟಗಳಿಗೆ ಹೆಚ್ಚಾಗಿ ಲಗ್ಗೆ ಇಡುವ ಕಾಡುಕೋಣಗಳು ಗಿಡಗಳನ್ನು ಬುಡಸಮೇತ ಮುರಿದು ಹಾಕಿ ಅಪಾರ ನಷ್ಟ ಉಂಟು ಮಾಡಿತ್ತು. ಹಗಲಿನಲ್ಲೇ ಓಡಾಟ ನಡೆಸುತ್ತಿರುವುದರಿಂದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!