ಮೂಡಿಗೆರೆ: ಕಾಫಿನಾಡಲ್ಲಿ ಹೆಚ್ಚಿದ ಕಾಡು ಪ್ರಾಣಿಗಳ ಉಪಟಳ ಅದರಲ್ಲೂ ಬಯಲು ಸೀಮೆಯಲ್ಲಿ ಚಿರತೆ, ಮಲೆನಾಡಲ್ಲಿ ಸಲಗ ಭೀತಿಯಿಂದ ಜನರು ಜೀವ ಭಯದಿಂದಲೇ ಓಡಾಡುವ ಪರಿಸ್ಥಿತಿ ಒದಗಿದೆ.
ಹೌದು ..ಮೂಡಿಗೆರೆ ತಾಲೂಕಿನ ದೊಡ್ಡ ಕುಂದೂರು ಗ್ರಾಮದಲ್ಲಿ ಕೃಷಿ ಜಮೀನಿಗೆ ಲಗ್ಗೆ ಇಡುತ್ತಿರೋ ಕಾಡಾನೆ ಬೆಳೆ ನಾಶ ಮಾಡಿದೆ. ಪಟಾಕಿ ಸಿಡಿಸಿ ಕಾಡಾನೆ ಓಡಿಸಿದ ಅಲ್ಲಿನ ಗ್ರಾಮಸ್ಥರು.
ವನ್ಯ ಮೃಗಗಳ ಕಾಟಕ್ಕೆ ಬೇಸತ್ತ ಕಾಫಿ ನಾಡು ಜಿಲ್ಲೆಯಾದ್ಯಂತ ಕಾಡಾನೆ, ಚಿರತೆ ಸೇರಿದಂತೆ ಕಾಡುಪ್ರಾಣಿ ಆತಂಕದಲ್ಲೇ ಜನರು ತಮ್ಮ ದಿನಚರಿ ಕಳೆಯುತ್ತಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದು ಈ ಬಗ್ಗೆ ಗ್ರಾಮಸ್ಥರು ಇದಕ್ಕೊಂದು ಪರಿಹಾರ ಸೂಚಿಸಿ ಎಂದು ಅರಣ್ಯಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿರುತ್ತಾರೆ.
