ಚಿತ್ರದುರ್ಗ: ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಜೈಲು ಸೇರಿ ಸದ್ಯ ಷರತ್ತುಬದ್ಧ ಜಾಮೀನಿನ ಮೇಲಿರುವ ಮುರಘಾಶ್ರೀಗಳಿಗೆ ಇದೀಗ ಮತ್ತೆ ಜೈಲೂಟ ಫಿಕ್ಸ್ ಆಗಿದೆ.
ಹೌದು.. ಹೈಕೋರ್ಟ್ ಮುರುಘಾಶ್ರೀಗಳಿಗೆ ನೀಡಿದ್ದ ಷರತ್ತುಬದ್ಧ ಜಾಮೀನನ್ನು ಸುಪ್ರಿಂಕೋರ್ಟ್ ರದ್ದುಮಾಡಿದ್ದು, ಒಂದು ವಾರದೊಳಗೆ ನ್ಯಾಯಾಂಗ ಬಂಧನಕ್ಕೆ ಹೋಗುವಂತೆ ಸುಪ್ರಿಂಕೋರ್ಟ್ ಸೂಚನೆ ನೀಡಿದೆ.
ಏನಿದು ಪ್ರಕರಣ?
ಮುರುಘಾ ಮಠದ ಹಾಸ್ಟೆಲ್‌ನ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಶಿವಮೂರ್ತಿ ಶ್ರೀಯನ್ನು ಕಳೆದ ಸೆಪ್ಟಂಬರ್ 2ರಂದು (2022) ಚಿತ್ರದುರ್ಗದ ಪೊಲೀಸರು ಬಂಧಿಸಿದ್ದರು.
ಚಿತ್ರದುರ್ಗದಲ್ಲಿರುವ ಮುರುಘಾ ಮಠದಲ್ಲಿಯೇ ಇದ್ದಾಗ ರಾತ್ರಿ ವೇಳೆ ಮಠಕ್ಕೆ ದಾಳಿ ನಡೆಸಿದ್ದ ಪೊಲೀಸರು ಪೋಕ್ಸೋ ಕಾಯ್ದೆಯಡಿ (POCSO Case) ಮುರುಘಾ ಶ್ರೀಯನ್ನು ಅರೆಸ್ಟ್ ಮಾಡಿದ್ದರು. ಮುರುಘಾ ಶ್ರೀ ವಿರುದ್ಧ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ದೂರು ದಾಖಲಾದ ಏಳು ದಿನದ ಬಳಿಕ ಮುರುಘಾ ಶ್ರೀಯನ್ನು ಪೊಲೀಸರು ಬಂಧಿಸಿದ್ದರು.ಇನ್ನು 2023 ನವೆಂಬರ್ ನಲ್ಲಿ ಹೈಕೋರ್ಟ್ ಶ್ರೀಗಳಿಗೆ ಏಳು ಷರತ್ತನ್ನು ವಿಧಿಸಿ ಜಾಮೀನು ನೀಡಿದೆತ್ತು. ಇದೀಗ ಮತ್ತೆ ಮುರುಘಾಶ್ರೀಗಳಿಗೆ ಜೈಲೇ ಗತಿ ಅನ್ನೋ ಹಾಗಾಗಿದೆ.
