ಎನ್.ಆರ್.ಪುರ: ಕಾಲೇಜು ವಿದ್ಯಾರ್ಥಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್.ಪುರ ತಾಲೂಕಿನ ಬಾವಿಹಟ್ಟಿ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ.
ಉಡುಪಿಯ ಬ್ರಹ್ಮಾವರದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಐಶ್ವರ್ಯ( 21) ಕಾಣೆಯಾದ ಯುವತಿ. ಉಡಿಪಿಯ ಬನ್ನಂಜೆಯ ಮಹಿಳಾ ಹಾಸ್ಟಲ್ ನಲ್ಲಿ ವಾಸವಾಗಿದ್ದ ಯುವತಿಯನ್ನು ಆಕೆಯ ತಾಯಿ ರಜಿನಿ ಅವರು ಮೇ 30ರಂದು ಬಾವಿಕಟ್ಟೆಯ ತನ್ನ ಸಂಬಂಧಿಕರ ಮನೆಗೆ ಕರೆದುಕೊಂಡು ಬಂದಿದ್ದರು. ಅಂದು ತಡರಾತ್ರಿ 11.50ರ ಸಮಯದಲ್ಲಿ ಮನೆಯಲ್ಲಿ ಚೆನ್ನಾಗಿ ಮಾತನಾಡುತ್ತಾ ಕುಳಿತಿರುವಾಗ ತನಗೆ ವಾಂತಿ ಬರುತ್ತೆ ಎಂದು ಹೇಳಿ ಐಶ್ವರ್ಯ ಹೊರಗಡೆ ಬಂದಿದ್ದಾಳೆ. ತಡವಾದರೂ ಮಗಳು ಒಳಗೆ ಬರದಿದ್ದಾಗ ಹೊರಗಡೆ ಬಂದು ತಾಯಿ ನೋಡಿದಾಗ ಐಶ್ವರ್ಯ ಹೊರಗಡೆ ಕಾಣಿಸಲಿಲ್ಲ ಕುಟುಂಬಸ್ಥರು ಜಾಗೃತರಾಗಿ ಎಲ್ಲಾ ಕಡೆ ವಿಚಾರಿಸಿದರು ಹಾಗೆ ಆಕೆಯ ಸ್ನೇಹಿತೆಯರಿಗೂ ಸಹ ಕಾಳ್ ಮಾಡಿ ಕೇಳಿದಾಗಲೂ ಯಾವುದೇ ಪ್ರಯೋಜನವಾಗಿರಲಿಲ್ಲ.ಆ ತಕ್ಷಣ ತಾಯಿಯೂ ಮಗಳ ಪೋನ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬರುತ್ತಿತ್ತು.
ಮಗಳು ನಿಗೂಢವಾಗಿ ಕಾಣೆಯಾಘಿದ್ದರ ಬಗ್ಗೆ ತಾಯಿ ರಜಿನಿ ಎನ್.ಆರ್.ಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ.
