Monday, February 9, 2026
Homeಜಿಲ್ಲಾಸುದ್ದಿಎನ್ ಆರ್ ಪುರ: ಬಿಜೆಪಿ ಪಕ್ಷದ ವತಿಯಿಂದ ಬಿಡಾಡಿ ಗೋವುಗಳಿಗೆ ರೇಡಿಯಂ ಬೆಲ್ಟ್ ಅಳವಡಿಕೆ

ಎನ್ ಆರ್ ಪುರ: ಬಿಜೆಪಿ ಪಕ್ಷದ ವತಿಯಿಂದ ಬಿಡಾಡಿ ಗೋವುಗಳಿಗೆ ರೇಡಿಯಂ ಬೆಲ್ಟ್ ಅಳವಡಿಕೆ

ಎನ್ ಆರ್ ಪುರ: ರಾತ್ರಿ ಸಮಯದಲ್ಲಿ ಗೋವುಗಳು ಕಾಣದೆ ವಾಹನಗಳು ಗುದ್ದಿ ಅಪಘಾತವಾಗುತ್ತಿರುವ ಹಿನ್ನೆಲೆಯಲ್ಲಿ, ಮಾಜಿ ಶಾಸಕರಾದ ಜೀವರಾಜ್ ಡಿ ಎನ್ ರವರ ಮತ್ತು ನರಸಿಂಹರಾಜಪುರ ಮಂಡಲ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಸೂಚನೆಯಂತೆ, ಬಿಜೆಪಿ ಪಕ್ಷದ ವತಿಯಿಂದ, ನರಸಿಂಹರಾಜಪುರ ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಪ್ರೀತಮ್ ಗೌಡ ಅವರ ನೇತೃತ್ವದಲ್ಲಿ, ಇಂದು ಹೊನ್ನೇಕುಡಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ವಾಹನ ಸವಾರರ ಮತ್ತು ಗೋವುಗಳ ಸುರಕ್ಷತೆಗಾಗಿ ರೇಡಿಯಂ ಬೆಲ್ಟ್ ಅಳವಡಿಸುವ ಕಾರ್ಯವನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು.

ವಿಎಸ್ಎಸ್ಎನ್ ಅಧ್ಯಕ್ಷರಾದ ಮಂಜುನಾಥ್ ಕೆ ಟಿ ಮಾತನಾಡಿ ನಮ್ಮ ನಾಯಕರಾದ ಜೀವರಾಜ್ ಅಣ್ಣ ಅವರ ಸೂಚನೆ ಅಂತೆ ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಯುವ ಮೋರ್ಚಾ ಮತ್ತು ಬಿಜೆಪಿ ಮುಖಂಡರ ಹಾಗೂ ಭಜರಂಗದಳ ಕಾರ್ಯಕರ್ತರ ಸಹಕಾರದಿಂದ ಈ ದಿನ ಈ ಕಾರ್ಯ ಮಾಡಲಾಯಿತು ಮುಂದೆಯೂ ನಮ್ಮ ಭಾಗದಲ್ಲಿ ಈ ಸಮಾಜಮುಖಿ ಕಾರ್ಯ ಮುಂದುವರೆಸಲಾಗುವುದು ಎಂದರು.

ಮಹಾಶಕ್ತಿ ಕೇಂದ್ರದ ಪ್ರಮುಖರಾದ ಪ್ರಶಾಂತ್ ಹೊನ್ನೇಕುಡಿಗೆ, ವಿಎಸ್ಎಸ್ಎನ್ ಅಧ್ಯಕ್ಷರಾದ ಮಂಜುನಾಥ್ ಕೆಟಿ, ನಿರ್ದೇಶಕರಾದ ಪ್ರಕಾಶ್ ಬಿಟಿ, ಯುವ ನಾಯಕ ಪ್ರದೀಪ್ ಚಿನ್ನಕುಡಿಗೆ,ವರ್ಕಟೆ ಬೂತ್ ಅಧ್ಯಕ್ಷರಾದ ವಸಂತ್, ಹಂತುವಾನಿ ಬೂತ್ ಅಧ್ಯಕ್ಷರಾದ ಸತೀಶ್, ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ನಿಲುವಾನಿ, ಸಾರ್ಯ ಬಿಜೆಪಿ ಮುಖಂಡರಾದ ಅನಿಲ್,ಸಾರ್ಯ ಮಂಜು, ಚೇತನ್, ಮಂಜು, ರತೀಶ್, ಬಿಜೆಪಿ ಯುವಮುಖಂಡರಾದ ಸಾರ್ಥಕ್, ರಾಜೇಶ್, ಕಾಂತೇಶ್, ಶಾಂತಿ ಕುಮಾರ್, ಹಂದೂರು ರವಿ, ಸುಮಂತ್ ಗುಡ್ಡಿಕೆರೆ, ಧನಂಜಯ ವರ್ಕಟೆ, ಸಂದೇಶ್, ಪ್ರಿನ್ಸ್, ಪ್ರವೀಣ್ ಎಸ್ ಕೆ, ಮನೋಜ್, ಮದನ್, ಶೇಖರ್ ಉಪಸ್ಥಿತರಿದ್ದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!