Monday, August 10, 2026
Homeಜಿಲ್ಲಾಸುದ್ದಿಹಾಸನ: ಕಾಡಾನೆ ಸೆರೆಗೆ ದುಬಾರೆ ಸಾಕಾನೆ ಶಿಬಿರದಿಂದ ಕುಮ್ಕಿ ಆನೆಗಳ ಆಗಮನ: ಕಾರ್ಯಾಚರಣೆ ಆರಂಭ: Video

ಹಾಸನ: ಕಾಡಾನೆ ಸೆರೆಗೆ ದುಬಾರೆ ಸಾಕಾನೆ ಶಿಬಿರದಿಂದ ಕುಮ್ಕಿ ಆನೆಗಳ ಆಗಮನ: ಕಾರ್ಯಾಚರಣೆ ಆರಂಭ: Video

Telegram Group
Join Now


ಹಾಸನ: ಇತ್ತೀಚೆಗೆ ಕಾಡಾನೆ ದಾಳಿ ಹಿನ್ನೆಲೆ ಸಾವು ನೋವುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನರಹಂತಕ ಕಾಡಾನೆ ಸೆರೆಗೆ ದುಬಾರೆ ಆನೆ ಶಿಬಿರದಿಂದ ಕುಮ್ಕಿ ಆನೆಗಳ ತಂಡ ಆಲೂರಿನ ಭೈರಾಪುರಕ್ಕೆ ಆಗಮಿಸಿದೆ

ಧನಂಜಯ, ಲಕ್ಷ್ಮಣ, ಶ್ರೀರಾಮ, ಅಯ್ಯಪ್ಪ ಮತ್ತು ಸುಗ್ರೀವ ಆನೆಗಳು ಈ ತಂಡದಲ್ಲಿವೆ. ಇಂದಿನಿಂದಲೇ (ಜ.16) ಪುಂಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭವಾಗಲಿದೆ. ಸ್ಥಳೀಯರ ಒತ್ತಾಯಕ್ಕೆ ಮಣಿದು ಕೊಡಗು ಭಾಗದಿಂದ ಬಂದ ಈ ನರಹಂತಕ ಆನೆಯನ್ನು ಸೆರೆಹಿಡಿಯಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದರು

ಇತ್ತೀಚೆಗೆ ಆಲೂರು ಸಮೀಪ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಶೋಭ ಅವರ ಮೇಲೆ ಕಾಡಾನೆ ದಾಳಿ ಮಾಡಿ, ಕೊಂದು ಹಾಕಿತ್ತು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮೃತದೇಹ ಮೇಲೆತ್ತಲು ಬಿಡದೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆಗೆ ಸಾಥ್ ನೀಡಿದ್ದ ಶಾಸಕ ಸಿಮೆಂಟ್ ಮಂಜು ಸ್ಥಳದಿಂದಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕರೆ ಮಾಡಿದ್ದರು. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುಂತೆ ಒತ್ತಾಯಿಸಿದ್ದರು. ಸ್ಥಳಕ್ಕೆ ಆಗಮಿಸಿ ಹೋರಾಟಗಾರರ ಮನವಿ ಆಲಿಸಿ ಸಚಿವರ ಗಮನಕ್ಕೆ ತರುವುದಾಗಿ ಡಿಸಿ ಕೆ.ಎಸ್.ಲತಾಕುಮಾರಿ ಭರವಸೆ ನೀಡಿದ್ದರು. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments