Monday, February 9, 2026
Homeಜಿಲ್ಲಾಸುದ್ದಿಎನ್‌ ಆರ್‌ ಪುರ: ರಾಜ್ಯ ಹೆದ್ದಾರಿಯಲ್ಲಿ ಮತ್ತೆ ಒಂಟಿ ಸಲಗ ಪ್ರತ್ಯಕ್ಷ: ಪ್ರಯಾಣಿಕರು ಕಂಗಾಲು

ಎನ್‌ ಆರ್‌ ಪುರ: ರಾಜ್ಯ ಹೆದ್ದಾರಿಯಲ್ಲಿ ಮತ್ತೆ ಒಂಟಿ ಸಲಗ ಪ್ರತ್ಯಕ್ಷ: ಪ್ರಯಾಣಿಕರು ಕಂಗಾಲು

ಎನ್‌ ಆರ್‌ ಪುರ: ಕಾಫಿನಾಡ ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆ ಭೀತಿ ರಾಜ್ಯ ಹೆದ್ದಾರಿಯಲ್ಲಿ ಮತ್ತೊಂದು ಒಂಟಿ ಸಲಗ ಪ್ರತ್ಯಕ್ಷವಾಗಿದ್ದು ಇದನ್ನು ಕಂಡು ಅಲ್ಲಿನ ಪ್ರಯಾಣಿಕರು, ಸ್ಥಳೀಯರು ಕಂಗಾಲಾಗಿದ್ದಾರೆ.

ಹೌದು .. ಕಾಡಾನೆ ಪ್ರತ್ಯಕ್ಷ ಕಂಡು ವಾಹನ ಸವಾರರು, ಸ್ಥಳೀಯರಲ್ಲಿ ಆತಂಕಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್.ಪುರ ತಾಲೂಕಿನ ಹಳೇಹಳ್ಳಿ ಸಮೀಪ ಕಂಡುಬಂದಿದೆ. ಪದೇ ಪದೇ ಈ ಭಾಗದಲ್ಲಿ ಕಾಡಾನೆ ಓಡಾಟ ಇರುವುದರಿಂದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ಬಾಳೆಹೊನ್ನೂರು-ಎನ್.ಆರ್.ಪುರ ಸಂಪರ್ಕದ ರಾಜ್ಯ ಹೆದ್ದಾರಿಯಾಗಿದ್ದು ಇಲ್ಲಿ ಜನ ಓಡಾಡುತ್ತಲೇ ಇದ್ದು ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿರುತ್ತಾರೆ.

ಈ ಭಾಗದಲ್ಲಿ ನಿರಂತರ ಕಾಡಾನೆಗಳ ಓಡಾಟದಿಂದ ಸ್ಥಳಿಯರು ಕಂಗಾಲಾಗಿದ್ದು ಮತ್ತೆ ಪ್ರತ್ಯಕ್ಷವಾಗಿದ್ದನ್ನ ಕಂಡು ಇನ್ನೂ ಭಯಭೀತರಾಗಿದ್ದಾರೆ, ಈಗಾಗಲೇ ಕಾಡಾನೆ ಸ್ಥಳಾಂತರಕ್ಕೆ ಹಲವು ಬಾರಿ ಮನವಿ ಮಾಡಿರೋ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳು ಈ ಕೂಡಲೇ ಗಂಭಿರವಾಗಿ ಪರಿಗಣಿಸಿ ಅಲ್ಲಿನ ಜನಕ್ಕೆ ನೆಮ್ಮದಿ ತಂದುಕೊಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!