Monday, August 10, 2026
Homeಸಿನೆಮಾಬಿಗ್ ಬಾಸ್ ಶೋ ನಲ್ಲಿ ಸ್ಫರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ ಗರಂ ಹಿನ್ನೆಲೆ: ಕಿಚ್ಚ ಸುದೀಪ್...

ಬಿಗ್ ಬಾಸ್ ಶೋ ನಲ್ಲಿ ಸ್ಫರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ ಗರಂ ಹಿನ್ನೆಲೆ: ಕಿಚ್ಚ ಸುದೀಪ್ ವಿರುದ್ಧ ಪೊಲೀಸ್ ದೂರು

Telegram Group
Join Now

ರಾಮನಗರ: ಚಲನಚಿತ್ರ ನಟ ಮತ್ತು ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ಬಿಗ್ ಬಾಸ್ ಶೋ ನಲ್ಲಿ ಸ್ಫರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ ಸುದೀಪ್ ಗರಂ ಆಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಎಂಬವರು ಬೆಂಗಳೂರು ದಕ್ಷಿಣ ಜಿಲ್ಲಾ ಎಸ್ ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

ಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಸುದೀಪ್ ನಿಂದಿಸಿದ್ದಾರೆ ಎಂದು ದೂರು ಸಲ್ಲಿಸಲಾಗಿದ್ದು, ಸುದೀಪ್ ಜೊತೆಗೆ ಬಿಗ್ ಬಾಸ್ ಶೋ ಸ್ಫರ್ಧಿ ಅಶ್ವಿನಿ ಗೌಡ ವಿರುದ್ಧವೂ ಸಹ ದೂರು ದಾಖಲಿಸಲಾಗಿದೆ.

ರಿಯಾಲಿಟಿ ಶೋ ನಲ್ಲಿ ಸ್ಫರ್ಧಿ ರಕ್ಷಿತಾ ಶೆಟ್ಟಿ ಜೊತೆ ಮಾತುಕತೆ ವೇಳೆ ಪಿತ್ತ ನೆತ್ತಿಗೇರಲಿದೆ ಎಂಬ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ವಿರುದ್ಧ ದೂರು ನೀಡಲಾಗಿದ್ದು, ಮತ್ತೋರ್ವ ಸ್ಫರ್ಧಿ ಗಿಲ್ಲಿ ನಟ ಮೇಲೆ ಮೇಲೆ ಸ್ಫರ್ಧಿ ರಿಷಾ ಹಲ್ಲೆ ಮಾಡಿದ್ದಾರೆ ಎಂದು ಕೂಡಾ ದೂರಿನಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments