ಎನ್ ಆರ್ ಪುರ: ಬೆಳ್ಳಂ ಬೆಳಗ್ಗೆ ಎರಡು ಕಾಡಾನೆಗಳು ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸುತ್ತಾಮುತ್ತ ಹಾಗೆ ಹಳೇ ಬಾಳಗಡಿ ರಸ್ತೆ, ಬೆಳಿಹಳ್ಳಿ ಪ್ರದೇಶದಲ್ಲಿ ಸಂಚರಿಸುತ್ತಿವೆ.
ಹಾಗೆ ಮುಂದೆ ಬಾಳಗಡಿ, ಬಿಂತ್ರವಳ್ಳಿ ನುಗ್ಗಿ, ಬಪ್ಪುಂಜಿ ಮೆಲ್ಪ ಲ್ ಮಾರ್ಗವಾಗಿ ಸ್ವಸ್ಥಾನಕ್ಕೆ ತೆರಳುವ ಸಾಧ್ಯತೆ ಇದ್ದು ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಈ ಸಂಚಾರ ವನ್ನು ಗಮನಿಸುತ್ತಿದ್ದಾರೆ.ಹಾಗಾಗಿ ಈ ಮಾರ್ಗದ ಜನರು ಆನೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅವು ಸಂಚರಿಸಿ ತಮ್ಮ ಸ್ವಸ್ಥಾನಕ್ಕೆ ಮರಳಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.
ಅದೇ ರೀತಿ ಯಾವುದೇ ವದಂತಿಗಳಿಗೆ ಕಿವಿ ಕೊಡದೆ ಜಾಗೃತರಾಗಿದ್ದು ಮಕ್ಕಳನ್ನು ಮನೆಯಿಂದ ಹೊರಗೆ ಬಿಡಬಾರದೆಂದು ಅರಣ್ಯ ಇಲಾಖೆ ಮನವಿ ಮಾಡಲಾಗಿದೆ. ಆನೆಗಳ ಚಲನವಲನಗಳ ಬಗ್ಗೆ ತಮಗೇನಾದರೂ ಹೆಚ್ಚಿನ ಮಾಹಿತಿ ದೊರೆತರೆ, ದಯವಿಟ್ಟು ಅರಣ್ಯ ಇಲಾಖೆಯ ಗಮನಕ್ಕೆ ತರಬೇಕೆಂದು ಮನವಿ ಕೂಡ ಮಾಡಲಾಗಿದೆ.
