Tuesday, August 11, 2026
Homeಜಿಲ್ಲಾಸುದ್ದಿ‌ಕಡೂರಿನಲ್ಲಿ 40 ಸಾವಿರ ಮೌಲ್ಯದ ಪೈಪ್‌ ಕಳ್ಳತನ : ಮೂವರು ಅರೆಸ್ಟ್!

‌ಕಡೂರಿನಲ್ಲಿ 40 ಸಾವಿರ ಮೌಲ್ಯದ ಪೈಪ್‌ ಕಳ್ಳತನ : ಮೂವರು ಅರೆಸ್ಟ್!

Telegram Group
Join Now

ಕಡೂರು: 40 ಸಾವಿರ ಮೌಲ್ಯದ 400 ಮೀಟರ್ ಪೈಪ್‌  ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಂಗಟಗೆರೆ ಪೊಲೀಸರು ಬಂಧಿಸಿದ್ದಾರೆ.

ಕಡೂರು ತಾಲ್ಲೂಕಿನ ಸಿಂಗಟಗೆರೆ ಸಮೀಪದ 9ನೇ ಮೈಲಿಕಲ್ಲು ಸಮೀಪದಲ್ಲಿ ಪೈಪ್‌ಲೈನ್ ಕಾಮಗಾರಿ ಜಾಗದಲ್ಲಿದ್ದ ಪೊಲೀಸರು ವಶಪಡಿಸಿಕೊಂಡಿದ್ದು ಜುಲೈ 14ರಂದು ಪೈಪ್ ಕಳವು ಮಾಡಿದ್ದು ಆರೋಪಿಗಳು.

ತುಮಕೂರು ನಗರದ ಬೋವಿ ಕಾಲೊನಿಯ ವೆಂಕಟೇಶ್, ಗಿರೀಶ್ ಮತ್ತು ಮಂಜುನಾಥ್ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಸಿಂಗಟಗೆರೆ ಪೋಲಿಸ್ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಪಿಎಸ್ಐ ರಂಗನಾಥ್, ನಾಗರಾಜ್, ಧನಪಾಲ್ ನಾಯ್ಕ್, ಸುರೇಶ್, ಮೋಹನ್, ವಿಜಯ ಕುಮಾರ್, ತೀರ್ಥ ಕುಮಾರ್, ಕಲ್ಲೇಶನಾಯ್ಕ್, ಕಲ್ಲೇಶ್ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments