Tuesday, February 10, 2026
Homeಜಿಲ್ಲಾಸುದ್ದಿPower Cut: ಹಾಸನ ಜಿಲ್ಲೆಯ ಈ ಏರಿಯಾಗಳಲ್ಲಿ ನಾಳೆ, ನಾಡಿದ್ದು ಇರಲ್ಲ ಕರೆಂಟ್‌!

Power Cut: ಹಾಸನ ಜಿಲ್ಲೆಯ ಈ ಏರಿಯಾಗಳಲ್ಲಿ ನಾಳೆ, ನಾಡಿದ್ದು ಇರಲ್ಲ ಕರೆಂಟ್‌!

ಹಾಸನ/ ಬೇಲೂರು: ನಾಳೆ ಬೇಲೂರು ಮತ್ತು ಗೆಂಡೇಹಳ್ಳಿ ವಿ.ವಿ ಕೇಂದ್ರಗಳಲ್ಲಿ ತುರ್ತು ಬ್ರೇಕರ್ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ಬೆಳಗ್ಗೆ 10.00 ಗಂಟೆಯಿಂದ ಸಂಜೆ 06:00 ಗಂಟೆ ಯವರೆಗೆ ಬೇಲೂರು ಮತ್ತು ಗೆಂಡೇಹಳ್ಳಿ ವಿ.ವಿ ಕೇಂದ್ರಗಳಿಂದ ವಿದ್ಯುತ್ ವ್ಯತ್ಯಯವಾಗಲಿದೆ.

ಹಾಗೆ ನಾಡಿದ್ದು 24.09.2025 ರಂದು ಸಂತೆಪೇಟೆ ಹಾಸನ ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸಗಳನ್ನು ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆ ಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಹಾಸನ ವಿ.ವಿ ವಿದ್ಯುತ್ ಸರಬರಾಜಾಗುವ ಸಂತೆಪೇಟೆ ಸರ್ಕಲ್, ಸಿದ್ದಯ್ಯನಗರ, ಗಾಂಧಿಬಜಾರ್, ತಣ್ಣೀರುಹಳ್ಳ, ವಿಜಯನಗರ, ಕೆ.ಹೆಚ್.ಬಿ. ಶ್ರೀನಗರ, ಎನ್. ಆರ್ ವೃತ್ತ ಹಾಸನಾಂಬ ದೇವಾಲಯ ಸುತ್ತಮುತ್ತ, ಹುಣಸಿನಕೆರೆ, ಮೈಕ್ರೋವೇವ್, ಬಿಟ್ಟಗೋಡನಹಳ್ಳಿ, ಮೆಡಿಕಲ್ ಕಾಲೇಜು, ಡಿ.ಸಿ ಕಛೇರಿ, ಎಸ್.ಪಿ ಕಛೇರಿ, ಆಜಾದ್ ರೋಡ್, ವಲ್ಲಬಾಯ್ ರೋಡ್, ನಗರ ಸಭೆ ಕಾರ್ಯಾಲಯ, ಕಟ್ಟಿನಕೆರೆ ಮಾರ್ಕೆಟ್, ದೇವೆಗೌಡನಗರ, ಹನುಮಂತಪುರ, ಅಗಿಲೆ, ‘ಎರೆಬೋರೆಕಾವಲು, ಚನ್ನಪಟ್ಟಣ, ಹೊಸಕೊಪ್ಪಲು, ಹನುಮಂತಪುರ, ಆಗಿದೆ, ವಿರಭೋರೆಕಾವಲು, ದೇವಮ್ಮ ಬಡಾವಣೆ, ಮಾರ್ಗನಹಳ್ಳಿ, ಬೈಲಹಳ್ಳಿ, ಬಸವೇಶ್ವರನಗರ, ಹೊಯ್ಸಳ ರೆಸಾರ್ಟ್, ಇತರೆ ಸರ್ಕಾರಿ ಕಛೇರಿಗಳು, ಶಾಲಾ ಕಾಲೇಜುಗಳು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!