Tuesday, February 10, 2026
Homebig breakingಸಕಲೇಶಪುರ: ಬಿಜೆಪಿ ಶಾಸಕರಿಂದ ಧರ್ಮಸ್ಥಳ ಚಲೋ‌ ರ‍್ಯಾಲಿ: ಶಾಸಕ ಧೀರಜ್‌ ಮುನಿರಾಜು ನೇತೃತ್ವ!

ಸಕಲೇಶಪುರ: ಬಿಜೆಪಿ ಶಾಸಕರಿಂದ ಧರ್ಮಸ್ಥಳ ಚಲೋ‌ ರ‍್ಯಾಲಿ: ಶಾಸಕ ಧೀರಜ್‌ ಮುನಿರಾಜು ನೇತೃತ್ವ!

ಹಾಸನ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಿಂದ ಧರ್ಮಸ್ಥಳ ಚಲೋ‌ ರ‍್ಯಾಲಿ ಆರಂಭಗೊಂಡಿದೆ.

ಹೌದು .. ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ರ‍್ಯಾಲಿ ಆರಂಭಗೊಂಡಿದ್ದು ಹಾಸನ ಮೂಲಕವಾಗಿ ಸಾಗಿದ ‌ರ್ಯಾಲಿಯಲ್ಲಿ ಹಾಗೆ ಸಕಲೇಶಪುರಕ್ಕೆ ರ‍್ಯಾಲಿ ಆಗಮಿಸುತ್ತಿದ್ದಂತೆ ಸ್ಥಳೀಯ ಶಾಸಕ ಸಿಮೆಂಟ್‌ಮಂಜು ಸ್ವಾಗತಿಸಿದರು.

ನೂರಕ್ಕೂ ಅಧಿಕ ಕಾರುಗಳಲ್ಲಿ ಧರ್ಮಸ್ಥಳ ಚಲೋ ರ‍್ಯಾಲಿ ಮಾಡುತ್ತಿದ್ದೇವೆ. ಧರ್ಮಸ್ಥಳ, ನಾಡಿನ ರಕ್ಷಣೆಗಾಗಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಟಿದ್ದೇವೆ. ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದು, ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಬರುತ್ತೇವೆ ಎಂದು ಸಕಲೇಶಪುರ ಪಟ್ಟಣದಲ್ಲಿ ಶಾಸಕ ಧೀರಜ್‌ ಮುನಿರಾಜು ಹೇಳಿದರು.

ಹಾಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರ ಬಗ್ಗೆಯೂ ಮಾತನಾಡಿ, ನಮ್ಮ ವಾದವೂ ಅದೇ ಇತ್ತು ಯಾರಾದರೂ ಹೋತಿದ್ದ ಶವ ಹೊರ ತೆಗೆದರೆ ಅವರು ಕ್ರಿಮಿನಲ್ ಆಗಿರ್ತಾರೆ ಮೊದಲು ಅವರನ್ನು ತನಿಖೆ ಮಾಡಿ ಮುಂದೆ ಹೆಜ್ಜೆ ಇಡಬೇಕಿತ್ತು ಎಸ್‌‌ಐಟಿ ಯಾರ ಒತ್ತಡದಿಂದ ಈ ರೀತಿ ಮಾಡಿದರೋ ಅದರ ಬಗ್ಗೆಯೂ ತನಿಖೆ ಆಗಬೇಕು ವಿದೇಶಗಳಿಂದ ದುಡ್ಡು ಸಂದಾಯವಾಗಿದೆ ಆದ್ದರಿಂದ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು ಇದೊಂದು ಷಡ್ಯಂತ್ರ, ಹಿಂದೂತ್ವದ ಮೇಲೆ‌ ಆಗಿರುವ ಅಟ್ಯಾಕ್ಈ ಪ್ರಕರಣವನ್ನು ಎನ್‌ಐಎ ತನಿಖೆ ವಹಿಸಬೇಕೆಂದು ಬಿಜೆಪಿ ಕೂಡ ಒತ್ತಾಯಿಸಿದೆ ನಾವು ಕೂಡ ಒತ್ತಾಯ ಮಾಡುತ್ತೇನೆ ದೇವರ ಆಶೀರ್ವಾದದಿಂದ ತಪ್ಪಿತಸ್ಥರ ಬಂಧನವಾಗಿದೆ ಷಡ್ಯಂತ್ರದ ಹಿಂದೆ‌ ಇರುವವರ ಬಂಧನ ಆಗಬೇಕು ಹಿಂದುತ್ವದ ವಿರುದ್ಧ ಯಾರು‌ ಷಡ್ಯಂತ್ರ ಹೆಣದಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುಇನ್ಮುಂದೆ ಯಾವ ಧರ್ಮ ಕ್ಷೇತ್ರದ ಮೇಲೂ ಈ ರೀತಿ ‌ಆಗಬಾರದು ಎಂದು ಶಾಸಕ ಧೀರಜ್‌ ಮುನಿರಾಜು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!