Monday, February 9, 2026
Homeಕ್ರೈಮ್ಸಕಲೇಶಪುರ: ಪ್ರಪಾತಕ್ಕೆ ಬಿದ್ದ ಕಾರು: ಅದೃಷ್ಟವಶತ್ ಪಾರಾದ ಪ್ರವಾಸಿಗರು!

ಸಕಲೇಶಪುರ: ಪ್ರಪಾತಕ್ಕೆ ಬಿದ್ದ ಕಾರು: ಅದೃಷ್ಟವಶತ್ ಪಾರಾದ ಪ್ರವಾಸಿಗರು!

ಹಾಸನ: ಕಳೆದೆರಡು ದಿನದಿಂದ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ವಾಹನ ಸಾವರರಿಗೂ ದೊಡ್ಡ ಸಂಕಟವಾಗಿದ್ದು ವಾಹನ ಚಲಾಯಿಸುವವರಿಗೆ ದಾರಿ ಕಾಣದ ಹಾಗೆ ಮಳೆ ಬರುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಕಾರು ಅದೃಷ್ಟವಶತ್ ಪ್ರಾಣಪಾಯದಿಂದ ಪ್ರವಾಸಿಗರು ಪಾರಾದ ಘಟನೆ ಸಕಲೇಶಪುರ ತಾಲೂಕು ಮಾರನಹಳ್ಳಿ ಬಳಿ ನಡೆದಿದೆ.

ಹೌದು .. ಮಗನನ್ನು ಗುರುವಾಯಿನಕೆರೆಯಲ್ಲಿರುವ ನವೋದಯ ಶಾಲೆಗೆ ಬಿಡಲು ಪತ್ನಿ ಮತ್ತು ಇಬ್ಬರ ಮಕ್ಕಳ ಜೊತೆ ಶಿವಮೊಗ್ಗ ಮೂಲದ ಗೋವಿಂದನಾಯ್ಕ್  ತೆರಳುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿದ್ದು, ಮಾರನಹಳ್ಳಿ ಬಳಿ ತಡೆಗೋಡೆಯಿಲ್ಲದೆ ಕಾರಣ 80 ಅಡಿ ಆಳಕ್ಕೆ ಬಿದ್ದಿದೆ.


ಅವೈಜಾನಿಕ ಕಾಮಗಾರಿ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದು ಕಾರಿನಲ್ಲಿದ್ದ ನಾಲ್ವರು ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!