Saturday, March 28, 2026
Homeಕ್ರೈಮ್ಸಕಲೇಶಪುರ: ಮರಗುಂದ ಚೌಡಮ್ಮ ದೇವಿಯ ಮೂರ್ತಿ ಕದ್ದ ಖದೀಮರು!

ಸಕಲೇಶಪುರ: ಮರಗುಂದ ಚೌಡಮ್ಮ ದೇವಿಯ ಮೂರ್ತಿ ಕದ್ದ ಖದೀಮರು!

ಸಕಲೇಶಪುರ: ಪ್ರಖ್ಯಾತ ದೇವಾಲಯವಾದ ಬೆಟ್ಟದ ಬೈರೇಶ್ವರ ಬಳಿ ಇರುವ ಚೌಡಮ್ಮ ದೇವಿಯ ಮೂರ್ತಿ ಕಳ್ಳತನವಾಗಿರುವ ಘಟನೆ ಸಕಲೇಶಪುರ ತಾಲೂಕಿನ ಮರಗುಂದ ಗ್ರಾಮದಲ್ಲಿ ನಡೆದಿದೆ

ಹೌದು.. ಸಕಲೇಶಪುರ ತಾಲೂಕಿನ ಮರಗುಂದ ಗ್ರಾಮದ ದೇವಸ್ಥಾನದ ಮೂರ್ತಿಯನ್ನು ಕಳ್ಳರು ಕಳವು ಮಾಡಿದ್ದಾರೆ. ಸೋಮವಾರ ತಡರಾತ್ರಿ ಈ ಕೃತ್ಯ ನಡೆದಿದ್ದು ಕಳ್ಳ ದೇವಸ್ಥಾನದಲ್ಲಿ ಅತ್ತ ಇತ್ತ ತಿರುಗಾಡಿ ಗರ್ಭಗುಡಿ ಪ್ರವೇಶಿಸಿ, ಮೂರ್ತಿ ತೆಗೆದುಕೊಂಡು ಪರಾರಿಯಾಗಿದ್ದಾನೆ. ಈಗ ಈ ಘಟನೆ ಗ್ರಾಮಸ್ಥರ ಗೊಂದಲಕ್ಕೆ ಕಾರಣವಾಗಿದೆ

ದೇವರ ಮೂರ್ತಿ ಕಳವು ಸುದ್ದಿ ತಿಳಿಯುತ್ತಿದ್ದಂತೆ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ಜಮಾಯಿಸಿದ್ದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಈ ಪ್ರಕರಣ ಸ್ಥಳೀಯರಿಗೆ ನೋವುಂಟು ಆಗಿದ್ದು ಪ್ರತಿನಿತ್ಯ ಮೂರ್ತಿ ಪೂಜೆ ನಡೆಯುತ್ತಿದ್ದು ಈಗ
ಮೂರ್ತಿ ಕಾಣದೆ ಕಂಗೆಟ್ಟ ಅರ್ಚಕರು ಗ್ರಾಮಸ್ಥರಿಗೆ ತಿಳಿಸಿದ್ದು ದೇವರ ಮೂರ್ತಿ ಕಳವು ಗ್ರಾಮಕ್ಕೆ ಕೇಡು ಉಂಟಾಗುತ್ತದೆ ಎಂಬ ಭಯ ಗ್ರಾಮಸ್ಥರಲ್ಲಿ ಹುಟ್ಟಿದೆ.

ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಪ್ರಕರಣ ಕುರಿತಾಗಿ ತಹಶೀಲ್ದಾರ್ ಗೆ ಮನವಿ ಪತ್ರ ಮೂಲಕ ತಿಳಿಸಿದ್ದು ಆದಷ್ಟು ಬೇಗ ಖದೀಮರನ್ನು ಸೆರೆ ಹಿಡಿದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!