ಸಕಲೇಶಪುರ: ಟಿಪ್ಪು ಜಯಂತಿ ಆಚರಣೆ ಮಾಡಿದರೆ ಕರ್ನಾಟಕದಲ್ಲಿ ಮತ್ತೆ ಕೋಮು ಸಂಘರ್ಷಕ್ಕೆ ಸಾಕ್ಷಿಯಾಗಲಿದೆ ಎಂದು ರಾಜ್ಯಪಾಲರಿಗೆ ಹಿಂದೂ ಹಿತರಕ್ಷಣಾ ವೇದಿಕೆ ತಾಲೂಕು ಸಂಚಾಲಕರಾದ ಶಿವಾನಂದ ಎ ಅವರು ಪತ್ರವನ್ನು ಬರೆದಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಮತಾಂಧ ಟಿಪ್ಪು ಜಯಂತಿ ವಿವಾದದ ಬಗ್ಗೆ ಹಿಂದಿನ ಸರ್ಕಾರಗಳು ಪರಿಶೀಲಿಸಿ ಸರ್ಕಾರಿ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಿತ್ತು ಸರಿಯಷ್ಟೆ ಇದನ್ನ ಹಾಲಿ ಕಾಂಗ್ರೆಸ್ ಸರ್ಕಾರ ಮುಸ್ಲಿಂ ತುಷ್ಟಿಕರಣ ಮಾಡುವ ದುರುದ್ದೇಶದಿಂದ ಟಿಪ್ಪು ಜಯಂತಿ ಆಚರಣೆ ಮಾಡಬೇಕು ಎಂದು ವಿವಾದ ಹಾಗೂ ಮತಾಂಧತೆಯನ್ನು ಸೃಷ್ಟಿಸಲು ಹೊರಟಿರೋದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು.

ಹಾಗೆ ಸರ್ಕಾರ ಜನರಿಗೆ ಬೇಕಾದ ಅಭಿವೃದ್ಧಿ ಹಾಗೂ ಶಾಂತಿ ನೆಮ್ಮದಿ ನೀಡುವ ಬದಲು ಓಲೈಕೆ ರಾಜಕಾರಣ ಮಾಡುತ್ತ ಮತಾಂಧ ಟಿಪ್ಪುವಿನ ರೀತಿಯಲ್ಲೇ ಅಟ್ಟಹಾಸ ಮೆರೆದು ಕಾರ್ಯಕ್ರಮ ಮಾಡಿ ಎಂದು ಉತ್ತೇಜನ ಮಾಡಲು ಹಾಗೂ ಕಾರ್ಯಕ್ರಮ ಮೆರವಣಿಗೆ ಮಾಡುವ ಸಂಧರ್ಭದಲ್ಲಿ ಎಲ್ಲ ನಿಯಮ ಮೀರಿ ಜನಸಾಮಾನ್ಯರಿಗೆ ತೊಂದರೆ ಕೊಡುವ ದುರುದ್ದೇಶದಿಂದ ಮಾಡುವ ಕಾರ್ಯಕ್ರಮಗಳಿಂದ ಜನರಿಗೆ ತೊಂದರೆಯಾಗುತ್ತದೆ ಈ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡಬಾರದು ಎಂದು ಅನುಮೋದನೆಗೆ ಮಾನ್ಯ ರಾಜ್ಯಪಾಲರು ಸಹಿ ಹಾಕದೆ ತಿರಸ್ಕಾರ ಮಾಡಬೇಕು ಎಂದು ಪ್ರತಿಭಟನಾ ಮನವಿಯಲ್ಲಿ ಕೇಳಿಕೊಳ್ಳುತ್ತೇವೆ.
ದಯಮಾಡಿ ಟಿಪ್ಪು ಜಯಂತಿ ಎಂಬ ಆಚರಣೆ ಕರ್ನಾಟಕದಲ್ಲಿ ಮತ್ತೆ ಕೋಮು ಸಂಘರ್ಷಕ್ಕೆ ಜಯಂತಿ ಸಾಕ್ಷಿಯಾಗಲಿದ್ದು ಜನರ ಜನಜೀವನ ಸಂಕಷ್ಟಕ್ಕೆ ತಳ್ಳುವ ಸಾಧ್ಯತೆ ಇದ್ದು ರಾಜ್ಯಾದ್ಯಂತ ಶಾಂತಿ ಬಂಗವಾಗುವ ಎಲ್ಲ ಪ್ರಕರಣಗಳು ನಡೆಯುತ್ತವೆ ಹಾಗಾಗಿ ಟಿಪ್ಪು ಜಯಂತಿ ನಡೆಸಲು ಸರಕಾರ ಅವಕಾಶ ನೀಡಬಾರದು ಎಂದು ಈ ಮನವಿ ಮೂಲಕ ಕೇಳಿಕೊಳ್ಳುತ್ತೇವೆ
ಸಂವಿಂಧಾನಾ ವಿರೋಧಿ ನೀತಿ ಅನುಸರಿಸಲು ಹೊರಟಿರುವ ಸರ್ಕಾರ ಹಿಂದಿನ ಸರ್ಕಾರಗಳು ಅಧಿವೇಷನ ವಿಶೇಷ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದ ವಿರುದ್ಧವಾಗಿ ಕಾಂಗ್ರೆಸ್ ಶಾಸಕರ ಹೇಳಿಕೆ ಒಬ್ಬ ಜನಪ್ರತಿನಿಧಿಗೆ ಶೋಭೆ ತರುವಂಥದಲ್ಲ. ತುಷ್ಟಿಕರಣ ಚುನಾವಣಿಯಲ್ಲಿ ಇರಬೇಕೆ ಹೊರತು ಸರ್ಕಾರ ಆಡಳಿತದಲ್ಲಿ ಮುಸ್ಲಿಂ ತುಷ್ಟಿಕರಣ ಮಾಡುವ ಸಾಹಸ ಮಾಡಬಾರದು. ಟಿಪ್ಪುವಿನ ವಿಷಯ ಅಭಿವೃದ್ಧಿಗೆ ಮಾರಕ ಮತ್ತು ಜನರಿಗೆ ನೆಮ್ಮದಿ ಇಲ್ಲದಂತಾಗುತ್ತದೆ.
ಇದು ಸರ್ಕಾರದ ದುರಾಡಳಿತ ಎದ್ದು ತೋರಿಸುತ್ತದೆ. ಹಾಗು ಜನರ ನೆಮ್ಮದಿ ಕಸಿದುಕೊಳ್ಳಬೇಕು ಎಂಬ ದುರುದ್ದೇಶ ಹೊಂದಿರುವ ರೀತಿಯಲ್ಲಿ ಭಾಸವಾಗುತ್ತಿದೆ ಎಂದು ಹೇಳಿದರು.
