Monday, August 17, 2026
Homeಬ್ರೇಕಿಂಗ್ ನ್ಯೂಸ್IndiGo; ತೊಂದರೆಗೊಳಗಾದ ಪ್ರಯಾಣಿಕರಿಗೆ ₹10,000 ಮೌಲ್ಯದ ವೋಚರ್‌ ನೀಡಲು ಮುಂದಾದ ಇಂಡಿಗೋ!

IndiGo; ತೊಂದರೆಗೊಳಗಾದ ಪ್ರಯಾಣಿಕರಿಗೆ ₹10,000 ಮೌಲ್ಯದ ವೋಚರ್‌ ನೀಡಲು ಮುಂದಾದ ಇಂಡಿಗೋ!

Telegram Group
Join Now

ಇಂಡಿಗೋ (IndiGo) ವಿಮಾನಯಾನ ಸಂಸ್ಥೆಯು ಡಿಸೆಂಬರ್ 3 ರಿಂದ 5ರವರೆಗೆ ಸಿಬ್ಬಂದಿ ಕೊರತೆಯಿಂದಾಗಿ ವಿಮಾನ ನಿಲ್ದಾಣಗಳಲ್ಲಿ ಉಂಟಾದ ಅವ್ಯವಸ್ಥೆಯಿಂದಾಗಿ ತೊಂದರೆಗೊಳಗಾದ ಪ್ರಯಾಣಿಕರಿಗೆ ₹10,000 ಮೌಲ್ಯದ ವೋಚರ್‌ಗಳನ್ನು ನೀಡುವುದಾಗಿ ಘೋಷಿಸಿದೆ. ಈ ವೋಚರ್‌ಗಳನ್ನು ಮುಂದಿನ 12 ತಿಂಗಳುಗಳವರೆಗೆ ಯಾವುದೇ ಇಂಡಿಗೋ ಪ್ರಯಾಣಕ್ಕಾಗಿ ಬಳಸಬಹುದಾಗಿದೆ.

ಆದರೆ, ತೀವ್ರವಾಗಿ ತೊಂದರೆಗೊಳಗಾದ ಗ್ರಾಹಕರು ಯಾರು? ಮತ್ತು ವಿಮಾನಯಾನ ಸಂಸ್ಥೆಯು ಅವರನ್ನು ಹೇಗೆ ಗುರುತಿಸುತ್ತದೆ ಎಂಬುದರ ಕುರಿತು ಇಂಡಿಗೋ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.

ಈ ₹10,000 ಪರಿಹಾರವು, ವಿಮಾನಗಳು ರದ್ದಾದ 24 ಗಂಟೆಯ ಒಳಗೆ ಗ್ರಾಹಕರಿಗೆ ಸರ್ಕಾರಿ ಮಾರ್ಗಸೂಚಿಗಳ ಪ್ರಕಾರ ನೀಡಲಾಗುವ ₹5,000 ರಿಂದ ₹10,000 ಮೌಲ್ಯದ ಕಡ್ಡಾಯ ಪರಿಹಾರಕ್ಕಿಂತ ಹೆಚ್ಚುವರಿ ಮೊತ್ತವಾಗಿದೆ ಎಂದು ಇಂಡಿಗೋ ಸ್ಪಷ್ಟಪಡಿಸಿದೆ. ಈ ಹಿಂದೆ ರದ್ದಾದ ವಿಮಾನಗಳಿಗೆ ಸಂಬಂಧಿಸಿದಂತೆ ಅಗತ್ಯವಿರುವ ಮರುಪಾವತಿಗಳನ್ನು ಈಗಾಗಲೇ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಸರ್ಕಾರದ ಕ್ರಮಗಳು ಮತ್ತು ಪ್ರಸ್ತುತ ಪರಿಸ್ಥಿತಿ

ಹೊಸ ವಿಮಾನ ಸುರಕ್ಷತಾ ನಿಯಮಗಳನ್ನು ಜಾರಿಗೆ ತರಲು ಸಿದ್ಧತೆಯ ಕೊರತೆಯಿಂದಾಗಿ ಉಂಟಾದ ಸಿಬ್ಬಂದಿ ಕೊರತೆಯಿಂದಾಗಿ ನೂರಾರು ವಿಮಾನಗಳು ರದ್ದಾಗಿ ಸಾವಿರಾರು ಜನರನ್ನು ಸಿಲುಕಿಸಿದ ಕಾರಣ, ಸರ್ಕಾರವು ಇಂಡಿಗೋ ಸಂಸ್ಥೆಯ ಚಳಿಗಾಲದ ವೇಳಾಪಟ್ಟಿಯನ್ನು ಶೇಕಡಾ 10 ರಷ್ಟು ಕಡಿತಗೊಳಿಸಿದೆ.

ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರು, ”ನಾಗರಿಕ ವಿಮಾನಯಾನದಲ್ಲಿ ಸುರಕ್ಷತೆಯ ವಿಷಯವು ರಾಜಿಯಾಗದ ಅಂಶವಾಗಿದ್ದು, ಇಂತಹ ಅವ್ಯವಸ್ಥೆ ಮರುಕಳಿಸುವುದನ್ನು ತಡೆಯಲು ಇತರ ವಿಮಾನಯಾನ ಸಂಸ್ಥೆಗಳಿಗೆ ಉದಾಹರಣಯಾಗುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ”.

ಇಂಡಿಗೋ ತನ್ನ ಸೇವೆಗಳನ್ನು ಪುನಃಸ್ಥಾಪಿಸಿದೆ ಎಂದು ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದ್ದು, ನಾಲ್ಕು ದಿನಗಳಿಂದ ತನ್ನ ಎಲ್ಲಾ ಸೇವೆಗಳನ್ನು ನಿರ್ವಹಿಸುತ್ತಿದೆ. ಕಳೆದ ಮೂರು ದಿನಗಳಿಂದ ಹವಾಮಾನ, ತಾಂತ್ರಿಕ ಮತ್ತು ಇತರ ನಿಯಂತ್ರಿಸಲಾಗದ ಅಂಶಗಳನ್ನು ಹೊರತುಪಡಿಸಿ ಬೇರೆ ಯಾವುದೇ ರದ್ದತಿಗಳು ಸಂಭವಿಸಿಲ್ಲ ಎಂದು ತಿಳಿಸಿದೆ. ಇಂಡಿಗೋ ಈಗ 1,900ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments