ಕೊಪ್ಪ: ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು, ಶೃಂಗೇರಿ ವಿಧಾನಸಭೆ ಕ್ಷೇತ್ರದ ಹಿರಿಯ ನೇತಾರರು ಆಗಿದ್ದ ಹೆಚ್.ಟಿ. ರಾಜೇಂದ್ರ ಅವರು ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧರಾಗಿದ್ದು ಅವರ ಅಗಲಿಕೆ ನೋವನ್ನು ತಂದಿದೆ ಎಂದು ಜೆಡಿಎಸ್ ಹಿರಿಯ ನಾಯಕ ಎಚ್.ಡಿ.ದೇವೇಗೌಡ , ಎಚ್,ಡಿ. ಕುಮಾರಸ್ವಾಮಿ, ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ.

ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ.ದೇವೇಗೌಡರ ಆಪ್ತರು, ಜನತಾದಳ ಪಕ್ಷದ ರಾಜ್ಯ ಉಪಾಧ್ಯಕ್ಷರು, ಶೃಂಗೇರಿ ವಿಧಾನಸಭೆ ಕ್ಷೇತ್ರದ ಹಿರಿಯ ನೇತಾರರು ಆಗಿದ್ದ ಶ್ರೀ ಹೆಚ್.ಟಿ. ರಾಜೇಂದ್ರ ಅವರ ನಿಧನದ ವಾರ್ತೆ ಕೇಳಿ ತೀವ್ರ ಆಘಾತವಾಗಿದೆ ಎಂದು ಟ್ವೀಟ್ ಮೂಲಕ ಎಚ್.ಡಿ. ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದರು.
ಅತ್ಯಂತ ನಿಷ್ಠಾವಂತ ಸೇನಾನಿಯಾಗಿ, ತಳಮಟ್ಟದಿಂದ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವಲ್ಲಿ ಅವಿರತವಾಗಿ ಶ್ರಮಿಸಿದ್ದ ಅವರು, ತಮ್ಮ ಇಡೀ ಬದುಕನ್ನು ಪಕ್ಷಕ್ಕೇ ಸಮರ್ಪಿಸಿಕೊಂಡಿದ್ದರು. ಶ್ರೀಯುತರ ಅಗಲಿಕೆ ಬಹುದೊಡ್ಡ ನಷ್ಟ ಹಾಗೂ ವೈಯಕ್ತಿಕವಾಗಿ ನಾನು ಬಹಳ ದುಃಖಿತನಾಗಿದ್ದೇನೆ.
ಶ್ರೀ ರಾಜೇಂದ್ರ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ, ಅಭಿಮಾನಿಗಳಿಗೆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು
ಹಾಗೂ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಸಂತಾಪ ವ್ಯಕ್ತ ಪಡಿಸಿದ್ದು ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು, ಶೃಂಗೇರಿ ವಿಧಾನಸಭೆ ಕ್ಷೇತ್ರದ ಹಿರಿಯ ಮುಖಂಡರು, ರೈತಪರ ಹೋರಾಟಗಾರರೂ ಆಗಿದ್ದ ಶ್ರೀ ಹೆಚ್.ಟಿ ರಾಜೇಂದ್ರ ಅವರು ನಮ್ಮನ್ನೆಲ್ಲಾ ಅಗಲಿರುವುದು ಅತ್ಯಂತ ದುಃಖದ ಸಂಗತಿ.
ಭಗವಂತನು ಅಗಲಿದ ಅವರ ದಿವ್ಯಾತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ, ಅಭಿಮಾನಿಗಳಿಗೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.