Tuesday, February 10, 2026
Homeಜಿಲ್ಲಾಸುದ್ದಿಶಿರಾಡಿಘಾಟ್: ಸಾಲು ಸಾಲು ರಜೆ: ರಾ.ಹೆ.75ರಲ್ಲಿ ಟ್ರಾಫಿಕ್‌ ಜಾಮ್‌, ಪೊಲೀಸರು ಹೈರಾಣ!

ಶಿರಾಡಿಘಾಟ್: ಸಾಲು ಸಾಲು ರಜೆ: ರಾ.ಹೆ.75ರಲ್ಲಿ ಟ್ರಾಫಿಕ್‌ ಜಾಮ್‌, ಪೊಲೀಸರು ಹೈರಾಣ!

ಹಾಸನ: ಸಾಲು ಸಾಲು ರಜೆ ಹಿನ್ನೆಲೆ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಸಂಖ್ಯೆಯಲ್ಲಿ ಜನ ತೆರಳುತ್ತಿದ್ದಾರೆ. ಪರಿಣಾಮ ಸಕಲೇಶಪುರ ಶಿರಾಡಿಘಾಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಸಾವಿರಾರರು ವಾಹನಗಳಲ್ಲಿ ಬೆಂಗಳೂರಿನಿಂದ ಮಂಗಳೂರು, ಮಂಗಳೂರು ಕಡೆಯಿಂದ ಬೆಂಗಳೂರಿಗೆ ಜನ ತೆರಳುತ್ತಿದ್ದಾರೆ. ಇದರಿಂದ ಸುಮಾರು ಅರ್ಧ ಗಂಟೆಯಿಂದ ವಾಹನಗಳು ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತಿವೆ. ಟ್ರಾಫಿಕ್‌ ಜಾಮ್‌ನಿಂದ ಪ್ರವಾಸಿಗರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. 

ದಸರಾ ಪ್ರಯುಕ್ತ ಸಾಲು ಸಾಲು ರಜೆಯಿಂದಾಗಿ ಪ್ರವಾಸಿಗರು ಪ್ರವಾಸಿ ತಾಣಗಳುಗೆ ತೆರಳುತ್ತಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಕೆಲಸ ಮಾಡುವವರು ಸ್ವಂತ ಊರಿಗೆ ತೆರಳುತ್ತಿದ್ದಾರೆ. ಇದರ ನಡುವೆ ಕೆಲವರು ಊರಿಂದ ವಾಪಸ್‌ ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದಾರೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ಟ್ರಾಫಿಕ್‌ನಲ್ಲಿ ಸಿಲುಕುವಂತಾಗಿದೆ.

ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಸಕಲೇಶಪುರ ಪೊಲೀಸರು ಹರಸಾಹಸ ಪಡುತ್ತಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!