ಮಂಡ್ಯ: ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ ದೇಶ ವಿದೇಶಗಳಲ್ಲೂ ಸದ್ದು ಮಾಡ್ತಿದ್ದು, ರೇವಣ್ಣ ಕುಟುಂಬದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪ್ರಜ್ವಲ್ ಇಷ್ಟೆಲ್ಲಾ ಅನಾಹುತ ಮಾಡ್ತಿದ್ದಾಗ ಅವ್ರ ಅಮ್ಮ ಅಪ್ಪ ಏನು ಕತ್ತೆ ಕಾಯ್ತಿದ್ರಾ ಎಂದು ಪ್ರಶ್ನಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಿವರಾಮೇಗೌಡ, ಈ ಪ್ರಕರಣ ಅದೇನೇ ಇರಬಹುದು. ಆದ್ರೆ ದೇವೇಗೌಡರ ಬಗ್ಗೆ ನನಗೆ ಗೌರವವಿದೆ. ದೊಡ್ಡಗೌಡರಿಗೆ ಈ ವಯಸ್ಸಿನಲ್ಲಿ ಇದನ್ನೆಲ್ಲಾ ನೋಡ್ಬೇಕಾಯ್ತಲ್ಲಾ ಅನ್ನೋದೆ ನನಗೆ ಬೇಜಾರು. ಕಳೆದ ಎರಡು ವರ್ಷಗಳಿಂದ ದೇವರಾಜೇಗೌಡ ಪೆನ್ ಡ್ರೈವ್ ಬಗ್ಗೆ ಹೇಳಿ ಬ್ಲ್ಯಾಕ್ ಮೇಲ್ ಮಾಡ್ತಾನೆ ಬಂದ್ರು. ಆಗ ಇವ್ರೆಲ್ಲಾ ಕತ್ತೆ ಕಾಯ್ತಿದ್ರಾ? ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ರೇವಣ್ಣ ಕುಟುಂಬದವರ ಬಗ್ಗೆ ಹಿಂದೆಯೇ ಬಹಳ ಗಂಭೀರ ಆರೋಪ ಮಾಡಿದ್ದ. ನನ್ನನ್ನ ಕಿಡ್ನ್ಯಾಪ್ ಮಾಡಿದ್ರು. ನನ್ನ ಹೆಂಡತಿ ಗರ್ಭಿಣಿ ಅಂದ್ರೂ ಬಿಡದೇ ಒದ್ದು ಹಲ್ಲೆ ಮಾಡಿದ್ರು ಅಂತೆಲ್ಲಾ ಆರೋಪ ಮಾಡಿದಾಗ ಕುಮಾರಸ್ವಾಮಿ ಏನು ಎತ್ತ ಅಂತ ಎಲ್ಲರನ್ನೂ ಕೂರಿಸಿಕೊಂಡು ಇದನ್ನೆಲ್ಲಾ ಬಗೆಹರಿಸಬಹುದಿತ್ತು. ಎಲ್ಲೋ ಒಂದು ಕಡೆ ಕುಮಾರಸ್ವಾಮಿಯವ್ರು ಹೀಗೆಲ್ಲಾ ಆಗ್ಲಿ ಅಂತ ಕಾಯ್ತಿದ್ರೋ ಏನೋ ಗೊತ್ತಿಲ್ಲ ಎಂದು ಶಿವರಾಮೇಗೌಡ ವಾಗ್ದಾಳಿ ನಡೆಸಿದ್ರು.