Monday, February 9, 2026
Homeಕ್ರೈಮ್ಶೃಂಗೇರಿ: ಆನೆ ದಾಳಿಯಿಂದ ಬೆಳೆ ಹಾನಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿ ಹೋರಾಟ ಸಮಿತಿಯಿಂದ ಮನವಿ

ಶೃಂಗೇರಿ: ಆನೆ ದಾಳಿಯಿಂದ ಬೆಳೆ ಹಾನಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿ ಹೋರಾಟ ಸಮಿತಿಯಿಂದ ಮನವಿ

ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶೀರ್ಲು ಎಂಬ ಗ್ರಾಮದ ಅಡಲಕ್ಕಿ ಎಂಬಲ್ಲಿ ಕಾಡಾನೆ ಹಾವಳಿಯಿಂದ ಗ್ರಾಮದ ಸೀತು ಎಂಬ ಮಹಿಳೆಯ ಗದ್ದೆ, ತೋಟಕ್ಕೆ ಕಳೆದ 15 ದಿನಗಳಿಂದ ನಿರಂತರ ದಾಳಿ ಮಾಡಿ ಅಡಿಕೆ ಮರ, ಫಸಲು ಬಂದ ಭತ್ತದ ಬೆಳೆಯನ್ನು ಸಂಪೂರ್ಣ ನಾಶ ಮಾಡಿದೆ.

ಈ ಹಿನ್ನೆಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕಾರ್ಕಳ ವಿಭಾಗ ಇವರಿಗೆ ಶೀರ್ಲು ಭಾಗದಲ್ಲಿ ಸತತ ವಾಗಿ ಆನೆ ದಾಳಿಯಿಂದ ಬೆಳೆ ಹಾನಿ ಹಾಗೂ ತೊಂದರೆ ಆಗುತ್ತಿರುವುದು ತಿಳಿದು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

ಜಮೀನಿನ ಪಕ್ಕದಲ್ಲೇ ಇರುವ ಮನೆಯಲ್ಲಿ ಮೂರು ಜನ ವಾಸವಿದ್ದು,ಆ ಮೂವರು ಮಹಿಳೆಯರಾಗಿದ್ದಾರೆ. ಎಲ್ಲರಿಗೂ ವಯಸ್ಸಾಗಿದ್ದು,ತುಂಬಾ ಮುಗ್ದ ಜನರಿದ್ದಾರೆ. ಜೀವನಕ್ಕಾಗಿ ತಾವೇ ಉತ್ತಿ,ಬಿತ್ತಿದ ಜಮೀನನ್ನು ಆನೆ ನಾಶ ಮಾಡಿದ್ದರಿಂದ ಜೀವನಕ್ಕೆ ಮುಂದೇನು ಎಂಬ ಚಿಂತೆ ಶುರುವಾಗಿದೆ.

ಸಂಪೂರ್ಣ ಬೆಳೆ ನಾಶವಾಗಿದ್ದು ಅದಕ್ಕೆ ಸೂಕ್ತ ಪರಿಹಾರ ನೀಡಬೇಕಿದೆ,ತೊಂದರೆ ನೀಡುತ್ತಿರುವ ಕಾಡಾನೆಯು ಅಮಾಯಕ ಜೀವಗಳನ್ನು ಬಲಿ ಪಡೆಯುವ ಮೊದಲು ಕೂಡಲೇ ಅಲ್ಲಿಂದ ಸ್ಥಳಾಂತರಿಸಬೇಕಿದೆ ಹಾಗೂ ಕೂಡಲೇ ಅಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಪುನರ್ವಸತಿ ಯೋಜನೆಯಡಿ ಸದ್ಯದ ಮಾರುಕಟ್ಟೆ ಬೆಲೆಗನುಗುಣವಾಗಿ ಸೂಕ್ತ ಪರಿಹಾರ ನೀಡಿ ಅವರಿಗೆ ಪುನರ್ವಸತಿ ಕಲ್ಪಿಸಬೇಕಿದೆ.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!