ಶೃಂಗೇರಿ: ಮಲೆನಾಡಿನಲ್ಲಿ ಅತೀ ಹೆಚ್ಚು ಮಳೆಯಾಗಿ ಈ ಬಾರಿ ಕಾಫಿ ಅಡಿಕೆ ಮೆಣಸುಗಳಿಗೆ ಭಾರೀ ಅನಾಹುತವಾಗಿದ್ದು ಅದರಲ್ಲೂ ಶೃಂಗೇರಿ ಭಾಗದಲ್ಲಿ ಅಡಿಕೆ ಬೆಳೆ ಸಂಪೂರ್ಣ ಮಳೆಗೆ ಫಸಲು ಕಡಿಮೆಯಾಗಿದೆ.
ಹೌದು .. ಅಡಿಕೆ ಹಾಗೂ ಕಾಫಿಗೆ ಇತ್ತೀಚಿನ ವರ್ಷಗಳಲ್ಲಿ ಬಾಧಿಸುತ್ತಿರುವ ರೋಗಗಳಿಂದ ಅಡಿಕೆ ಬೆಳೆಗಾರರ ನೆಮ್ಮದಿ ಹಾಳಾಗಿರುವುದಂತೂ ಸತ್ಯ. ಕೇಂದ್ರ ಸರ್ಕಾರದ ಗುಟ್ಕಾ ನಿಷೇದ ಗುಮ್ಮದೊಂದಿಗೆ ಅಡಿಕೆಗೆ ಕಾಡುವ ರೋಗಗಳೂ ಕೂಡ ರೈತರನ್ನು ಕಂಗಾಲಾಗಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಇವರ ಆದೇಶದ ಮೇರೆಗೆ ಶೃಂಗೇರಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ತೋಟಗಾರಿಕೆ ಬೆಳೆಗಳಿಗೆ ಆಗಿರುವ ಹಾನಿ ಬಗ್ಗೆ ವೈಜ್ಞಾನಿಕ ದೃಢೀಕರಣ ನೀಡಲು ಕೃಷಿ ವಿಜ್ಞಾನಿಗಳ ತಂಡದಿಂದ ವಿವಿಧ ತೋಟಗಳ ಪರಿಶೀಲನೆ ನಡೆಸಲಾಗಿದೆ.
ಹಾಗೆ ಅಲ್ಲಿನ ಕಾಫಿ, ಅಡಿಕೆ ರೋಗಕ್ಕೆ ಕಾರಣ ಏನು ಹಾಗೆ ಅನಾವೃಷ್ಠಿಯಿಂದ ಏನೆಲ್ಲಾ ಆಗಿದೆ ಎಂದು ಪರಿಶೀಲಿಸಿ ಅದಕ್ಕೊಂದು ಏನು ಪರಿಹಾರ ಸೂಚಿಸುತ್ತಾರೆ ಎಂದು ನಾವೆಲ್ಲಾ ಕಾದು ನೋಡಬೇಕಿದೆ.
ಕೃಷಿ ಅಧಿಕಾರಿಗಳಾದ ಸಸ್ಯ ಮತ್ತು ಕೀಟ ಶಾಸ್ತ್ರಜ್ಞರಾದ ಡಾ. ಅಂಜನ ಕುಮಾರ್ ಶಿವಮೊಗ್ಗ, ಮಣ್ಣು ವಿಜ್ಞಾನಿಗಳಾದ ಡಾ. ಸರಸ್ವತಿ , ಸಸ್ಯರೋಗ ಶಾಸ್ತ್ರಜ್ಞರಾದ ಡಾ. ಸಂಜೀವ ಜಕಾತಿಮಠ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಜಿ.ಪಂ ಶೃಂಗೇರಿ ಶ್ರೀ ಕೃಷ್ಣ ವಿ.ಎ, ಭರತ್ ರಾಜ್ ಕೆರೆಮನೆ ಶೃಂಗೇರಿ, ವಸಂತ ಶೆಟ್ಟಿಹಳ್ಳಿ ಮೆಣಸೆ, ಮತ್ತು ಅಧ್ಯಕ್ಷರು, ರೈತ ಸಂಘದ ಸದಸ್ಯರಾದ ಚಂದ್ರ ಶೇಖರ್ ಶಾನುವಳ್ಳಿ ಅವರು ಈ ವೇಳೆ ಉಪಸ್ಥಿತರಿದ್ದರು.
ವರದಿ: ವಿಠಲ್ ಶೃಂಗೇರಿ
7676798969
