Monday, February 9, 2026
Homeಜಿಲ್ಲಾಸುದ್ದಿಶೃಂಗೇರಿ: ಕರ್ನಾಟಕ ಪಬ್ಲಿಕ್ ಶಾಲೆಗೆ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೀರ್ತನಾ ಭೇಟಿ, ಪರಿಶೀಲನೆ!

ಶೃಂಗೇರಿ: ಕರ್ನಾಟಕ ಪಬ್ಲಿಕ್ ಶಾಲೆಗೆ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೀರ್ತನಾ ಭೇಟಿ, ಪರಿಶೀಲನೆ!

ಶೃಂಗೇರಿ: ಚಿಕ್ಕಮಗಳೂರು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಶ್ರೀಮತಿ ಕೀರ್ತನಾ ಅವರು ಬೇಗಾರಿನಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ ಶುಕ್ರವಾರ ಭೇಟಿ ನೀಡಿ ಶಾಲೆಯ ಶೌಚಾಲಯ ವ್ಯವಸ್ಥೆ, ಬಿಸಿಯೂಟದ ಬಗ್ಗೆ ವಿಚಾರಿಸಿದರು.

ಶಾಲೆಯಲ್ಲಿ ಇರುವ ಶೌಚಾಲಯ ವ್ಯವಸ್ಥೆ ಉತ್ತಮವಾಗಿದೆ ಆದರೆ ಇಲ್ಲಿರುವ 2೫0 ಮಕ್ಕಳಿಗೆ ವ್ಯವಸ್ಥೆ ಸಾಕಾಗುವುದಿಲ್ಲ ಎಂದು ಮನಗಂಡು ಅಧಿಕಾರಿಗಳು ಶೃಂಗೇರಿ ತಾಲೂಕಿನ ಹಾಗೂ ಗ್ರಾಮದ ಪಿಡಿಒಗಳ ಬಳಿ ಶಾಲಾ ವಿದ್ಯಾರ್ಥಿಗಳ ಉತ್ತಮವಾದ ಹಾಗೂ ಆಧುನಿಕವಾದ ಶೌಚಾಲಯ ನಿರ್ಮಿಸಲು ವ್ಯವಸ್ಥೆಗೊಳಿಸಿ ಎಂದು ತಿಳಿಸಿದರು.

ನಂತರ ಶಾಲೆಯಲ್ಲಿ ಮಕ್ಕಳಿಗೆ ಮಾಡುವ ಊಟವನ್ನೇ ತಾವು ಸಹ ಊಟ ಮಾಡಿ ಅಡುಗೆ ತುಂಬಾ ರುಚಿಯಾಗಿದೆ ಎಂದು ಅಡುಗೆ ಸಿಬ್ಬಂದಿಗಳನ್ನು ಮೆಚ್ಚಿಕೊಂಡರು.

ತದನಂತರ ತರಗತಿ ಕೋಣೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಆತ್ಮೀಯತೆಯಿಂದ ಮಾತನಾಡಿಸಿ ಅವರು ಬರೆದ ಗೃಹ ಪಾಠಗಳನ್ನು ಶಿಕ್ಷಕರು ಅವುಗಳನ್ನು ತಿದ್ದಿದ್ದಾರೆ ಎಂದು ಪರಿಶೀಲಿಸಿದರು. ಶಿಕ್ಷಕರು ತಪ್ಪುಗಳನ್ನು ತಿದ್ದಿ ಸೂಚನೆಗಳನ್ನು ಬರೆದಿದ್ದು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಗೆ 7ನೇ ತರಗತಿಯ ವಿದ್ಯಾರ್ಥಿಗಳ ಜೊತೆ 15 ನಿಮಿಷ ಮಾತುಕತೆ ನಡೆಸಿ ನಂತರ ಶಾಲೆಯ ಶಿಕ್ಷಕರನ್ನು ಅಡುಗೆ ಸಿಬ್ಬಂದಿಯವರನ್ನು ಅಭಿನಂದಿಸಿದರು.

ಈ ವೇಳೆ ಶೃಂಗೇರಿ ಇಒ ಸುದೀಪ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀಮತಿ ಶಾರದಮ್ಮ, ಅಭಿಯಂತರು ಶ್ರೀಮತಿ ಶ್ವೇತ, ಭುವೇಂದ್ರ, ಗ್ರಾಪಂ ಬೇಗನೆ ಪಿಡಿಒ ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ: ವಿಠಲ್‌ ಶೃಂಗೇರಿ

767679869

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!