ಶೃಂಗೇರಿ: ಕ್ಷೇತ್ರದ ಕೆರೆಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಕಳೆದೊಂದು ತಿಂಗಳ ಹಿಂದೆ ಆನೆ ದಾಳಿಗೆ ಎರಡು ಅಮಾಯಕ ಜೀವ ಹೋಗಿದ್ದು ಈ ವಿಷಯ ಮಾಸುವ ಮುನ್ನವೇ ಮತ್ತೆ ಶೀರ್ಲು ಗ್ರಾಮದಲ್ಲಿ ಭತ್ತದ ಬೆಳೆಯನ್ನು ನಾಶ ಮಾಡಿದ್ದು ಈ ದಿನದಿಂದಲೇ ಆನೆ ಸ್ಥಳಾಂತರಿಸಬೇಕು ಎಂದು ಬಿಜೆಪಿ ಶೃಂಗೇರಿ ಮಂಡಲ, ಕೆರೆ ಗ್ರಾಮ ಪಂಚಾಯಿತಿ ಬಿಜೆಪಿ ಕೇಂದ್ರದ ಅಧ್ಯಕ್ಷರು ಹಾಗೂ ಸದಸ್ಯರು ಶೃಂಗೇರಿ ತಾಲೂಕು ಬಿಜೆಪಿ ರೈತ ಮೋರ್ಚ ಸೇರಿ ಮನವಿ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹೌದು ..ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕ್ಷೇತ್ರದ ಕೆರೆಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಕಳೆದೊಂದು ತಿಂಗಳ ಹಿಂದೆ ಆನೆ ದಾಳಿಗೆ ಎರಡು ಅಮಾಯಕ ಜೀವ ಹೋಗಿದ್ದು ಈ ವಿಷಯ ಮಾಸುವ ಮುನ್ನವೇ ಮತ್ತೆ ಶೀರ್ಲು ಗ್ರಾಮದಲ್ಲಿ 15 ದಿನದಿಂದ ಅಣಲಕ್ಕಿ ಎಂಬಲ್ಲಿ ನಿರಂತರವಾಗಿ ಆನೆ ಬರುತ್ತಿದ್ದು 3 ಮಹಿಳೆಯರೇ ವಾಸವಿರುವ ಮತ್ತು ಅವರ ಸಹೋದರರ ಕುಟುಂಬದ ಭತ್ತದ ಗದ್ದೆಗೆ ಬಂದಿದ್ದು 4 ಎಕರೆಯಲ್ಲಿ ಬೆಳೆದಿದ್ದ ಬೆಳೆಯನ್ನು ಸಂಪೂರ್ಣವಾಗಿ ತಿಂದು ನಾಶಪಡಿಸಿದ್ದಾರೆ.
ಹಾಗೆ ಸಂತ್ರಸ್ತರ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬೆಳಿಗ್ಗೆ ಸಂಜೆ ಓಡಾಡುವವರಿಗೆ ಅರಣ್ಯ ಇಲಾಖೆಯಿಂದ ವಾಹನ ನೀಡಲು ಒತ್ತಾಯಿಸಲಾಯಿತು ಮತ್ತು ವ್ಯಕ್ತಿಗಳು ಬಲಿಯಾದಲ್ಲಿ ಕನಿಷ್ಠ ಒಂದು ಕೋಟಿ ರೂ ಪರಿಹಾರ ನೀಡಬೇಕು ಹಾಗೆ ಮತ್ತು ಮುಂದಿನ ಜನವರಿ 5ರೊಳಗೆ ಜನ ಸಂಪರ್ಕ ಸಭೆ ನಡೆಸಿ ಪುನರ್ವಸತಿ ಪ್ಯಾಕೇಜ್ ನ್ನು ಜಾರಿಗೊಳಿಸಲು ಗಡುವು ನೀಡಿ ಇಲ್ಲದಿದ್ದರೆ ಅಹೋರಾತ್ರಿ ಧರಣಿ ಮಾಡಾಲಾಗುವುದು ಎಂದು ತಿಳಿಸಲಾಯಿತು
ಹಲವು ಬಾರಿ ಮೇಲಾಧಿಕಾರಿಗಳ ಗಮನಕ್ಕೂ ತಂದರು ಅವರು ಇಟಿಎಫ್ ಕಳಿಸಿದ್ದೇವೆ ಎಂದು ಸಬೂಬ್ ಹೇಳುತ್ತಾ ಕಾಲ ಕಳೆಯುತ್ತಿದ್ದು ಇಲ್ಲಿನ ಗ್ರಾಮಸ್ಥರಿಗೆ ಇದರಿಂದ ಯಾವುದೇ ಉಪಯೋಗವಾಗಿರುವುದಿಲ್ಲ.
ಅಲ್ಲದೆ ಆನೆದಾಳಿಗೆ ಎರಡು ಅಮಾಯಕ ಜೀವ ಬಲಿಯದ ನಂತರ ಮಾನ್ಯ ಶಾಸಕರು ನವೆಂಬರ್ 17ರಂದು ಅರಣ್ಯ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರು ಅರಣ್ಯ ಇಲಾಖೆ ಮೇಲಾಧಿಕಾರಿಗಳ ಮೂಲಕ ಜನ ಸಂಪರ್ಕ ಸಭೆಯನ್ನು ಕರೆಯುತ್ತೇವೆ ಹಾಗೂ ಈ ಭಾಗದಲ್ಲಿ ಜನರಿಗೆ ಒಳ್ಳೆಯ ಪರಿಹಾರ ಪ್ಯಾಕೇಜ್ ನೀಡಿ ಪುನರ್ವಸತಿ ಕಲ್ಪಿಸುತ್ತೇವೆಂದು ಸುಳ್ಳು ಭರವಸೆಯನ್ನು ನೀಡಿ ಆ ದಿನ ಪ್ರತಿಭಟನೆಯ ಕಾವನ್ನು ತಣ್ಣಗಾಗಿಸಿರುತ್ತಾರೆ ಅಷ್ಟೇ
ಆದುದರಿಂದ ಈ ಕೂಡಲೇ ಇಲ್ಲಿ ಸುತ್ತಮುತ್ತಲಿರುವ ಆನೆಗಳನ್ನು ಸ್ಥಳಾಂತರಗೊಳಿಸಬೇಕು ಇನ್ನು ಮುಂದೆ ಆನೆ ಬಾರದಂತೆ ಸೂಕ್ತ ಬಂದೋಬಸ್ತ್ ಮಾಡಿ ಈ ಹಿಂದೆ ತಿಳಿಸಿದಂತೆ ಜನ ಸಂಪರ್ಕ ಸಭೆಯನ್ನು ಅರಣ್ಯ ಸಚಿವರು ಜಿಲ್ಲಾ ಉಸ್ತುವಾರಿ, ಸಚಿವರು ಅರಣ್ಯ ಇಲಾಖೆಯವರೊಂದಿಗೆ ನಡೆಸಿ ಒಳ್ಳೆಯ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿ ಪುನರ್ವಸತಿ ಕಲ್ಪಿಸಕೊಡಬೇಕಾಗಿ ಬಿಜೆಪಿ ಶೃಂಗೇರಿ ಮಂಡಲ, ಕೆರೆ ಗ್ರಾಮ ಪಂಚಾಯಿತಿ ಬಿಜೆಪಿ ಕೇಂದ್ರದ ಅಧ್ಯಕ್ಷರು ಹಾಗೂ ಸದಸ್ಯರು ಶೃಂಗೇರಿ ತಾಲೂಕು ಬಿಜೆಪಿ ರೈತ ಮೋರ್ಚ ಎಲ್ಲರೂ ಸೇರಿ ಮನವಿಯನ್ನು ಸಲ್ಲಿಸುತ್ತಿದ್ದೇವೆ.
ಈ ವೇಳೆ ಅರಣ್ಯ ಉಪ ಸಂರಕ್ಷಣಾ ಅಧಿಕಾರಿಗಳು ವನ್ಯಜೀವಿ ವಿಭಾಗ
ಸ್ಥಳಕ್ಕೆ ಆಗಮಿಸಿದ್ದು ಸಂತ್ರಸ್ಥರ ಸಮಸ್ಯೆಗಳನ್ನ ಆಲಿಸಿದರು.
ವರದಿ: ವಿಠಲ್ ಶೃಂಗೇರಿ
7676798969
