ಶೃಂಗೇರಿ ಶಾರದಾ ಪೀಠದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ಭಕ್ತರಿಂದ ಹಣ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಶೃಂಗೇರಿ ಮಠ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದ ಮತ್ತು ವಿಶೇಷ ಪೂಜೆಯ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚನೆ.
ಶೃಂಗೇರಿ ಶಾರದಾ ಪೀಠದ ಯಾತ್ರಿ ನಿವಾಸ ಗೆಸ್ಟ್ ಹೌಸ್ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿಕೊಂಡಿದ್ದ ಅಪರಿಚಿತ ವ್ಯಕ್ತಿ. ಮೈಸೂರಿನ ಭಕ್ತರೊಬ್ಬರಿಗೆ ರೂಂ ಕಾಯ್ದಿರಿಸುವ ಬಗ್ಗೆ ಮುಂಗಡವಾಗಿ 5 ಸಾವಿರ ಹಣವನ್ನು ಆನ್‌ಲೈನ್ ಮೂಲಕ ಪಡೆದು ವಂಚಿಸಿದ್ದಾನೆ. ಅಲ್ಲದೆ ಶ್ರೀಮಠದ ಯಾತ್ರಿ ನಿವಾಸದ ಫೋಟೋ ವೆಬ್‌ಸೈಟ್‌ನಲ್ಲಿ ಹಾಕಿಕೊಂಡಿದ್ದಾನೆ. ನ. 9ರಂದು ಶ್ರೀಮಠಕ್ಕೆ ಬಂದು ರೂಮಿನ ಬಗ್ಗೆ ವಿಚಾರಿಸಿದಾಗ ಮೈಸೂರಿನ ವ್ಯಕ್ತಿಗೆ ಮೋಸ ಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧ ದೇಗುಲಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರದು ವಿಶೇಷ ಪೂಜೆ, ಪ್ರಸಾದ ಮತ್ತು ವಿಶೇಷ ಸೇವೆ ಹೆಸರಿನ ಲಿಂಕ್ ಅಲ್ಲಿ ಕೋಟ್ಯಾಂತರ ರೂ.ಗಳನ್ನು ವಂಚಸುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು ಹೀಗಾಗಿ ಭಕ್ತರು ತುಂಬಾ ಜಾಗೃತೆ ವಹಿಸಿ ರೂಂ ಬುಕ್ ಗಳನ್ನು ಮಾಡಬೇಕಾಗಿ ವಿನಂತಿಕೊಳ್ಳಲಾಗಿದೆ.
