ಶೃಂಗೇರಿ: ಇನ್ನರ್ವೀಲ್ ಕ್ಲಬ್ ನ ಜಿಲ್ಲಾಧ್ಯಕ್ಷರು ಅಧಿಕೃತ ಭೇಟಿಯ ಕಾರ್ಯಕ್ರಮವಿದ್ದು ಜಿಲ್ಲಾಧ್ಯಕ್ಷರಾದ ಶಿವಮೊಗ್ಗದ ಶಬರಿ ಕಡಿದಾಳ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಹೌದು.. ಅಕ್ಟೋಬರ್ 8 ರಂದು ಬುಧವಾರ ಸಂಜೆ 6.30 ಕ್ಕೆ ಶೃಂಗೇರಿ ಇನ್ನರ್ವೀಲ್ ಕ್ಲಬ್ ಅತ್ಯಂತ ಚಟುವಟಿಕೆಯಿಂದ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುವುದಾಗಿ ಹಾಗೂ 2025 -26 ನೇ ಸಾಲಿನ ಅಧ್ಯಕ್ಷರಾದ ಮಂಜುಳಾ ಸುಬ್ರಮಣ್ಯ ರವರು ಜನಪರ ಸೇವಾ ಕಾರ್ಯಗಳನ್ನು ಮಾಡುತ್ತಾ ಅತ್ಯಂತ ಕ್ರಿಯಾಶೀಲರಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ಮಾತುಗಳನ್ನಾಡಿದರು .

ಸೇವಾ ಕಾರ್ಯಗಳಿಗೆ ಪ್ರಥಮ ಆದ್ಯತೆಯನ್ನು ನೀಡಿ ಜಿಲ್ಲೆಯಲ್ಲೇ ಶೃಂಗೇರಿ ಕ್ಲಬ್ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿದೆ ಎಂದು ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ ಸುಬ್ರಹ್ಮಣ್ಯ ಅಂಬಲಮನೆ ಕ್ಲಬ್ ನ ಬುಲೆಟಿನ್ (ಶೃಂಗ ಚಕ್ರ) ಬಿಡುಗಡೆಗೊಳಿಸಿ ಇನ್ನರ್ವೀಲ್ ಕ್ಲಬ್ ನ ಸೇವಾ ಕಾರ್ಯಗಳನ್ನು ಹಾಗೂ ಅಧ್ಯಕ್ಷರ ಕಾರ್ಯವೈಖರಿಗಳನ್ನು ಶ್ಲಾಘಿಸಿದರು. ಕ್ಲಬ್ ನ ಕಾರ್ಯದರ್ಶಿಯಾದ ರತ್ನ ನಾಗೇಶ್ ರವರು ಯೋಜನೆಗಳ ವರದಿಯನ್ನು ಸಭೆಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಇನ್ನರ್ವೀಲ್ ಕ್ಲಬ್ ಅಧ್ಯಕ್ಷರಾದ ಮಂಜುಳಾ ಸುಬ್ರಹ್ಮಣ್ಯರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜಿಲ್ಲಾಧ್ಯಕ್ಷರಾದ ಶಬರಿ ಕಡಿದಾಳ್ ರವರು 4:30 ಕ್ಕೆ ಕ್ಲಬ್ ನ ಅಸೆಂಬ್ಲಿಯನ್ನು ನಡೆಸಿಕೊಟ್ಟಿದ್ದು, ಉತ್ತಮ ಸಲಹೆ ಸಹಕಾರವನ್ನು ನೀಡಿ ಶ್ಲಾಘನೀಯ ಮಾತುಗಳನ್ನು ಆಡಿರುತ್ತಾರೆ.
ಹಾಗೆಯೇ ಈ ಮೂರು ತಿಂಗಳ ಅವಧಿಯಲ್ಲಿ 23 ಕಾರ್ಯಯೋಜನೆಗಳನ್ನು ನಡೆಸಿ 2000 ಕ್ಕೂ ಹೆಚ್ಚು ಫಲಾನುಭವಿಗಳು ಪ್ರಯೋಜನಗಳನ್ನು ಪಡೆದುಕೊಂಡಿದ್ದು ಈ ಮಹತ್ತರವಾದ ಕಾರ್ಯಕ್ರಮಗಳು ಮನ ಸಂತೋಷವನ್ನುಂಟು ಮಾಡಿದೆ ಹಾಗೂ ಇನ್ನುಳಿದ 9 ತಿಂಗಳ ಅವಧಿಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಿಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಾಗಿ ತಿಳಿಸಿದರು.
ಶೃಂಗೇರಿ ಕ್ಷೇತ್ರದ ಶಾನುವಳ್ಳಿಯ ಅಂತರಾಷ್ಟ್ರೀಯ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸ್ನೇಹ ಎಸ್.ಎಸ್. ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ನೆಮ್ಮಾರು ಶಾಲೆಯ ಪ್ರೌಢಶಾಲಾ ವಿಭಾಗದ 70 ವಿದ್ಯಾರ್ಥಿಗಳಿಗೆ ತಟ್ಟೆ,ಲೋಟ ವಿತರಿಸಲಾಯಿತು. ಮೆಣಸೆ ಡಿಗ್ರಿ ಕಾಲೇಜಿನ ಪ್ರಥಮ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ಕಿಗ್ಗಾದ ಗುಬ್ಬುಗೋಡಿನ ಐಶ್ವರ್ಯ ರವರಿಗೆ ವ್ಯಾಸಂಗಕ್ಕಾಗಿ ಧನ ಸಹಾಯ ಮಾಡಲಾಯಿತು. ಕ್ಲ
ಬ್ ನ ಉಪಾಧ್ಯಕ್ಷರಾದ ಮಧುರ ಉಮೇಶ್ ರವರು ಸರ್ವರನ್ನು ವಂದಿಸಿದರು. ಕಾರ್ಯಕ್ರಮವನ್ನು ಸುಧಾ ವೆಂಕಟೇಶ್, ಪ್ರಿಯದರ್ಶಿನಿ ಹೆಗ್ಡೆ ನಿರೂಪಿಸಿದರು. ಇನ್ನರ್ವೀಲ್ ಕ್ಲಬ್ ನ ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರು ರೋಟರಿ ಕ್ಲಬ್ ನ ಸದಸ್ಯರು ಪಾಲ್ಗೊಂಡಿದ್ದರು.
ವರದಿ: ವಿಠಲ್ ಶೃಂಗೇರಿ
7676798969
