Tuesday, February 10, 2026
Homeಜಿಲ್ಲಾಸುದ್ದಿಶೃಂಗೇರಿ: ಕಾಡಾನೆ ದಾಳಿ: ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶೃಂಗೇರಿ ಶಾಖಾ ಮಠದ ಸ್ವಾಮೀಜಿ!

ಶೃಂಗೇರಿ: ಕಾಡಾನೆ ದಾಳಿ: ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶೃಂಗೇರಿ ಶಾಖಾ ಮಠದ ಸ್ವಾಮೀಜಿ!

ಶೃಂಗೇರಿ: ತಾಲೂಕಿನ ಕೆರೆಗದ್ದೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಹರೀಶ್ ಹಾಗೂ ಉಮೇಶ್ ರವರ ಮನೆಗೆ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ .

ಈ ವೇಳೆ ಸ್ವಾಮೀಜಿ ಎದುರು ಅಳಲು ತೋಡಿಕೊಂಡ ಪತ್ನಿ ಆಶಾ ಆಗ ಸಂತೈಸಿದ ಸ್ವಾಮೀಜಿ ಈ ಕುಟುಂಬಗಳ ಜೊತೆ ನಿಲ್ಲೋದಾಗಿ ತಿಳಿಸಿದರು. ಶ್ರಾವ್ಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಹಾರ್ಟ್‌ ಆಪರೇಷನ್‌ ಮಾಡಿಸೋದಾಗಿ ಭರವಸೆ ನೀಡಿದರು. ಚಿಕಿತ್ಸಾ ವೆಚ್ಚವನ್ನು ಆದಿಚುಂಚನಗಿರಿ ಮಠ ನೋಡಿಕೊಳ್ಳಲಿದೆ ಎಂದು ಕುಟುಂಬಸ್ಥರಿಗೆ ನೀಡಿದರು.

ಹಾಗೆ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಆದಿಚುಂಚನಗಿರಿ ಮಠ ನೋಡಿಕೊಳ್ಳಲಿದೆ ಹಾಗೂ ಓದು ಮುಗಿದ ನಂತರ ಉದ್ಯೋಗವನ್ನು ಸಹ ಆದಿಚುಂಚನಗಿರಿ ಸಂಸ್ಥೆಯಲ್ಲಿ ನೀಡುವುದಾಗಿ ಭರವಸೆ ನೀಡಿದರು. ಸ್ವಾಮೀಜಿಯ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ರಾಜೇಶ್, ಸುನಿಲ್ ಕೂಳೆಗದ್ದೆ, ಪ್ರದೀಪ್, ಅನಿಲ್ ಹೊಸಕೊಪ್ಪ, ಸಂತೋಷ್ ಮತ್ತಿತರರು ಹಾಜರಿದ್ದರು

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!