Friday, July 31, 2026
Homeಜಿಲ್ಲಾಸುದ್ದಿSSLC RESULT: ದಾರದಹಳ್ಳಿ ಸರ್ಕಾರಿ ಪ್ರೌಢ ಶಾಲೆಗೆ ಶೇಕಡಾ 100ರಷ್ಟು ಫಲಿತಾಂಶ

SSLC RESULT: ದಾರದಹಳ್ಳಿ ಸರ್ಕಾರಿ ಪ್ರೌಢ ಶಾಲೆಗೆ ಶೇಕಡಾ 100ರಷ್ಟು ಫಲಿತಾಂಶ

Telegram Group
Join Now

ಮೂಡಿಗೆರೆ:2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ರಾಜ್ಯದಲ್ಲಿ ಪ್ರಕಟ ಗೊಂಡಿದ್ದು ತಾಲೂಕಿನ ದಾರದಹಳ್ಳಿ ಸರಕಾರಿ ಪ್ರೌಡ ಶಾಲೆಗೆ ಶೇಕಡಾ 100 ಫಲಿತಾಂಶ ಲಭಿಸಿದೆ

ಒಟ್ಟು 11 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ ಎಲ್ಲಾ ವಿಧ್ಯಾರ್ಥಿಗಳು ಉತ್ತಿರ್ಣ ರಾಗುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

ಹನ್ನೊಂದು ವಿದ್ಯಾರ್ಥಿಗಳಲ್ಲಿ ಉತ್ತಮ ಶ್ರೇಣಿ -3 ವಿದ್ಯಾರ್ಥಿ ನಿಯರು ಹಾಗೂ ಪ್ರಥಮ ದರ್ಜೆ -3 ವಿದ್ಯಾರ್ಥಿಗಳು ಹಾಗೂ ದ್ವಿತೀಯ ದರ್ಜೆ -3 ಮತ್ತು ಉತ್ತಿರ್ಣ -2 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು
ದಾರದಹಳ್ಳಿ ಗ್ರಾಮ ಪಂಚಾಯಿತಿಯ ಕೆಸವಳಲು ಗ್ರಾಮದ ಉದಯ್ ಜಯಂತಿ ದಂಪತಿಗಳ ಪುತ್ರಿ ನಿತ್ಯಶ್ರೀ 584 (93.44) ಹಾಗೂ ದಾರದಹಳ್ಳಿ ಗ್ರಾಮದ ಸತೀಶ್ ಸುಮಾ ದಂಪತಿಗಳ ಪುತ್ರಿ ಸ್ಪರ್ಶ 555 (88.8)ಮತ್ತು
ಕೆಸವಳಲು ಗ್ರಾಮದ ರಮೇಶ್ ಲೀಲಾವತಿ ದಂಪತಿಗಳ ಪುತ್ರಿ ಯಾದ ಪ್ರೀತಿ 534 (85.44) ಅಂಕಗಳೊಂದಿಗೆ ಶಾಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಶಾಲೆಗೆ ಟಾಪರ್ ಗಳಾಗಿ ಹೊರಹೋಮ್ಮಿದ್ದಾರೆ


2012 ರಿಂದ 2026 ಇಸವಿಯ ನಡುವೆ ಈ ಶಾಲೆಗೆ ಎರಡು ಬಾರಿ 100% ಫಲಿತಾಂಶ ಬಂದಿರುವುದು ಹೆಮ್ಮೆಯ ಸಂಗತಿಯಾಗಿದ್ದು ಶಾಲೆಯ ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ

ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗುವುದರ ಮೂಲಕ ಸಾಧನೆಗೈದ ಪ್ರತಿ ವಿದ್ಯಾರ್ಥಿಗಳಿಗೂ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ,ಎಸ್ ಡಿ ಎಂ ಸಿ,ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಪೋಷಕರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

ವರದಿ:ಪುನೀತ್ ಕಡಿದಾಳು
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments