ಮೂಡಿಗೆರೆ: ಸೂಜಿ ತುದಿಯಲ್ಲಿ ಸಂಭ್ರಮ ಹಾಗೂ ಸಂತೋಷದ ಬದುಕು ನಡೆಸುತ್ತಿರುವ ಟೈಲರ್ಸ್ಗಳು ಸಮಾಜಕ್ಕೆ ಆದರ್ಶಪ್ರಾಯ ವಾಗಿದ್ದಾರೆ ಎಂದು ಶ್ರೀ ಕ್ಷೇತ್ರ ಹೊರನಾಡು ಧರ್ಮಧಿಕಾರಿ ಶ್ರೀ ಭೀಮೇಶ್ವರ ಜೋಶಿ ಅಭಿಪ್ರಾಯ ಪಟ್ಟರು
ಅವರು ಪಟ್ಟಣದ ಜೆಸಿಐ ಭವನದಲ್ಲಿ ಶನಿವಾರ ಟೈಲರ್ ಸಂಘ ಮೂಡಿಗೆರೆ ಘಟಕದ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು
ವ್ಯಕ್ತಿಯೊಬ್ಬರ ಮೌಲ್ಯ ಎತ್ತಿ ಹಿಡಿಯುವುದು ಅವರು ಧರಿಸುವ ವಸ್ತ್ರಸಂಹಿತೆಯಿಂದಾಗಿ ಅದನ್ನು ತಯಾರು ಮಾಡುವ ಟೈಲರ್ ವೃತ್ತಿಗೆ ಸಾಟಿಎಂಬುದಿಲ್ಲ ಎಂದರು,ಮಹಿಳೆಯರು
ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ಸಾಂಸಾರಿಕ ಬದುಕಲ್ಲಿ ಅಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು ನಿಜಕ್ಕೂ ಹೆಮ್ಮೆ ಪಡುವ ವಿಚಾರವಾಗಿದೆ. ಪ್ರತಿ ಯೊಬ್ಬರು ಮೈ ತುಂಬಾ ಬಟ್ಟೆ ಧರಿಸಲು ಟೈಲರ್ಸ್ ಮುಖ್ಯ ಕಾರಣರಾಗಿರುತ್ತಾರೆ. ಎಲ್ಲರಿಗೂ ಟೈಲರ್ಸ್ ಗಳೊಂದಿಗೆ ಅವಿನಾಭವ ಸಂಬಂಧ ಇರುತ್ತದೆ, ವ್ಯಕ್ತಿಯೊಬ್ಬರ ದೇಹದ ವಿನ್ಯಾಸಕ್ಕೆ ಅನುಗುಣವಾಗಿ ಬಟ್ಟೆ ತಯಾರಿಸಿ ಕೊಡುತ್ತಾರೆ. ಅದನ್ನು ಧರಿಸಿಕೊಂಡು ಜನರು ಸಂಭ್ರಮ ಪಡುತ್ತಾರೆ ಎಂದರು.
25 ವರ್ಷ ಪೂರೈಸಿದ ಸಂಘ 50 ವರ್ಷಗಳ ಕಾಲಾ ಒಗ್ಗಟ್ಟಿನಿಂದ ಮುಂದುವರೆಯುವಂತೆ ಸಲಹೆ ನೀಡಿದರು, ಸಂಘ ಸಂಸ್ಥೆಗಳು ಟೈಲರಿಂಗ್ ತರಬೇತಿಗಳನ್ನು ಉಚಿತವಾಗಿ ನಡೆಸುತ್ತಿದ್ದೂ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸೂಚಿಸಿದರು ಸ್ವಯಂ ಉದ್ಯೋಗವಾಗಿ ಟೈಲರಿಂಗ್ ವ್ಯವಹಾರವನ್ನು ಕಲಿತು ತಾವುಗಳು ಪ್ರತಿ ವ್ಯಕ್ತಿಯ ಗೌರವ ಹೆಚ್ಚಿಸುವ ರೀತಿಯಲ್ಲಿ ಬಟ್ಟೆ ಹೊಲೆಯುವ ವಿಶಿಷ್ಟ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು

ಟೈಲರ್ಸ್ ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್.ಎಂ. ಶಿವೇಗೌಡ ಮಾತನಾಡಿ ‘ನಮ್ಮ ಹತ್ತಿರದ ಅಂಗಡಿಗಳಲ್ಲಿ ಬ್ಲೌಸ್, ಪ್ಯಾಂಟ್, ಶರ್ಟ್‌ಗಳನ್ನು ಹೊಲಿಯುವವರನ್ನು ಸ್ಥಳೀಯ ಟೈಲರ್ಸ್,ಮದುವೆ ಹಾಗೂ ಹಬ್ಬಗಳ ವಿಶೇಷ ವಿನ್ಯಾಸದ ಬಟ್ಟೆಗಳನ್ನು ಹೊಲಿಯುವವರು.ವಿನ್ಯಾಸಕಾರರು ಗಾರ್ಮೆಂಟ್ಸ್ ಅಥವಾ ದೊಡ್ಡ ಬಟ್ಟೆ ಕಾರ್ಖಾನೆಗಳಲ್ಲಿ ಸಾಮೂಹಿಕವಾಗಿ ಬಟ್ಟೆ ತಯಾರಿಸುವವರು.ಕೈಗಾರಿಕ ಟೈಲರ್ಸ್ ಗಳೆಂದು ಗುರುತಿಸಲಾಗುತ್ತದೆ ಎಂದರು
ಒಂದು ಕೈ ಯಿಂದ ಚಪ್ಪಾಳೆ ಬಾರದು ಅಂತೆಯೇ ಮೂಡಿಗೆರೆ ಟೈಲರ್ ಸಂಘವು 25ನೇ ವಸಂತ ಪೂರೈಸಿದ್ದು ಬೆಳ್ಳಿ ಹಬ್ಬ ಆಚರಣೆ ಮಾಡಲಾಗಿದೆ ಇಂತಹ ಸ್ಮರಣಿಯ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಮಾಜಿ ಉಪ ಸಭಾಪತಿ ಎಂ. ಕೆ. ಪ್ರಾಣೇಶ್ ಟೈಲರ್ ವೃತ್ತಿ ಬಗ್ಗೆ ಕೀಳರಿಮೆ ಭಾವನೆ ಬೇಡ, ಸಮಾಜದಲ್ಲಿ ಪ್ರತಿ ವ್ಯಕ್ತಿಯು ಅಚ್ಚುಕ್ಕಟ್ಟಾಗಿ ಕಾಣಲು ಟೈಲರ್ ಗಳ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ, ಟೈಲರ್ಸ್ ವೃತ್ತಿ ಬಹಳ ಗೌರವಿಸುವ ವೃತ್ತಿ ಯಾಗಿದೆ ಒಬ್ಬ ವ್ಯಕ್ತಿ ಧರಿಸುವ ಬಟ್ಟೆ ತಮ್ಮ ಗೌರವ ಹೆಚ್ಚಿಸುತ್ತದೆ, ಎಂದರು
ವಿಶೇಷವಾಗಿ ಟೈಲರ್ಸ್ ಬಾಂದವರ ಮಕ್ಕಳು ಉನ್ನತ ಮಟ್ಟದ ಶಿಕ್ಷಣ ಪಡೆಯಬೇಕು ವಿಧ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಈಗಿನ ಮಕ್ಕಳು ಮೊಬೈಲ್ ಮೊರೆ ಹೋಗಿದ್ದು ಇದನ್ನು ತಪ್ಪಿಸಲು ಗುಣಮಟ್ಟದ ಶಿಕ್ಷಣದ ಅವಶ್ಯಕತೆ ಹೆಚ್ಚಿದೆ ಎಂದರು.
ಮಾಜಿ ಸಚಿವ ಬಿ. ಬಿ. ನಿಂಗಯ್ಯ ಮಾತನಾಡಿ ಪ್ರತಿಯೊಬ್ಬರೂ ಅಂಗಡಿಗಳಿಂದ ಬಟ್ಟೆ ಖರೀದಿಸಿ ಬಟ್ಟೆ ಹೊಳೆಕೊಳ್ಳುತ್ತಿದ್ದರು ಕಾಲ ಕ್ರಮೇಣ ಟೈಲರ್ ಗಳನ್ನು ಹುಡುಕಿ ಕೊಂಡು ಹೋಗುವುದು ಕಡಿಮೆ ಯಾಗಿದೆ ವಸ್ತ್ರ ತಯಾರಿಸುವ ಕಂಪನಿಗಳು ದೊಡ್ಡ ಯಂತ್ರಗಳನ್ನು ಬಳಸಿ ಅಧಿಕ ಸಂಖ್ಯೆಯಲ್ಲಿ ಬಟ್ಟೆ ತಯಾರಿಸುತ್ತಾರೆ, ಹರಿದ ಬಟ್ಟೆಗಳು ಇತ್ತೀಚಿಗೆ ಫ್ಯಾಷನ್ ಆಗಿದ್ದು ಆಗಾದ ಬೆಲೆ ತೆತ್ತಿ ಅಂತಹ ಬಟ್ಟೆಗಳನ್ನು ಧರಿಸುವುದರಿಂದ ಟೈಲರ್ ಬಾಂಧವರಿಗೆ ತೊಂದರೆಯಾಗಿದೆ ಆದ್ದರಿಂದ ಸರ್ಕಾರಗಳು ಮಾಸಿಕ ಗೌರವ ಧನ ನೀಡಿ ಸಹಕರಿಸಬೇಕು ಎಂದರು
ಇದೆ ವೇಳೆ ನೂಲಿನ ತುದಿಯಲಿ ಬದುಕು ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು,ಬೆಳ್ಳಿ ಹಬ್ಬದ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು , ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಡ್ ವಿತರಣೆ, ಪ್ರತಿಭಾ ಪುರಸ್ಕಾರವನ್ನು ನೀಡಿ , ಟೈಲರ್‌ಗೆ ಹೊಲಿಗೆ ಯಂತ್ರ ವಿತರಿಸಲಾಯಿತು
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ. ಪಿ. ಕುಮಾರಸ್ವಾಮಿ. ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಕೆ. ಜಿ. ಎಫ್. ಮಾಜಿ ಅಧ್ಯಕ್ಷ ಜಯರಾಮ್, ಕೆ. ಎಸ್. ಟಿ. ಎ. ರಾಜ್ಯಾಧ್ಯಕ್ಷ ಸುರೇಶ್,ಟೈಲರ್ಸ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ತಾಲೂಕು ಟೈಲರ್ಸ್ ಸಂಘದ ಉಪಾಧ್ಯಕ್ಷ ಎಂ.ಕೆ. ಷಣ್ಮುಖಾನಂದ, ಪ್ರಧಾನ ಕಾರ್ಯದರ್ಶಿ ಎಚ್.ಡಿ. ಉದಯ್, ಖಜಾಂಚಿ ಎಂ.ಎನ್. ಗಿರೀಶ್, ನಗರಾಧ್ಯಕ್ಷ ಎಸ್.ಜೆ. ಉಮಾಶಂಕರ್, ಕಾರ್ಯಕಾರಿಣಿ ಸಮಿತಿಯ ಪೂಜಾ ರಾಜೇಶ್,ದೀಪಿಕಾ, ಪ್ರಾಪ್ತಿ,ಮಂಜುಳಾ, ಇಬ್ರಹಿಂ, ರಘು, ರೇಖಾ, ಲತಾ, ಪ್ರಕಾಶ್, ಮೋಹನ್, ಜಾಫರ್,ಲಕ್ಷ್ಮಣ, ವಿಜೇಂದ್ರ,ಮಂಜುನಾಥ್, ಹರಿಣಾಕ್ಷಿ, ಪ್ರೀತಮ್, ರಮೇಶ್, ರೂಪ, ಶರಣ್ಯ, ಶಶಿ,ಚಂದ್ರವತಿ, ಪದ್ಮ, ತೀರ್ಥ,ಸುರೇಶ್, ನರಸಿಂಹ, ಶೃತಿ, ಸುಕನ್ಯಾ ಸೋಮೇಶ್,ಗಣೇಶ್, ಸುಜಾತ, ಸೇರಿದಂತೆ ಆನೇಕರು ಭಾಗವಹಿಸಿದ್ದರು.
ವರದಿ-ಪುನೀತ್ ಕಡಿದಾಳು
9483811948
