Wednesday, February 25, 2026
Homeಜಿಲ್ಲಾಸುದ್ದಿಬೆಂಗಳೂರಿನಿಂದ ಚಿಕ್ಕಮಗಳೂರು ಪ್ರವಾಸಕ್ಕೆಂದು ಬಂದಿದ್ದ ಟೆಕ್ಕಿ : ಹೃದಯಾಘಾತಕ್ಕೆ ಬಲಿ!

ಬೆಂಗಳೂರಿನಿಂದ ಚಿಕ್ಕಮಗಳೂರು ಪ್ರವಾಸಕ್ಕೆಂದು ಬಂದಿದ್ದ ಟೆಕ್ಕಿ : ಹೃದಯಾಘಾತಕ್ಕೆ ಬಲಿ!

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಒಂದೊಂದು ನಿಮಿಷಕ್ಕೂ ಹೆಚ್ಚಾಗುತ್ತಿದ್ದು ಬೆಂಗಳೂರಿನಿಂದ ಚಿಕ್ಕಮಗಳೂರು ನೋಡಲು ಪ್ರವಾಸಕ್ಕೆ ಬಂದಿದ್ದ ವೇಳೆ ಸಾಫ್ಟ್‌ವೇರ್ ಇಂಜಿನಿಯರ್ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.

ಬೆಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ರಾಹುಲ್ (29) ಹೃದಯಾಘಾತಕ್ಕೆ ಬಲಿಯಾಗಿದ್ದು ಸ್ನೇಹಿತರ ಜೊತೆ ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ ವೇಳೆ ಈ ಈ ದುರ್ಘಟನೆ ಸಂಭವಿಸಿದೆ.

ಶುಕ್ರವಾರ ಐವರು ಸ್ನೇಹಿತರ ಜೊತೆ ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ ರಾಹುಲ್ಚಿ ಕ್ಕಮಗಳೂರು ಹೊರವಲಯದ ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ಚೆನ್ನಾಗಿ ಪಾರ್ಟಿ ಮಾಡಿದ್ದ ಸ್ನೇಹಿತರು ಭಾನುವಾರ ಬೆಳಗ್ಗೆಯಿಂದ ಹಾಗೆ ರೆಸ್ಟ್‌ ಮಾಡುತ್ತಿದ್ದ ವೇಳೆ ಎದೆ ನೋವಿನಿಂದ ಇದ್ದಕ್ಕಿದ್ದ ಹಾಗೆ ಹೋಂ ಸ್ಟೇನಲ್ಲಿ ಕುಸಿದು ಬಿದ್ದಿದ್ದು ಆ ತಕ್ಷಣ ರಾಹುಲ್ ನನ್ನ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಕಾರಿನಲ್ಲಿ ಕರೆದೊಯ್ದಿದ್ದ ವೇಳೆ ದಾರಿ ಮಧ್ಯಯೇ ಪ್ರಾಣಪಕ್ಷಿ ಹಾರಿಹೋಗಿದೆ.

ಬೆಂಗಳೂರಿನ ಅಕ್ಷಯ್ ನಗರ ನಿವಾಸಿಯಾಗಿದ್ದ ರಾಹುಲ್‌ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನು. ಇಂದು ಸಂಜೆ ವಾಪಸ್ ಬೆಂಗಳೂರಿಗೆ ತೆರಳಬೇಕಿದ್ದ ಐವರು ಸ್ನೇಹಿತರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!