Friday, March 27, 2026
Homeಜಿಲ್ಲಾಸುದ್ದಿಅಂದು ಮಾತಿಗಾಗಿ ಸತ್ಯವನ್ನು ಬಿಡದ ಆ ಹರಿಶ್ಚಂದ್ರ : ಇಂದು ಕುಗ್ರಾಮದಲ್ಲಿ ಸ್ನೇಹಿತರಿಗೆ ವಚನ ಕೊಟ್ಟು...

ಅಂದು ಮಾತಿಗಾಗಿ ಸತ್ಯವನ್ನು ಬಿಡದ ಆ ಹರಿಶ್ಚಂದ್ರ : ಇಂದು ಕುಗ್ರಾಮದಲ್ಲಿ ಸ್ನೇಹಿತರಿಗೆ ವಚನ ಕೊಟ್ಟು ಪಾಲನೇ ಮಾಡಿ ನುಡಿದಂತೆ ನಡೆದ ಸತ್ಯ ಎಂ.ಜಿ

ಆ ಒಂದು ಕಾಲದಲ್ಲಿ ಸತ್ಯಕ್ಕೆ ಎಷ್ಟು ಬೆಲೆ ಇತ್ತೆಂದರೆ ರಾಜಹರಿಶ್ವಂದ್ರನ ಕೈಯಲ್ಲಿ ಸುಳ್ಳು ಹೇಳಿಸಬೇಕೆಂದು ಏನೆಲ್ಲಾ ಪ್ರಯತ್ನ ಪಟ್ಟರು ಆ ಮಹಾರಾಜ ಸತ್ಯವನ್ನು ಬಿಡಲಿಲ್ಲಾ. ಈ ಕಲಿಯುಗದಲ್ಲಿ ಮಲೆನಾಡಿನ ಕುಗ್ರಾಮ ಒಂದರಲ್ಲಿ ೧೫ ಬಡವರು ವಾಸಿಸುತ್ತಿದ್ದ ಮನೆಗಳಿಗೆ ರಸ್ತೆಯೇ ಇಲ್ಲದೆ ತೋಟದ ದಾರಿಯಲ್ಲಿ ಆನಾರೋಗ್ಯ ಪೀಡಿತರನ್ನು ಮತ್ತು ಮೃತ ವ್ಯಕ್ತಿಗಳನ್ನು ಸ್ಮಶಾನಕ್ಕಾಗಲಿ ಆಸ್ಪತ್ರೆಗೆ ಆಗಲಿ ರಸ್ತೆಗೆ ಆಗಲಿ ಜೋಳಿಗೆಯಲ್ಲಿ ಕಟ್ಟಿ ಕೊಂಡು ಬರಬೇಕಾಗಿತ್ತು ಮತ್ತು ಹೋಗಬೇಕಾಗಿತ್ತು.

ಇದು ಇಂದಿನ ದಿನದಲ್ಲಾ ಸಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಮಾಕೋನಹಳ್ಳಿ (ಗ್ರಾಮ) ತುದಿಯಾಲ ಎಂಬ ಕುಗ್ರಾಮಕ್ಕೆ ಬಂದು ಮತ ಯಾಚನೇ ಮಾಡಬೇಕಾದಾಗ ರಾಜಕಾರಣಿಗಳು ಅಲ್ಲಿಯ ಜನರಿಗೆ ದಾರಿ ಮಾಡಿಕೊಡುವ ಭರವಸೆ ನೀಡುತ್ತಿದ್ದರೆ ವಿನಹ ಮತ್ತೆ ಆಕಡೆಗೆ ತಲೆ ಹಾಕುತ್ತಿರಲಿಲ್ಲಾ,
ಇದರಿಂದ ಅಲ್ಲಿದ್ದ ಕುಟಂಬ ರೋಸಿಹೋಗಿದ್ದು. ತೋಟದ ಮಾಲೀಕರ ಬಳಿ ತಮ್ಮ ಗೋಳನ್ನು ತೋಡಿಕೊಂಡಾಗ. ತೋಟದ ಮಾಲೀಕರಾದ (ದಿ. ಎಂ.ಸಿ.ಗೋಪಾಲಗೌಡರ) ಮಗ ಸತ್ಯ ಎಂ.ಜಿ. ಅವರು ೧೫ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ನಾನು ಜೆಡಿಎಸ್ ಪಕ್ಷದ ಸದಸ್ಯ ಹೆಚ್.ಡಿ.ಕುಮಾರಸ್ವಾಮಿ ಅವರ ಅಭಿಮಾನಿ ಹೆಚ್.ಡಿ.ದೇವೇಗೌಡರು ಹತ್ತು ಹಲವು ಉಪಯುಕ್ತ ಕಾರ್ಯಗಳನ್ನು ಮಾಡಿದ್ದು ಅದರಿಂದ ನಾನು ಪ್ರೇರಿತನಾಗಿದ್ದೇನೆ. ಮಾಕೋನಹಳ್ಳಿ ಗ್ರಾಮ ಪಂಚಾಐತಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ ಹದಿನೈದು ದಿನಗಳಲ್ಲಿ ನಿಮಗೆ ಓಡಾಡಲಿಕ್ಕೆ ಅಡ್ಡಿಯಾಗಿರುವ ಫಸಲು ಕೊಡುತ್ತಿರುವ ಗಿಡಗಳನ್ನು ತೆರವುಗೊಳಿಸಿ ದಾರಿ ಮಾಡಿಕೊಡುವುದಾಗಿ ತಿಳಿಸಿದರು.


ಅಷ್ಟರಲ್ಲಿ ಜೆಡಿಎಸ್ ಅಭ್ಯರ್ಥಿ ಕಾರಬೈಲ್ ಕೆ.ಎನ್.ಪುಟ್ಟರಾಜು ಅವರನ್ನು ಗೆಲ್ಲಿಸುವಂತೆ ತಿಳಿಸಿದರು.
೨೦೨೦ ರ ಗ್ರಾಮ ಮ ಪಂಚಾಯತಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಾರಬೈಲ್ ನ ಕೆ.ಎನ್.ಪುಟ್ಟರಾಜು ಅವರು ಮತ ಯಾಚಿಸಲು ಹೋದಾಗ ಎಲ್ಲಾ ಬಂದು ಮತ ಕೇಳಿ ಹಾಕಿಸಿ ಕೊಂಡು ಹೋಗುತ್ತಾರೆ ಸ್ವಾತಂತ್ರ್ಯ ಬಂದರೂ ನಮಗೆ ಸ್ವಾತಂತ್ರ್ಯ ವಿಲ್ಲಾ ಎಂದಾಗ ಪುಟ್ಟರಾಜು ಮತದಾರರಿಗೆ ಅಂದರೇ ೧೫ ಕುಟುಂಬದ ಸದಸ್ಯರಿಗೆ ಸತ್ಯ ಅವರು ಆಡಿದ ಮಾತಿನಂತೆ ನಡೆದುಕೊಳ್ಳುತ್ತಾರೆ ನನ್ನನ್ನು ಗೆಲ್ಲಿಸಿ ಗೆದ್ದ ೧೫ ದಿನಗಳಲ್ಲಿ ಸತ್ಯ ಅವರು ರಸ್ತೆಯನ್ನು ಮಾಡಲು ಗಿಡಗಳನ್ನು ತೆರವುಗೊಳಿಸಲಿದ್ದು. ನಂತರ ಗ್ರಾಮ ಪಂಚಾಯಿತಿ ಅನಧಾನದಲ್ಲಿ ರಸ್ತೆ ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿದ್ದರು.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಮಾತು ಉಳಿಸಿಕೊಳ್ಳುವ ಸಲುವಾಗಿ. ಹಾಗೂ ತನ್ನ ಸ್ನೇಹಿತನಿಗೆ ಮತ ಹಾಕಿದ್ದಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಎಂ.ಜಿ.ಸತ್ಯ ಅವರು. ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಗಬ್ಬಳ್ಳಿ ಚಂದ್ರೇಗೌಡ ಮತ್ತು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಆರ್.ಅನಿಲ್, ಕಾರಬೈಲ್ ಕೆ.ಎನ್.ಪುಟ್ಟರಾಜು ಅವರೊಂದಿಗೆ ಚರ್ಚಿಸಿ ವಾಹನವೊಂದು ಓಡಾಡುವ ರೀತಿಯಲ್ಲಿ ೧೪ ಅಡಿ ರಸ್ತೆಗೆ ೩೦ ವರ್ಷ ಹಿಂದಿನಿಂದ ಫಸಲು ಕೊಡುತ್ತಿದ್ದ ಗಿಡಗಳನ್ನು ತೆರವುಗೊಳಿಸಿ ಸ್ನೇಹಿತರಿಗೆ ಮತ್ತು ಸಾರ್ವಜನಿಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಆರ್.ಅನೀಲ್ ಹಾಗೂ ಗಬ್ಬಳ್ಳಿ ಚಂದ್ರೇಗೌಡರ ಮಾರ್ಗದರ್ಶನದಲ್ಲಿ ಡಿಸೆಂಬರ್ ೨೦೨೫ ರಲ್ಲಿ ಕಾರಬೈಲ್ ಕೆ.ಎನ್.ಪುಟ್ಟರಾಜು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ರಸ್ತೆ ನಿರ್ಮೀಸಿಕೊಟ್ಟು ಜನವರಿ ೨೪ ರಂದು ರಸ್ತೆಯನ್ನು ಓಡಾಡಲಿಕ್ಕೆ ಅನುವು ಮಾಡಿಕೊಟ್ಟರು
ಮುಂದಿನ ದಿನಗಳಲ್ಲಿ ರಸ್ತೆಯನ್ನು ಕಾಂಕ್ರಿಟಿ ಕರಣ ಗೊಳಿಸಲು ಸಬೆಯಲ್ಲಿ ತಿರ್ಮಾನಿಸಲಾಗಿದೆ ಎಂದ ಅವರು ಕೊಟ್ಟ ಮಾತನ್ನು ಉಳಿಸಿಕೊಂಡ ಎಂ.ಜಿ.ಸತ್ಯ ಅವರಿಗೆ ಸಾರ್ವಜನಿಕವಾಗಿ ಸನ್ಮಾನಿಸಿ ಅಭಿನಂದಿಸಿದರು

ಈ ಸಂದರ್ಭದಲ್ಲಿ ಗ್ರಾಮದ ಎಂ.ಜಿ.ಸುಂದರೇಶ್ ಉಪಸ್ಥಿತರಿದ್ದರು.
ನಮ್ಮ ಅಜ್ಜ-ಮುತ್ತಜ್ಜರ ಕಾಲದಿಂದಲೂ ಈ ಜಾಗದಲ್ಲೆ ವಾಸಿಸುತಿದ್ದು. ನಮ್ಮ ಗೋಳು ಆಲಿಸಲು ಯಾರು ಬರಲಿಲ್ಲಾ. ಆದರೆ ತೋಟದ ಮಾಲೀಕರಾದ ಎಂ.ಜಿ.ಸತ್ಯ ಅವರು ನಮ್ಮ ಪಾಲಿಗೆ ದೇವರಾಗಿ ಬಂದು ರಸ್ತೆ ಮಾಡಿಕೊಡುವುದರೊಂದಿಗೆ ಇಂದಿನಿಂದ ಸಾರ್ವಜನಿಕರಿಗೆ ಅನುವು ಮಾಡಿಕೊಟ್ಟಿರುವ ಈ ಕಲಿಯುಗದ ಸತ್ಯ ಹರಿಶ್ವಂದ್ರ ಎಂದರೆ ತಪ್ಪಾಗಲಾರದು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!