Sunday, August 16, 2026
Homeಜಿಲ್ಲಾಸುದ್ದಿSudhaker Shetty: ಪ್ರದೀಪ್‌ ಈಶ್ವರ್‌ ಹುಚ್ಚಾಟಕ್ಕೆ ಸುಧಾಕರ್ ಎಸ್‌. ಶೆಟ್ಟಿ ಕಿಡಿ: ನಾಲಿಗೆಯ ಮೇಲೆ ಹಿಡಿತವಿರಲಿ!

Sudhaker Shetty: ಪ್ರದೀಪ್‌ ಈಶ್ವರ್‌ ಹುಚ್ಚಾಟಕ್ಕೆ ಸುಧಾಕರ್ ಎಸ್‌. ಶೆಟ್ಟಿ ಕಿಡಿ: ನಾಲಿಗೆಯ ಮೇಲೆ ಹಿಡಿತವಿರಲಿ!

Telegram Group
Join Now

ಕೊಪ್ಪ: ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್ ಅವರ ಇತ್ತೀಚಿನ ನಡವಳಿಕೆಗೆ ಜೆಡಿಎಸ್‌ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್‌. ಶೆಟ್ಟಿ ಅವರು ಗರಂ ಆಗಿದ್ದಾರೆ. ಪ್ರದೀಪ್‌ ಈಶ್ವರ್‌ ಅವರ ಆವೃಶಭರಿತ ಮಾತುಗಳು ಹಾಗೂ ಪ್ರಚೋದನಕಾರಿ ಮಾತುಗಳು ಕರ್ನಾಟಕ ಶಾಸಕಾಂಗ ಸ್ಥಾನಕ್ಕೆ ಕಪ್ಪು ಚುಕ್ಕೆಯಾದಂತೆ ಎಂದು ಟೀಕೆ ಮಾಡಿದ್ದಾರೆ.

ಹೌದು .. ಕೊಪ್ಪದಲ್ಲಿ ಮಾತನಾಡಿದ ಅವರು ಎಚ್.‌ ಡಿ. ಕುಮಾರಸ್ವಾಮಿ ಅವರ  ವಿರುದ್ಧ ಏಕವಚನ ಪದ ಪ್ರಯೋಗ ಹಾಗೆ ಅವರಿಗೆ ತೊಡೆ ತಟ್ಟಿ ನಿಲ್ಲುವುದು, ಮೀಸೆ ತಿರುವಿ ನಿಲ್ಲುವುದು ಒಬ್ಬ ಸ್ಥಿಮಿತ ಮನುಷ್ಯನ  ವ್ಯಕ್ತಿತ್ವ ಆಗಿರಲ್ಲ ಅದು ಅವರ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿ ಕಾರಿದರು.

ಶಾಸಕರು ತಮ್ಮ ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಂಡು ಮಾತನಾಡಲಿ ಇಲ್ಲದಿದ್ದರೆ ಸಾರ್ವಜನಿಕರು ಧಂಗೆ ಏಳುವುದು ಮಾತ್ರ ಸತ್ಯ ಎಂದು ಎಚ್ಚರಿಕೆ ನೀಡಿದರು

 

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments