Wednesday, February 25, 2026
Homeಕ್ರೈಮ್ಉಡುಪಿ: ಹುಲಿ ಉಗುರು ಎಂದು ನಂಬಿಸಿ ನಕಲಿ ಹುಲಿ ಉಗುರು ಮಾರಾಟಕ್ಕೆ ಯತ್ನ: ಸನ್ಯಾಸಿ ಸೋಗಿನ...

ಉಡುಪಿ: ಹುಲಿ ಉಗುರು ಎಂದು ನಂಬಿಸಿ ನಕಲಿ ಹುಲಿ ಉಗುರು ಮಾರಾಟಕ್ಕೆ ಯತ್ನ: ಸನ್ಯಾಸಿ ಸೋಗಿನ ವಂಚಕನ ಸೆರೆ

ಉಡುಪಿ: ಹುಲಿ ಉಗುರು ಎಂದು ನಂಬಿಸಿ, ನಕಲಿ ಹುಲಿ ಉಗುರು ಮಾರಟ ಮಾಡಲು ಯತ್ನಿಸುತ್ತಿದ್ದ ಸನ್ಯಾಸಿ ಸೋಗಿನ ವಂಚಕನನ್ನು ವಶಕ್ಕೆ ಪಡೆಯುವಲ್ಲಿ ಉಡುಪಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.

ಸನ್ಯಾಸಿ ವೇಷದಲ್ಲಿದ್ದ ವಂಚಕನು ಹುಲಿ ಉಗುರು ಅಸಲಿ ಎಂದು ನಂಬಿಸಿ ಮಾರಾಟದ ಯತ್ನದಲ್ಲಿದ್ದಾಗ ಸಾರ್ವಜನಿಕರು ನಾಗರೀಕ ಸಮಿತಿಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು. ವಂಚಕ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ, ನಗರ ಪೋಲಿಸ್ ಠಾಣೆಯ‌ ಪೋಲಿಸರು ನಗರದ ಹಳೆ ಬಸ್ಸು ನಿಲ್ದಾಣದಲ್ಲಿ ವಶಕ್ಕೆ ಪಡೆದರು.

ಬಳಿಕ ವಿಚಾರಣೆಗೆ ಒಳಪಡಿಸಿ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು. ವಂಚಕ ನಕಲಿ ಸಾಧು ಆಂಧ್ರಪ್ರದೇಶದ ಚಿತ್ತೂರು‌ ಜಿಲ್ಲೆಯ ಮದನರಾಜ್ (58) ಎಂದು ತಿಳಿದುಬಂದಿದೆ.

ಕಾರ್ಯಾಚರಣೆಗೆ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ‌ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ನೆರವಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!