ಉಡುಪಿ: ಕೋಗಿಲುವಿನಲ್ಲಿ ನಡೆದ ಕಾರ್ಯಾಚರಣೆ ಕಾನೂನು ಬದ್ಧ ಇರಬಹುದು, ಇಲ್ಲದೆ ಇರಬಹುದು.
ಬಡವರ ಮನೆ ತೆರವು ಮಾಡಿದ್ದಕ್ಕೆ ಅನುಕಂಪ ಇದೆ. ಯಾವ ಧರ್ಮ ಯಾವ ಜಾತಿ ಅನ್ನೋದು ಮುಖ್ಯ ಅಲ್ಲ.ಆದರೆ ನಮ್ಮ ಸರ್ಕಾರಕ್ಕೆ ಕೇರಳದವರು ಎಚ್ಚರಿಕೆ ಕೊಡುತ್ತಿರುವುದು ದುರದೃಷ್ಟಕರ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಕೋಟ , ಚಿಕ್ಕಮಗಳೂರು ಸಂತ್ರಸ್ತರಿಗೆ ಇನ್ನೂ ಮನೆ ಕಟ್ಟಿಸಿ ಕೊಟ್ಟಿಲ್ಲ.ಆದರೆ ಕೆ ಸಿ ವೇಣುಗೋಪಾಲ್ ಸೂಚನೆ ಕೊಡುತ್ತಾರೆ, ಅಲ್ಲಿಯ ಸಂಸದರು ನಮ್ಮಲ್ಲಿಗೆ ಬಂದು ಪರಿಶೀಲನೆ ಮಾಡುತ್ತಾರೆ.ಎಲ್ಲರೂ ಸೇರಿ ಎಚ್ಚರಿಕೆ ಕೊಡುತ್ತಾರೆ.ಕೇರಳ ಶಾಸಕರು ಕರ್ನಾಟಕದಲ್ಲಿ ಏನಾಗಿದೆ ಎಂದು ಪ್ರಶ್ನಿಸುತ್ತಿದ್ದಾರೆ.ಕೇರಳದ ಸಂಸದರು ಶಾಸಕರ ಒತ್ತಾಯಕ್ಕೆ ಕರ್ನಾಟಕ ಸರ್ಕಾರ ಕಟ್ಟು ಬಿದ್ದಿದೆ.

ಈ ಶರಣಾಗತಿ ಸರಿಯಲ್ಲ. ಪುನರ್ವಸತಿ ಕಲ್ಪಿಸುವ ಬಗ್ಗೆ ನಮ್ಮ ಆಕ್ಷೇಪ ಅಲ್ಲ.ಆದರೆ ಕೇರಳ ಸರ್ಕಾರದ ಒತ್ತಾಯಕ್ಕೆ ಮಣಿಯುವುದು ಆತಂಕಕಾರಿ. ಇನ್ನೊಂದೆಡೆ ಮಹಾರಾಷ್ಟ್ರದವರು ಬಂದು ಕರ್ನಾಟಕದಲ್ಲಿ ಡ್ರಗ್ಸ್ ಸೀಜ್ ಮಾಡುತ್ತಾರೆ.ಒಟ್ಟಾರೆ ಕರ್ನಾಟಕ ಸರ್ಕಾರ ಅಭದ್ರವಾಗಿದೆ. ಬೇರೆಯವರ ಆದೇಶಕ್ಕೆ ಕರ್ನಾಟಕ ಸರ್ಕಾರ ಮಣಿದಿದೆ.ಇದು ಕರ್ನಾಟಕ ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
