ಉಡುಪಿ: ಸಂಸತ್ ಅಧಿವೇಶನದಲ್ಲಿ ಗೋ ಸಂರಕ್ಷಣಾ ಕಾಯ್ದೆ 2020 ತಿದ್ದುಪಡಿಗೆ ಮುಂದಾದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಶ್ವ ಹಿಂದೂ ಪರಿಷತ್ ಗೋರಕ್ಷಾ ವಿಭಾಗ ಕರ್ನಾಟಕ ದಕ್ಷಿಣ ಮುಖ್ಯಸ್ಥ ಸುನಿಲ್ ಕೆ ಆರ್ ಅವರು ಕಿಡಿ ಕಾರಿದ್ದಾರೆ.
ಇಂದು ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು. ಗೋ ಕಳ್ಳರಿಗೆ ಸಹಕರಿಸುವ ನೀತಿ ಇದಾಗಿದ್ದು ಗೋ ಸಂರಕ್ಷಣಾ ಕಾಯ್ದೆ ಸಡಿಲಗೊಳಿಸಿ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ ಕ್ಯಾಬಿನೆಟ್ ಸಭೆಯಲ್ಲಿ ಈ ವಿಚಾರ ಪಾಸ್ ಆಗಿದೆ ತಿದ್ದುಪಡಿಯನ್ನು ತಕ್ಷಣ ಹಿಂದಕ್ಕೆ ಪಡೆಯಿರಿ ಇಲ್ಲದಿದ್ದರೆ ಸೋಮವಾರ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಹಾಗೆ ಕಾಯ್ದೆಯ ಸೆಕ್ಷನ್ 8 ರ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅವಕಾಶ ಇತ್ತು ಅಕ್ರಮ ಗೋ ಸಾಗಾಟ ವಾಹನ ವಶಪಡಿಸಿಕೊಂಡಾಗ, ಬ್ಯಾಂಕ್ ಗ್ಯಾರಂಟಿ ಕೊಡಬೇಕಾಗಿತ್ತು ವಾಹನದ ಮೌಲ್ಯದಷ್ಟೇ ಬ್ಯಾಂಕ್ ಗ್ಯಾರಂಟಿ ಕೊಟ್ಟರೆ ತಾತ್ಕಾಲಿಕ ಬಿಡುಗಡೆಗೆ ಅವಕಾಶವಿತ್ತು ಪ್ರಕರಣದ ಅಪರಾಧ ಸಾಬೀತಾದರೆ ವಾಹನ ವಾಪಸ್ ತಂದು ಸರಕಾರ ಮುಟ್ಟುಗೋಲು ಹಾಕುತ್ತಿತ್ತು ತಪ್ಪಿದಲ್ಲಿ ಬ್ಯಾಂಕ್ ಗ್ಯಾರಂಟಿ ಹಣವನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಿತ್ತು ಇದರಿಂದ ಅಕ್ರಮ ಗೋ ಸಾಗಾಟಕ್ಕೆ ಕರಾವಳಿ ಭಾಗದಲ್ಲಿ ಕಡಿವಾಣ ಬಿದ್ದಿದೆ ಈ ಷರತ್ತಿನಿಂದ ಕೋ ವಂಶದ ರಕ್ಷಣೆಗೆ ಕಾರಣವಾಗಿದೆ ಈ ಬ್ಯಾಂಕ್ ಗ್ಯಾರಂಟಿ ಸಿಸ್ಟಮ್ ವಾಪಾಸು ಪಡೆಯಲು ಸರ್ಕಾರ ಮುಂದಾಗಿದೆ ಬ್ಯಾಂಕ್ ಗ್ಯಾರಂಟಿ ಕೊಡಲು ಗೋ ಕಳ್ಳರಿಗೆ ಕಷ್ಟವಾಗುತ್ತದೆ ಎಂದು ಅಸಂಬದ್ಧ ನೆಪ ಒಡ್ಡಲಾಗಿದೆ
ಇದರಿಂದ ಪೊಲೀಸ್ ಇಲಾಖೆ ಬಲಹೀನಗೊಳ್ಳಲಿದೆ ಗೋ ಸಾಗಾಟಗಾರರ ಮೇಲೆ ಸಿದ್ದರಾಮಯ್ಯಗೆ ಯಾಕಿಷ್ಟು ಪ್ರೀತಿ? ಮಂಗಳೂರು ಭೇಟಿ ಸಂದರ್ಭಗಳಲ್ಲಿ ಗೋ ಕಳ್ಳರ ಮಾಫಿಯಾ ಸಿಎಂ ಗೆ ಮನವಿ ಮಾಡಿರಬೇಕು ಇದರಿಂದಾಗಿ ಸರ್ಕಾರ ಈ ನಿರ್ಧಾರ ಕೈಗೊಳ್ಳುತ್ತಿದೆ ಗೋ ಕಳ್ಳ ಸಾಗಣೆದಾರರೊಂದಿಗೆ ನಾವಿದ್ದೇವೆ ಎನ್ನುತ್ತಿದೆ ಇದರಿಂದ ಗೋವುಗಳ ಅಕ್ರಮ ಸಾಗಾಟ ಹೆಚ್ಚಾಗಲಿದೆತಿದ್ದುಪಡಿಯಿಂದ ರಾಜ್ಯದ ಜನರನ್ನು ಉದ್ವಿಗ್ನಗೊಳಿಸಲು ಸರಕಾರ ಪ್ರಚೋದನೆ ನೀಡಿದೆ ಈ ತಿದ್ದುಪಡಿಯನ್ನು ತಕ್ಷಣ ಹಿಂಪಡೆಯಲು ಒತ್ತಾಯಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೋಮವಾರ ಪ್ರತಿಭಟನೆ ಮಾಡುತ್ತೇವೆ ಎಂದರು.
ತದಾನಂತರ ದ್ವೇಷ ಭಾಷಣ ವಿರುದ್ಧ ಕಠಿಣ ಕಾನೂನು ಕ್ರಮ ವಿಚಾರ ಬಗ್ಗೆಯೂ ಮಾತನಾಡಿ, ಇದು ಸತ್ಯ ಹೇಳಲು ಹೊರಟ ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ನೀತಿ ಹಿಂದೂ ಸಂಘಟನೆಗಳನ್ನು ರಾಜ್ಯ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದು ಆಖ್ರೋಶ ವ್ಯಕ್ತಪಡಿಸಿದರು.
