ಮೂಡಿಗೆರೆ : ನಿರಾಶ್ರಿತರ ಧರಣಿ ಪ್ರದೇಶಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪಿಡಿಒ ಗಳು ಬಂದು ನೀವು ತಕ್ಷಣವೇ ತೆರವುಗೊಳಿಸಿ ಇಲ್ಲದಿದ್ದರೆ ನಿಮ್ಮ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಕೆ ಹಾಕಿದ್ದು ವಸತಿ ರಹಿತರ ಮೇಲೆ ಗೂಂಢಾವರ್ತನೆ ಅನುಸರಿಸುತ್ತಿದ್ದಾರೆ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪಿಡಿಒ ಮೇಲೆ ಕ್ರಮ ಜರುಗಿಸುವಂತೆ ಕೆಪಿಟಿಸಿಎಲ್ ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಡ ಉಪ್ಪಳ್ಳಿ ಭರತ್ ಒತ್ತಾಯಿಸಿದರು.
ಮೂಡಿಗೆರೆ ತಾಲ್ಲೂಕು ಆಢಳಿತಸೌಧದ ಮುಂದೆ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಮತ್ತು ವಸತಿಗಾಗಿ ಹೋರಾಟ ವೇದಿಕೆ ಗೋಣಿಬೀಡು ಹೋಬಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. 1995 ನೇ ಇಸವಿಯಲ್ಲಿ ಮಣ್ಣಿಕೆರೆ ಸರ್ವೆನಂ 144 ರಲ್ಲಿ ನಿರಾಶ್ರಿತರಿಗೆ ಸರ್ಕಾರದಿಂದ ಐದುವರೆ ಎಕ್ರೆ ಜಮೀನನ್ನು ನಿಗದಿ ಪಡಿಸಿದ್ದು. ಅಲ್ಲಿಂದ ಇಲ್ಲಿಯವರೆಗೂ ವಿಂಗಡನೆ ಮಾಡಿ ವಿವರಣೆ ಮಾಡದೆ ಇರುವುದು ಹಲವು ಅನುಮಾನಗಳಿಗೆಎಡೆ ಮಾಡಿಕೊಟ್ಟಿದೆ. ಅವರು.ಕಳೆದ 27 ದಿನಗಳ ಹಿಂದೆ ವಸತಿ ರಹಿತರು ವಸತಿ ನೀಡುವಂತೆ ಒತ್ತಾಯಿಸಿ ಹೋರಾಟ ಪ್ರಾರಂಭಿಸಿದರು. ಹೋರಾಟಕ್ಕೆ ಮಣಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಿರಾಶ್ರಿತರಿಂದ ಮನವಿಯನ್ನು ಸ್ವಿಕರಿಸಿ ಜೆಸಿಬಿ ಯಂತ್ರದ ಮೂಲಕ ಜಾಗವನ್ನು ಸಮತಟ್ಟು ಮಾಡಿಸಿದರು. ಕಳೆದ ಮೂರು ದಿನಗಳಿಂದ ಈ ಹೋರಾಟದ ದಿಕ್ಕನ್ನು ತಪ್ಪಿಸುವ ಸಲುವಾಗಿ ಕೆಲವೊಂದು ಕಾಣದ ಕೈಗಳು ಕೆಲಸ ಪ್ರಾರಂಬಿಸಿದ್ದು. ಹಣಭಲವೋ, ಅಧಿಕಾರ ಭಲವೋ ತಿಳಿಯದಾಗಿದೆ. ಅದಕ್ಕೆ ಅಧಿಕಾರಿಗಳು ಉತ್ತರ ಕೊಡಬೇಕಾಗಿದೆ.
ತಹಸೀಲ್ದಾರರು ವಸತಿ ರಹಿತರಿಗೆ ಕೆಲಸಮಾಡುತ್ತಿದ್ದರೆ ತಹಸೀಲ್ದಾರರು ತೆರವುಗೊಳಿಸಿ ಎಂದು ಎಲ್ಲಿಯೂ ಹೇಳಿಲ್ಲಾ ಆದರೆ ಕಾರ್ಯನಿರ್ವಾಹಕ ಅಧಿಕಾರಿಗಳು ತೆರವುಗೊಳಿಸಿ ಎನ್ನುತ್ತಿರುವುದು ಗೊಂದಲಗಳು ಉಂಟು ಮಾಡಿದೆ ಎಂದರು. ಜೂನ್ ೪ ರಂದು ತಹಸೀಲ್ದಾರ್ ಆ ಜಾಗಕ್ಕೆ ಭೇಟಿ ನೀಡಿ ಜೂನ್ ೬ ರಿಂದ ಜೆಸಿಬಿ ಮೂಲಕ ಸಮತಟ್ಟು ಮಾಡಿಸುತ್ತಿದ್ದರೆ ಆದರೆ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪಿಡಿಒ ಪ್ಲಕ್ಸ್ ಹಾಕಿ ಅನಧಿಕೃತ ಪ್ರವೇಶ ಮಾಡಿದವರಿಗೆ ಎಫ್‌ಐ ಆರ್ ಹಾಕುತ್ತೀವಿ ಎಂದು ತಿಳಿಸಿದ್ದು ಇದು ಎಷ್ಟು ಸರಿ ಎಂದರು.
ಕಾರ್ಯನಿವಾಹಕ ಅಧಿಕಾರಿ ಮತ್ತು ಪಿಡಿಓ ಒಂದು ವಾರದೊಳಗೆ ಬಹಿರಂಗ ಕ್ಷಮೆ ಯಾಚಿಸದೆ ಇದ್ದಲ್ಲಿ ಅವರ ಮೇಲೆ ತಾವು ಎಫ್ ಐ ಆರ್ ಹಾಕು ಸಿದ್ದತೆ ನಡೆಸಿರುವುದಾಗಿ ತಿಳಿಸಿದರು. ನಂತರ ಮನವಿಪತ್ರವನ್ನು ಉಪ ತಹಸೀಲ್ದಾರರಿಗೆ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ವಸತಿಹೀನರ ಹೋರಾಟ ಸಮಿತಿಯ ಗೌರವಾಧ್ಯಕ್ಷ ರುದ್ರಯ್ಯ, ಜಿಲ್ಲಾಧ್ಯಕ್ಷ ಕೃಷ್ಣಪ್ಪ ಕೆ.ಕೆ., ರಮೇಶ್ ಕೆಳಗೂರು, ಜಯಕುಮಾರ್ ಹಾಡಿಗೆ,ಶೇಖರ್ ಹೊಸಳ್ಳಿ, ಸವಿತ,ಮೇರಿ,,ಸಖೀನ, ರೋಜ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು
