Sunday, July 26, 2026
Homeಜಿಲ್ಲಾಸುದ್ದಿಬಣಕಲ್ ಹೋಬಳಿ ಮಿಲಾದ್ ಟ್ರಸ್ಟ್‌ಗೆ ನೂತನ ಅಧ್ಯಕ್ಷರಾಗಿ ಝಾಕೀರ್ ಹುಸೇನ್ ನೇಮಕ

ಬಣಕಲ್ ಹೋಬಳಿ ಮಿಲಾದ್ ಟ್ರಸ್ಟ್‌ಗೆ ನೂತನ ಅಧ್ಯಕ್ಷರಾಗಿ ಝಾಕೀರ್ ಹುಸೇನ್ ನೇಮಕ

Telegram Group
Join Now

ಕೊಟ್ಟಿಗೆಹಾರ : ಬಣಕಲ್ ಹೋಬಳಿ ಮಿಲಾದ್ ಟ್ರಸ್ಟ್‌ಗೆ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
ನಡೆಯಿತು.

ಸಭೆಯಲ್ಲಿ ಟ್ರಸ್ಟ್‌ನ ಸದಸ್ಯರು ಸರ್ವಾನುಮತದೊಂದಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ನೂತನ ಅಧ್ಯಕ್ಷರಾಗಿ ಜಾಕೀರ್ ಹುಸೇನ್, ಕಾರ್ಯಾಧ್ಯಕ್ಷರಾಗಿ ಹಂಝ ಬಣಕಲ್, ಗೌರವ ಅಧ್ಯಕ್ಷರಾಗಿ ಅಸ್ಘರ್ ಅಹಮದ್ ಬಣಕಲ್, ಇಬ್ರಾಹಿಂ ಹಾಜಿ ಚಕ್ ಮಕ್ಕಿ ಹಾಗೂ ಅಯ್ಯುಬ್ ಹಾಜಿ ಚಕ್ ಮಕ್ಕಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಮೊಹಮ್ಮದ್ ಆಲಿ, ಸಿದ್ದಿಕ್ ಹಳಿಕೆ, ರಫೀಕ್ ಬಣಕಲ್ ಹಾಗೂ ಜಾಕೀರ್ ಅಲಿ ಬಣಕಲ್, ಪ್ರಧಾನ ಕಾರ್ಯದರ್ಶಿಯಾಗಿ ಎ.ಎಂ. ಹಸನ್ ಹಾಜಿ, ಕೊಟ್ಟಿಗೆಹಾರ, ಸಹ ಕಾರ್ಯದರ್ಶಿಗಳಾಗಿ ಫಾರುಖ್ ಹಾಗೂ ಅಕ್ಬರ್ ಅಲಿ, ಕೋಶಾಧಿಕಾರಿಯಾಗಿ ಮುಂತು ಹಾಜಿ, ಸಬ್ಬೆನಹಳ್ಳಿ ಆಯ್ಕೆಯಾದರು. ಟ್ರಸ್ಟಿಗಳಾಗಿ ಶಂಶುದ್ದಿನ್, ಅನೀಸ್ ಹಾಗೂ ಬಾಬರ್ ಆಯ್ಕೆಯಾಗಿದ್ದು, ನೂತನ ಸಮಿತಿಗೆ ಸಭೆಯಲ್ಲಿ ಸದಸ್ಯರು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಜಾಕೀರ್ ಹುಸೇನ್, ಟ್ರಸ್ಟ್‌ನ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ, ಶಿಸ್ತು ಮತ್ತು ಎಲ್ಲರ ಸಹಭಾಗಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು. ಸಮಾಜದ ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಿ, ಹಿರಿಯರ ಅನುಭವ ಮತ್ತು ಯುವಕರ ಉತ್ಸಾಹವನ್ನು ಒಗ್ಗೂಡಿಸಿಕೊಂಡು ಟ್ರಸ್ಟ್‌ನ್ನು ಅಭಿವೃದ್ಧಿಯ ಹೊಸ ಹಾದಿಯತ್ತ ಕೊಂಡೊಯ್ಯಲು ನೂತನ ಸಮಿತಿ ಬದ್ಧವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಟ್ರಸ್ಟ್‌ನ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments