Wednesday, February 18, 2026
Homeಶಿಕ್ಷಣಚಿಕ್ಕಮಗಳೂರು: ಜೆಇಇ ಮೈನ್ ಫಲಿತಾಂಶ ಪ್ರಕಟ: ಸೇಂಟ್ ಮೇರಿಸ್ ಐಎಸ್‌ಸಿ ಕಾಲೇಜಿನ ವಿದ್ಯಾರ್ಥಿಗಳಿಂದ ಉತ್ತಮ ರಿಸಲ್ಟ್!

ಚಿಕ್ಕಮಗಳೂರು: ಜೆಇಇ ಮೈನ್ ಫಲಿತಾಂಶ ಪ್ರಕಟ: ಸೇಂಟ್ ಮೇರಿಸ್ ಐಎಸ್‌ಸಿ ಕಾಲೇಜಿನ ವಿದ್ಯಾರ್ಥಿಗಳಿಂದ ಉತ್ತಮ ರಿಸಲ್ಟ್!

ಚಿಕ್ಕಮಗಳೂರು: ಜೆಇಇ ಮೈನ್ ಫಲಿತಾಂಶ ಪ್ರಕಟವಾಗಿದ್ದು, ಚಿಕ್ಕಮಗಳೂರು ಸೇಂಟ್ ಮೇರಿಸ್ ಐಎಸ್‌ಸಿ ಕಾಲೇಜಿನ ವಿದ್ಯಾರ್ಥಿಗಳು ಈ ವರ್ಷವೂ ಉತ್ತಮ ಫಲಿತಾಂಶ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಗೆ ಸೇಂಟ್ ಮೇರಿಸ್ ಐಎಸ್‌ಸಿ ಕಾಲೇಜಿನ ವಿದ್ಯಾರ್ಥಿಗಳು ಟಾಪರ್ ಗಳಾಗಿದ್ದಾರೆ. ಸಂಸ್ಥೆಯ ವಿದ್ಯಾರ್ಥಿ ಕೆವಿನ್ ರೋಡಿಗ್ರಸ್ ಅವರು 99.78 ಪರ್ಸಂಟೈಲ್ ಪಡೆದು, ಟಾಪ್ 1 ಆಗಿದ್ರೆ, ಝೇಂಕಾರ್ ಬಿ.ಆರ್ ಅವರು 99.61 ಪರ್ಸೆಂಟೇಜ್ ಪಡೆದು ಜಿಲ್ಲೆಗೆ ಸೆಕೆಂಡ್ ಟಾಪರ್ ಆಗಿದ್ದಾರೆ.

ಇನ್ನೂ ಸಾದಿಯಾ ಶಾಹ್ವನ್ 98.22 ಹಾಗೂ ಗೋಕುಲ್ ಬಿ.ಎಸ್ 98.22, ತಮನ್ ಸರ್ವಜಿತ್ ಎಂ.ಆರ್ 95.71 ಹಾಗೂ ಮೋಹಿತ್ ಹೆಚ್.ಬಿ 95.5 ಪರ್ಸೆಂಟೇಜ್ ಪಡೆದು ಕಾಲೇಜಿಗೆ ಹಾಗೆಯೇ ಚಿಕ್ಕಮಗಲೂರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅತ್ಯುತ್ತಮ ‌ಫ್ಯಾಕಲ್ಟಿಯನ್ನ ಹೊಂದಿರೋ ಸೇಂಟ್ ಮೇರಿಸ್ ಕಾಲೇಜಿನಲ್ಲಿ ದಾಖಲೆಯ ಫಲಿತಾಂಶ ಬಂದಿರೋದು, ಕಾಲೇಜಿಗೆ ಶ್ರೇಷ್ಟತೆಯನ್ನ ಸಹಜವಾಗಿಯೇ ಹೆಚ್ಚು ಮಾಡಿದಂತಾಗಿದೆ.

ಕಾಲೇಜಿನ ಆಡಳಿತ ಮಂಡಳಿ, ಬೋಧಕ ವರ್ಗ, ಭೋದಕೇತರ ವರ್ಗದವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನೂ ಕಾಲೇಜಿನ ಸಂಸ್ಥಾಪಕ ಜೆರಾಲ್ಡ್ ಲೋಬೋ ಅವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ, ಖುದ್ದು ತಾವೇ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡೋದ್ರ ಮೂಲಕ ಬೆನ್ನುತಟ್ಟಿದ್ದಾರೆ..

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!