Wednesday, March 25, 2026
Homeವಿದೇಶಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಹತ್ಯೆ: ಕಳೆದ 18 ದಿನಗಳಲ್ಲಿ 6 ಬಲಿ, 24 ಗಂಟೆಯೊಳಗೆ ಇಬ್ಬರ...

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಹತ್ಯೆ: ಕಳೆದ 18 ದಿನಗಳಲ್ಲಿ 6 ಬಲಿ, 24 ಗಂಟೆಯೊಳಗೆ ಇಬ್ಬರ ಭೀಕರ ಕೊಲೆ

ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ಹಲ್ಲೆ ಮತ್ತು ಹತ್ಯೆಯ ಸರಣಿ ಮುಂದುವರಿಯುತ್ತಿದ್ದು, ಪರಿಸ್ಥಿತಿ ಆತಂಕಕಾರಿಯಾಗಿದೆ. ಕಳೆದ 18 ದಿನಗಳ ಅವಧಿಯಲ್ಲಿ 6 ಹಿಂದೂಗಳನ್ನು ಹತ್ಯೆ ಮಾಡಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಇಬ್ಬರು ಹಿಂದೂ ಯುವಕರು ದುಷ್ಕರ್ಮಿಗಳ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿದ್ದಾರೆ.

ಶರತ್ ಚಕ್ರವರ್ತಿ ಮೋನಿ ಹತ್ಯೆ 

ಸೋಮವಾರ ರಾತ್ರಿ 10 ಗಂಟೆಯ ಸುಮಾರಿಗೆ ನರಸಿಂಗ್ಡಿ ಜಿಲ್ಲೆಯ ಚೋರ್ಸಿಂದೂರ್ ಬಜಾರ್‌ನಲ್ಲಿ ದಿನಸಿ ಅಂಗಡಿ ಮಾಲೀಕರಾದ ಶರತ್ ಚಕ್ರವರ್ತಿ ಮೋನಿ ಅವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಲಾಗಿದೆ. ರಾಜಧಾನಿ ಢಾಕಾಗೆ ಸಮೀಪದಲ್ಲೇ ನಡೆದ ಈ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೋನಿ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪತ್ರಕರ್ತ ರಾಣಾ ಪ್ರತಾಪ್ ಬೈರಾಗಿ ಅವರ ಕ್ರೂರ ಕೊಲೆ 

ಇದೇ ಸೋಮವಾರ ಸಂಜೆ ಜಶೋರ್ ಜಿಲ್ಲೆಯ ಕೊಪಾಲಿಯಾ ಬಜಾರ್‌ನಲ್ಲಿ ಐಸ್ ಕಾರ್ಖಾನೆ ಮಾಲೀಕ ಹಾಗೂ ದಿನಪತ್ರಿಕೆಯೊಂದರ ಕಾರ್ಯನಿರ್ವಾಹಕ ಸಂಪಾದಕ ರಾಣಾ ಪ್ರತಾಪ್ ಬೈರಾಗಿ (45) ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಕಾರ್ಖಾನೆಯಿಂದ ಹೊರಗೆಳೆದು ತಲೆಗೆ ಗುಂಡು ಹಾರಿಸಿದ್ದಲ್ಲದೆ, ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾರೆ.

ಸತತ ಹತ್ಯೆಗಳ ಸರಣಿ: ಕಳೆದ 18 ದಿನಗಳ ಕರಾಳ ನೆರಳು 

ಡಿಸೆಂಬರ್ ಅಂತ್ಯದಿಂದ ಜನವರಿ ಮೊದಲ ವಾರದವರೆಗೆ ಬಾಂಗ್ಲಾದೇಶದಾದ್ಯಂತ ಹಿಂದೂಗಳ ಮೇಲೆ ವ್ಯವಸ್ಥಿತ ದಾಳಿಗಳು ನಡೆಯುತ್ತಿವೆ.

  • ಡಿಸೆಂಬರ್ 18, 2025: ದೇವನಿಂದನೆ ಆರೋಪದಲ್ಲಿ ದೀಪು ಚಂದ್ರ ದಾಸ್ ಅವರನ್ನು ಗುಂಪು ದಾಳಿ ನಡೆಸಿ ಸುಟ್ಟು ಹಾಕಲಾಯಿತು.
  • ಡಿಸೆಂಬರ್ 24, 2025: ರಾಜ್‌ಬರಿ ಪ್ರದೇಶದಲ್ಲಿ ಅಮೃತ ಮಂಡಲ್ ಹತ್ಯೆ.
  • ಡಿಸೆಂಬರ್ 30-31, 2025: ಮೈಮೆನ್‌ಸಿಂಗ್ ಪ್ರದೇಶದಲ್ಲಿ ಬಜೇಂದ್ರ ಬಿಸ್ವಾಸ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.
  • ಡಿಸೆಂಬರ್ 31, 2025: ವ್ಯಾಪಾರಿ ಖೋಕನ್ ಚಂದ್ರ ದಾಸ್ ಅವರನ್ನು ಚಾಕುವಿನಿಂದ ಇರಿದು, ನಂತರ ಸುಟ್ಟು ಹಾಕಲಾಯಿತು.

ಜಾಗತಿಕ ಮಟ್ಟದಲ್ಲಿ ಈ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಬಾಂಗ್ಲಾದೇಶ ಸರ್ಕಾರವು ಇವೆಲ್ಲವೂ ವೈಯಕ್ತಿಕ ವೈಷಮ್ಯದಿಂದ ನಡೆದ ಕೊಲೆಗಳು ಎಂದು ಹೇಳುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಈ ಘಟನೆಗಳು ಅಲ್ಲಿನ ಹಿಂದೂ ಅಲ್ಪಸಂಖ್ಯಾತರಲ್ಲಿ ತೀವ್ರ ಭೀತಿಯನ್ನು ಮೂಡಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!