Thursday, July 30, 2026
Homeಇತರೆಫ್ಲೈಟ್ ರದ್ದು, ಕುವೈತ್ ನಲ್ಲಿ ಸಿಕ್ಕಿಕೊಂಡ ಶೃಂಗೇರಿಯ 7 ತಿಂಗಳ ಗರ್ಭಿಣಿ & ಬಾಲಕಿ: ಇಬ್ಬರ...

ಫ್ಲೈಟ್ ರದ್ದು, ಕುವೈತ್ ನಲ್ಲಿ ಸಿಕ್ಕಿಕೊಂಡ ಶೃಂಗೇರಿಯ 7 ತಿಂಗಳ ಗರ್ಭಿಣಿ & ಬಾಲಕಿ: ಇಬ್ಬರ ಸುರಕ್ಷತೆಗೆ ಸುಧಾಕರ್ ಶೆಟ್ರು ಮಾಡಿದ್ದೇನು ಗೊತ್ತಾ..?

Telegram Group
Join Now

ಪಬ್ಲಿಕ್ ಇಂಪ್ಯಾಕ್ಟ್ ಡೆಸ್ಕ್: ಇಸ್ರೆಲ್-ಇರಾನ್ ಮಧ್ಯೆ ಮಹಾಯುದ್ಧ ನಡಿತೀರೋದು ಎಲ್ಲರಿಗೂ ಗೊತ್ತಿದೆ. ಹಾಗಂತ ಈ ಯುದ್ಧ ಕೇವಲ ಇರಾನ್-ಇಸ್ರೇಲ್ ಗೆ ಮಾತ್ರ ಸಮಸ್ಯೆಯನ್ನ ತಂದೊಡ್ತಿಲ್ಲ. ಬದಲಾಗಿ ಭಾರತ ಸೇರಿದಂತೆ ಪ್ರಪಂಚದ ಇತರ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತಿದೆ. ಇನ್ನೂ ಇರಾನ್ ಗೆ ಅಂಟಿಕೊಂಡೇ ಇರುವ ಕುವೈತ್ ದೇಶಕ್ಕೂ ಈ ಯುದ್ದ ಮಗ್ಗುಲ ಮುಳ್ಳಾಗಿ ಕಾಡುತ್ತಿದೆ. ಅಲ್ಲಿರುವ ದೇಶವಾಸಿಗಳು ಸೇರಿದಂತೆ ಇತರ ದೇಶಗಳ ಜನರು ಆತಂಕದಿಂದಲೇ ಬದುಕುವಂತಾಗಿದೆ.ಈ ಮಧ್ಯೆ ಶೃಂಗೇರಿಯ ಕುಟುಂಬವೊಂದು ಕುವೈತ್ ನಲ್ಲಿ ಸಿಲುಕಿಕೊಂಡು ವ್ಯಥೆ ಪಡುವಂಯತಾಗಿದೆ. ಭಾರತಕ್ಕೆ ಮರಳು ಮಾರ್ಚ್ 8ರಂದು ಟಿಕೆಟ್ ಬುಕ್ ಮಾಡಿದ್ದರು. ಆದರೆ ಯುದ್ದದ ಕಾರ್ಮೋಡದಿಂದ ಟಿಕೆಟ್ ರದ್ದಾಗಿ ಅಲ್ಲೇ ಉಳಿದುಕೊಳ್ಳುವಂತಾಗಿದೆ. ಟಿಕೆಟ್ ರದ್ದಾದ ಪರಿಣಾಮ 7 ತಿಂಗಳ ಗರ್ಭೀಣಿ ಅಪೂರ್ವ ಎಂಬುವವರು, ತನ್ನ 6 ವರ್ಷದ ಮಗಳು ಆಯುಷಿ ಜೊತೆ ಯಾವುದೇ ಸೂಕ್ತ ವ್ಯವಸ್ಥೆ, ಸುರಕ್ಷತೆ ಇಲ್ಲದೇ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ

ಗರ್ಭಿಣಿ, ಪುಟ್ಟ ಬಾಲಕಿ ಸುರಕ್ಷತೆಗೆ ಸುಧಾಕರ್ ಶೆಟ್ಟಿ ಮಾಡಿದ್ದೇನು ಗೊತ್ತಾ..?
ಹೌದು, ಶೃಂಗೇರಿ ನಿವಾಸಿಯಾಗಿರುವ ಶ್ರೀ ಜೆ ಗಿರಿಧರ್ ಅವರ ಪುತ್ರಿ ಅಪೂರ್ವ, ಮೊಮ್ಮಗಳು ಆಯುಷಿ ಜೊತೆ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ವಿಚಾರ ಗೊತ್ತಾಗುತ್ತಲೇ ಶೃಂಗೇರಿ ಕ್ಷೇತ್ರದ ಜೆಡಿಎಸ್ ಮುಖಂಡರು, ಜೆಡಿಎಸ್ ರಾಷ್ಟ್ರೀಯ ವಕ್ತಾರರು ಆದ ಸುಧಾಕರ್ ಶೆಟ್ಟಿ ಅವರು, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಜೊತೆ ಪತ್ರ ವ್ಯವಹಾರ ನಡೆಸಿ, ವಿಚಾರವನ್ನ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಹೆಚ್ಡಿಕೆ, ಕುವೈತ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಅಲ್ಲಿಂದಲೂ ಅಷ್ಟೇ ತ್ವರಿತಗತಿಯಾಗಿ ಸ್ಪಂದಿಸಿ, ಗರ್ಭಿಣಿ ಅಪೂರ್ವ ಹಾಗೂ ಅವರ ಮಗಳಾದ ಆಯುಷಿಯನ್ನ ಸಂಪರ್ಕ ಮಾಡಿ ಅವರಿಗೆ ಬೇಕಾದ ಎಲ್ಲಾ ಸುರಕ್ಷತೆಯನ್ನ ಕುವೈತ್ ಸರ್ಕಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ತಕ್ಷಣ ಭಾರತಕ್ಕೆ ಕಲಿಸಲು ವ್ಯವಸ್ಥೆ ಮಾಡುತ್ತೇವೆ-ಭಾರತೀಯ ರಾಯಭಾರಿ ಕಚೇರಿ, ಕುವೈತ್
ಯೆಸ್, ಸದ್ಯ ಅಪೂರ್ವ ಹಾಗೂ ಆಯುಷಿಗೆ ಸೂಕ್ತ ವ್ಯವಸ್ಥೆಯನ್ನ ಕಲ್ಪಿಸಿಕೊಟ್ಟಿರುವ ಕುವೈತ್ ಸರ್ಕಾರ, ತಾಯಿ-ಮಗಳು ಇಬ್ಬರು ಭಾರತಕ್ಕೆ ಮರಳಲು ಸೂಕ್ತ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ವಿಚಾರ ವಿನಿಮಯ ಇಂದು ಕೇವಲ ಒಂದೂವರೆ ಗಂಟೆಯಿಂದ ಎರಡು ಗಂಟೆಯೊಳಗೆ ನಡೆದಿದೆ. ಆತಂಕದಲ್ಲೇ ಪ್ರತಿಕ್ಷಣಗಳನ್ನ ಎದುರಿಸುತ್ತಿದ್ದ ಗರ್ಭೀಣಿ ಅಪೂರ್ವ ಹಾಗೂ ಮಗಳು ಆಯುಷಿಗೂ ಕುಮಾರಸ್ವಾಮಿ ಅವರ ಸ್ಪಂದನೆಯಿಂದ ಸಂತಸ ಸಿಕ್ಕಿದೆ. ತತ್‌ಕ್ಷಣ ಈ ರೀತಿಯ ಸೂಕ್ತ ವ್ಯವಸ್ಥೆ ಮಾಡಿಸಿಕೊಟ್ಟಿದ್ದಕ್ಕಾಗಿ ಅಪೂರ್ವ ತಂದೆ ಜೆ ಗಿರಿಧರ್ ಅವರು ಸುಧಾಕರ್ ಶೆಟ್ಟಿ ಅವರಿಗೆ ಧನ್ಯವಾದ ತಿಳಿಸಿದ್ದಲ್ಲದೇ ಸದ್ಯ ನಾವು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಅಂತಾ ಹೇಳಿದ್ದಾರೆ. ಸದ್ಯ ತಾಯಿ-ಮಗಳು ಸೇಫ್ ಆಗಿದ್ದು, ಸದ್ಯದಲ್ಲೇ ಭಾರತಕ್ಕೆ ಮರಳಲಿದ್ದಾರೆ..

ಪ್ರಶಾಂತ್ ಮೂಡ್ಗೆರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments